  : ಬೆಂಗಳೂರು-ಕಲ್ಯಾಣ ಕರ್ನಾಟಕದ ಸಂಪರ್ಕ ಸಾಧಿಸಲು ಹೊಸ ಕಾರಿಡಾರ್‌ ಯೋಜನೆ…ಏನಿದರ ವಿಶೇಷತೆ?
ಬೆಂಗಳೂರು:ರಾಜಧಾನಿ ಬೆಂಗಳೂರು ( ) ಹಾಗೂ ಕಲ್ಯಾಣ ಕರ್ನಾಟಕ( )ದ ನಡುವೆ ಸಂಪರ್ಕ ಸಾಧಿಸಲು ರಾಜ್ಯ ಸರ್ಕಾರವು ಹೊಸ ಆರ್ಥಿಕ ಕಾರಿಡಾರ್‌ (  ) ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಈ ಯೋಜನೆಯ ಜವಾಬ್ದಾರಿಯನ್ನು ಮೊದಲ ಬಾರಿ ಪಿಡಬ್ಲ್ಯುಡಿ ಸಚಿವಾಲಯ( ) ಕ್ಕೆ ವಹಿಸಲಾಗಿದ್ದು, ಇದಕ್ಕೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ದಿ ಮಂಡಳಿ () ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ.
ಈ ನೂತನ ಕಾರಿಡಾರ್‌ ಯೋಜನೆಯು ಏಳು ಜಿಲ್ಲೆಗಳನ್ನು ಹಾದು ಹೋಗಲಿವೆ. ಅವು ಬೀದರ್‌() , ಕಲಬುರಗಿ() , ಯಾದಗಿರಿ() , ರಾಯಚೂರ್‌(), ಕೊಪ್ಪಳ(), ಬಳ್ಳಾರಿ() ಹಾಗೂ ವಿಜಯನಗರ() ಜಿಲ್ಲೆ ಜತೆಗೆ ಚಿತ್ರದುರ್ಗ(), ತುಮಕೂರು() ಹಾಗೂ ಬೆಂಗಳೂರು ಕೂಡ ಸೇರಿವೆ. ಈ ನಿಟ್ಟಿನಲ್ಲಿ ವರದಿ ತಯಾರಿಸಲು ಪಿಡಬ್ಲ್ಯುಡಿ ಸಚಿವಾಲಯ ಟೆಂಡರ್‌ ಕೂಡ ಕರೆದಿದೆ. ಈ ವರದಿ ಮುಖಾಂತರ ಕಾರಿಡಾರ್‌ ನಿರ್ಮಿಸಲು ಎಷ್ಟು ಭೂಮಿ ಬೇಕು? ಅದರಲ್ಲಿ ಭೂಸ್ವಾಧೀನ ವರದಿ ಹಾಗೂ ವೆಚ್ಚದ ಕುರಿತು ಸಮಗ್ರ ಚಿತ್ರಣ ಸಿಗಲಿದೆ.
ಗ್ರೀನ್‌ ಫೀಲ್ಡ್‌ ಎಕ್ಸ್‌ʼಪ್ರೆಸ್‌ (  )ನಿರ್ಮಾಣದ ಹೊಣೆಗಾರಿಕೆಯನ್ನು ಪಿಡಬ್ಲ್ಯುಡಿ ಸಚಿವಾಲಯವು ಮೊದಲ ಬಾರಿ ಹೊರಲಿದೆ. ಸದ್ಯ ರಾಷ್ಟ್ರೀಯ ಹೆದ್ದಾರಿ 50(  50)ರಲ್ಲಿ ಬೆಂಗಳೂರು ಹಾಗೂ ಬೀದರ್‌ ನಡುವಿನ ಸಂಚಾರಕ್ಕೆ 12 ರಿಂದ 14 ಗಂಟೆ ವ್ಯಯಿಸಬೇಕು. ಇದರಲ್ಲಿ ಮಹಾರಾಷ್ಟ್ರದ ನಾಂಡೇದ್‌ (  )ಹಾಗೂ ಕರ್ನಾಟಕದ ಚಿತ್ರದುರ್ಗ ಜಿಲ್ಲೆ() ಯಲ್ಲಿ ಸಂಪರ್ಕಿಸಬಹುದಾಗಿದೆ.
ಈ ಹೊಸ ಕಾರಿಡಾರ್‌(600 ಕಿಮೀ) ಯೋಜನೆಯಿಂದ, ಸರಕು ಸಾಗಣೆ ಮತ್ತು ಜನ ಸಂಚಾರವನ್ನು ಹೆಚ್ಚು ಸುರಕ್ಷತೆ, ದಕ್ಷತೆ ಹಾಗೂ ಪ್ರಯಾಣದ ವೆಚ್ಚ ಕಡಿಮೆ ಮಾಡಲಿದೆ ಎಂದು ಹೇಳಲಾಗಿದೆ. ಈ ಕಾರಿಡಾರ್‌ ನಿಂದ ಪ್ರಮುಖ ಕೈಗಾರಿಕಾ ವಲಯಗಳು, ಜಿಲ್ಲೆಗಳ ಕೇಂದ್ರ ಸ್ಥಾನಗಳು ಹಾಗೂ ಹಣಕಾಸು ಇಲಾಖೆಗಳಿಗೆ ಸಂಪರ್ಕ ಸಾಧಿಸಬಹುದು.
ಸರಕಾರವು, ರಾಜ್ಯ ಹೆದ್ದಾರಿ 104 ಅನ್ನು ಇನ್ನಷ್ಟು ಅಭಿವೃದ್ದಿಗೊಳಿಸುವತ್ತ ಯೋಜನೆ ರೂಪಿಸುತ್ತಿದೆ. ಈ 50 ಕಿಮೀ ಉದ್ದದ ಟೋಲ್‌ ಮುಕ್ತ ರಸ್ತೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(  ) ವನ್ನು ಸಂಪರ್ಕಿಸುತ್ತದೆ. ಈ ರಸ್ತೆಯಲ್ಲಿ ನಂದಿ ಬೆಟ್ಟ( ) ದ ಸಂಪರ್ಕ ಸಾಧ್ಯ. ಸದ್ಯ ಈ ರಸ್ತೆ ಪುನರ್‌ ನಿರ್ಮಾಣ( ) ವಾಗುತ್ತಿದೆ. ಇದು 2.6 ಕಿಮೀ ಉದ್ದವಾಗಿದ್ದು, 24.38 ಕೋಟಿ ರೂ. ವೆಚ್ಚದಲ್ಲಿ ಕೆಲಸ ಸಾಗುತ್ತಿದೆ.