   : ನಾಳೆ ಉಚಿತ ರೇಡಿಯೋ ಜಾಕಿ ತರಬೇತಿ ಕಾರ್ಯಾಗಾರ ಉದ್ಘಾಟನೆ
ತುಮಕೂರು:ತುಮಕೂರಿನ ಮೊಟ್ಟ ಮೊದಲ ಸಮುದಾಯ ಬಾನುಲಿ ಕೇಂದ್ರ ರೇಡಿಯೋ() ಸಿದ್ಧಾರ್ಥ 90.8 ಸಿಆರ್‌ಎಸ್ ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ 7 ದಿನಗಳ ಉಚಿತ ರೇಡಿಯೋ ಜಾಕಿ ತರಬೇತಿ ಕಾರ್ಯಾಗಾರದ () ಉದ್ಘಾಟನೆಯನ್ನು ಸೆ.9ರಂದು ಆಯೋಜಿಸಲಾಗಿದೆ.
ಬೆಳಗ್ಗೆ 10.30ಕ್ಕೆ ಉಚಿತ ರೇಡಿಯೋ ಜಾಕಿ ತರಬೇತಿ ಕಾರ್ಯಾಗಾರವನ್ನು ಬೆಂಗಳೂರಿನ ಆಕಾಶವಾಣಿ ಕೇಂದ್ರದ ಹಿರಿಯ ಉದ್ಘೋಷಕಿ ಬಿ.ಕೆ. ಸುಮತಿ ಉದ್ಘಾಟಿಸಲಿದ್ದಾರೆ. ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶು ಪಾಲ ಡಾ.ಎಂ.ಎಸ್.ರವಿಪ್ರಕಾಶ ಮತ್ತು ಎಸ್‌ಎಸ್‌ಸಿಎಂಎಸ್‌ನ ಸಹಾಯಕ ಆಡಾಳಿತಾಧಿಕಾರಿ ಖಲಂದರ್ ಪಾಷ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ. ಮುದ್ದೇಶ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಾಗಾರದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಶ್ವೇತ ಎಂ.ಪಿ. ಎಸ್‌ಎಸ್‌ಸಿ ಎಂಎಸ್‌ನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಲಿದ್ದಾರೆ.
ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಆಸಕ್ತರು ಉಚಿತ ಕಾರ್ಯಾಗಾರದಲ್ಲಿ ಭಾಗವಹಿಸಲು ನೊಂದಾಯಿಸಿ ಕೊಂಡಿದ್ದಾರೆ.
ಸೆ.9ರಂದು ಪ್ರಾರಂಭವಾಗುವ ಕಾರ್ಯಾಗಾರ ಸೆ.17ರಂದು ಮುಕ್ತಾಯಗೊಳ್ಳಲಿದೆ. ಯಾವುದೇ ಪದವಿ ವ್ಯಾಸಂಗ ಮಾಡುತ್ತಿರುವವರಿಗೆ ಹಾಗೂ ಪದವಿ ಪೂರ್ಣಗೊಂಡವರಿಗೆ ಉಚಿತ ರೇಡಿಯೋ ಜಾಕಿ ತರಬೇತಿ ಕಾರ್ಯಾಗಾರ ನೀಡಲಾಗುತ್ತಿದೆ ಎಂದು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ. ಮುದ್ದೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.