ಭವಿಷ್ಯದ ಸುರಕ್ಷತೆಗಾಗಿ ಹೆಚ್‌ಡಿಎಫ್‌ಸಿ ಲೈಫ್‌ ಸಿದ್ಧಗೊಳಿಸಿರುವ ಹೊಸ ಸುರಕ್ಷತಾ ಜಾಹೀರಾತು ಅಭಿಯಾನದಲ್ಲಿ ತಮ್ಮ ಕತೆ ಹಂಚಿಕೊಳ್ಳಲಿರುವ ರಿಷಬ್ ಪಂತ್
ಬೆಂಗಳೂರು:ಭಾರತದ ಪ್ರಮುಖ ವಿಮಾ ಸಂಸ್ಥೆಗಳಲ್ಲಿ ಒಂದಾಗಿರುವ ಹೆಚ್‌ಡಿಎಫ್‌ಸಿ ಲೈಫ್ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಕಾಣಿಸಿಕೊಂಡಿರುವ ತನ್ನ ಹೊಸ ಜಾಹೀರಾತು ಅಭಿಯಾನವನ್ನು ಬಿಡುಗಡೆ ಮಾಡಿದೆ. ಬದುಕಿನಲ್ಲಿ ಎದುರಾಗುವ ಅನಿಶ್ಚಿತ ಸವಾಲುಗಳನ್ನು ಎದುರಿಸಲು ಸೂಕ್ತವಾಗಿ ಸಿದ್ಧರಾಗುವ ಪ್ರಾಮುಖ್ಯತೆಯನ್ನು ಈ ಜಾಹೀರಾತು ತಿತಿಳಿಸುತ್ತದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಗಳಿಗೆ ಮತ್ತು ಅವರ ಕುಟುಂಬಕ್ಕಾಗಿ ಟರ್ಮ್ ಪ್ಲಾನ್ ಗಳನ್ನು ಹೊಂದಲು ಪ್ರೇರೇಪಿಸುತ್ತದೆ.
ಈ ಜಾಹೀರಾತು ಕ್ರಿಕೆಟಿಗ ರಿಷಬ್ ಪಂತ್ ಮತ್ತೆ ಕ್ರಿಕೆಟಿಗೆ ಮರಳಿರುವ ಸ್ಫೂರ್ತಿದಾಯಕ ಕತೆಯನ್ನು ಹೊಂದಿದೆ. ಈ ಜಾಹೀರಾತಿನಲ್ಲಿ ಸವಾಲನ್ನು ಜಯಿಸಿ ಬರಲು ನೆರವಾದ ಅಮ್ಮ ಚಿಕ್ಕಂದಿನಲ್ಲಿ ಹೇಳಿದ ಮಾತನ್ನು ನೆನಪಿಸಿ ಕೊಳ್ಳುವ ರಿಷಬ್ ಪಂತ್ ಅವರು ಜೀವನದ ಅನಿರೀಕ್ಷಿತತೆಯ ಕುರಿತು ಮಾತನಾಡುತ್ತಾರೆ. ರಿಷಬ್ ಆತ್ಮ ವಿಶ್ವಾಸ ದಿಂದ ಸರ್ವ ಸನ್ನದ್ಧರಾಗಿರುವ, ಅವರ ಪ್ರಸ್ತುತ ಸ್ಥಿತಿಯನ್ನು ತೋರಿಸುವ ಈ ಜಾಹೀರಾತು ದೂರದೃಷ್ಟಿ ಮತ್ತು ಸೂಕ್ತ ಯೋಜನೆಗಳ ಮೂಲಕ ಅದರಲ್ಲೂ ವಿಶೇಷವಾಗಿ ಸಂಕಷ್ಟದ ಸಮಯದಲ್ಲಿ ಜೀವ ವಿಮೆ ಒದಗಿಸುವ ಆರ್ಥಿಕ ಭದ್ರತೆಯಿಂದ ಎಂಥಾ ಸವಾಲನ್ನು ಬೇಕಾದರೂ ಯಶಸ್ವಿಯಾಗಿ ಜಯಿಸಬಹುದು ಎಂಬುದನ್ನು ಸಾರುತ್ತದೆ.
ಹೆಚ್‌ಡಿಎಫ್‌ಸಿ ಲೈಫ್‌ ಜೊತೆಗಿನ ರಿಷಬ್ ಪಂತ್ ಅವರ ಸಂಬಂಧವು ಕಳೆದ ವರ್ಷದಿಂದ ಗಟ್ಟಿಯಾಗಿ ಬೆಳೆದಿದೆ. ಅವರು ಈಗ ಮೈದಾನದ ಒಳಗೆ ಮತ್ತು ಹೊರಗೆ ಎಲ್ಲಾ ಕಡೆ ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ‘ಸರ್ ಉಟಾ ಕೆ ಜಿಯೋ’ (ತಲೆ ಎತ್ತಿ ಬದುಕಿ) ಎಂಬ ಬ್ರಾಂಡ್‌ನ ಪ್ರಮುಖ ಮೌಲ್ಯವನ್ನು ಜಗತ್ತಿಗೆ ಸಾರುತ್ತಾರೆ.
ಸಹಯೋಗ ಮುಂದುವರಿಸಿರುವ ಕುರಿತು ಮಾತನಾಡಿರುವ ರಿಷಬ್ ಪಂತ್ ಅವರು, “ಇದು ಹೆಚ್‌ಡಿಎಫ್‌ಸಿ ಲೈಫ್‌ ಜೊತೆಗಿನ ಅದ್ಭುತ ಪ್ರಯಾಣದ ಭಾಗವಾಗಿದೆ. ಈ ಜಾಹೀರಾತು ನನ್ನ ಹೃದಯಕ್ಕೆ ಹತ್ತಿರವಾಗಿದೆ. ಯಾಕೆಂದರೆ ಇದು ಕಷ್ಟಗಳಿಂದ ಪುಟಿದೆದ್ದು ಬರುವ ಸ್ಫೂರ್ತಿ ಒದಗಿಸುತ್ತದೆ. ಹೆಚ್‌ಡಿಎಫ್‌ಸಿ ಲೈಫ್ ಸಂಸ್ಥೆಯು ವ್ಯಕ್ತಿಗಳು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಬಗ್ಗೆ ಪೂರ್ವ ಸಿದ್ಧತೆ ಮಾಡಲು ಸತತವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ ಮತ್ತು ಈ ಪ್ರಯತ್ನದ ಭಾಗವಾಗಲು ನನಗೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ.
ಈ ಜಾಹೀರಾತು ಅಭಿಯಾನದ ಮಹತ್ವದ ಕುರಿತು ಮಾತನಾಡಿದ ಹೆಚ್‌ಡಿಎಫ್‌ಸಿ ಲೈಫ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮತ್ತು ಗ್ರೂಪ್ ಹೆಡ್ ಸ್ಟ್ರಾಟಜಿ ವಿಶಾಲ್ ಸುಭರ್ವಾಲ್ ಅವರು , “ರಿಷಬ್ ಪಂತ್ ಅವರು ಕ್ರಿಕೆಟ್ ಫೀಲ್ಡ್ ಗೆ ಮರಳಿ ಬಂದಿರುವ ಕತೆ ನಮ್ಮ ಭಾರತ ದೇಶದ ಜನರಿಗೆ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.
ದಕ್ಷಿಣ ಏಷ್ಯಾದ ಲಿಯೋ ಬರ್ನೆಟ್‌ನ ಚೀಫ್ ಕ್ರಿಯೇಟಿವ್ ಆಫೀಸರ್ ವಿಕ್ರಮ್ ಪಾಂಡೆ ಅವರು , “ಬದುಕು ಅನಿರೀಕ್ಷಿತ. ಹಾಗಾಗಿ ಭವಿಷ್ಯವನ್ನು ಸುಭದ್ರ ಪಡಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ನೀವು ಗೆಲುವಿಗಾಗಿ ಮಾತ್ರವಲ್ಲದೆ ಸೋಲುಗಳಿಗೂ ಸಿದ್ಧರಾಗಿರಬೇಕು. ಹೆಚ್‌ಡಿಎಫ್‌ಸಿ ಲೈಫ್‌ ಗೆ ಸಿದ್ಧಪಡಿಸಿರುವ ನಮ್ಮ ಹೊಸ ಜಾಹೀ ರಾತು ತಮ್ಮ ಭವಿಷ್ಯಕ್ಕಾಗಿ ಎಲ್ಲಾ ಕಷ್ಟಗಳ ವಿರುದ್ಧ ಹೋರಾಡಿದ ನಿಜ ಜೀವನದ ನಾಯಕ ರಿಷಬ್ ಪಂತ್ ಅವರ ಭಾವನಾತ್ಮಕ ಕತೆಯ ಜೊತೆಗೆ ಈ ಕಟುವಾದ ಸಂದೇಶವನ್ನು ಸಾರುತ್ತದೆ. ಈ ಜಾಹೀರಾತು ನಮ್ಮ ಪ್ರೇಕ್ಷಕರಿಗೆ ಅವರ ಕುಟುಂಬದ ಭವಿಷ್ಯಕ್ಕೆ ಸೂಕ್ತ ಯೋಜನೆ ರೂಪಿಸಲು ಸ್ಫೂರ್ತಿ ನೀಡುತ್ತದೆ ಎಂದು ನಾವು ಭಾವಿಸಿದ್ದೇವೆ” ಎಂದು ಹೇಳಿದರು.