ಕಾಂಗ್ರೆಸ್ ಪಕ್ಷದ ಬೆಂಬಲಿತ ಅನಿತಾ ಪಪಂ ನೂತನ ಅಧ್ಯಕ್ಷೆ
ತೆನೆ ಇಳಿಸಿ ಕೈ ಹಿಡಿದ ಪಪಂ ಅಧ್ಯಕ್ಷೆ ಅನಿತಾ
ಜೆಡಿಎಸ್‌ಗೆ ಕೈಕೊಟ್ಟು ಕೊರಟಗೆರೆ ಕಾಂಗ್ರೆಸ್ ಬಾವುಟ ಹಿಡಿದ ಮೂವರು, ಒರ್ವ ಪಕ್ಷೇತರ ಸದಸ್ಯ
ಕೊರಟಗೆರೆ:ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರು ಕ್ಷೇತ್ರ ಕೊರಟಗೆರೆ ಪಪಂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅನಿತಾ ಅವರು ಅವಿರೋಧವಾಗಿ ಆಯ್ಕೆ ಮಾಡುವುದರ ಮೂಲಕ ಕೊರಟಗೆರೆ ಕಾಂಗ್ರೆಸ್ ಭದ್ರ ಕೋಟೆ ಎಂದು ಸಾಬೀತು ಮಾಡಿದ್ದಾರೆ.
ಕೊರಟಗೆರೆ ಪಪಂಯಲ್ಲಿ ಒಟ್ಟು ೧೫ ಸ್ಥಾನಗಳಿದ್ದು ೧೪ ಸದಸ್ಯರನ್ನು ಒಳಗೊಂಡಿದ್ದು ಕಾಂಗ್ರೆಸ್ ಪಕ್ಷದ ೫ ಸದಸ್ಯರು, ಜೆ.ಡಿ.ಎಸ್ ಪಕ್ಷದ ೭ ಸದಸ್ಯರು, ಬಿಜೆಪಿ ೧ ಹಾಗೂ ಒಬ್ಬ ಪಕ್ಷೇತರ ಸದಸ್ಯ ಇದ್ದು ಪಪಂ ಎರಡನೇ ಅವದಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಠ ಜಾತಿ ಮಹಿಳಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು ಅಧ್ಯಕ್ಷ ಸ್ಥಾನಕ್ಕೆ ಜೆ.ಡಿ.ಎಸ್. ಪಕ್ಷದ ೩ನೇ ವಾರ್ಡ್ನ ಸದಸ್ಯೆ ಅನಿತಾ ಏಕೈಕ ಅಭ್ಯರ್ಥಿ ಇದ್ದರೂ ಅವರು ಕಾಂಗ್ರೇಸ್ ಪಕ್ಷದಿಂದ ಅಧ್ಯಕ್ಷರಾದರು, ಅದೇ ರೀತಿ ೨ನೇ ವಾರ್ಡ್ನ ಜೆ.ಡಿ.ಎಸ್ ಸದಸ್ಯೆ ಉಸ್ಮಾಫರೀಯಾ ಅವರು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ.
ಪಪಂಯನ್ನ ಮೇಲ್ದಜೇಗೇರಿಸಿ ಪುರಸಭೆಯನ್ನಾಗಿ ಮಾಡಲಾಗುವುದು, ಪಟ್ಟಣದಲ್ಲಿ ಬೃಹತ್ ಬಯಲು ರಂಗಮಂರ, ದಿನವಹಿ ಮಾರುಕಟ್ಟೆ, ನಿತ್ಯ ನೀರಿನ ಸರಬರಾಜು ಸೇರಿದಂತೆ ಹಲವು ಶಾಶ್ವತ ಕಾಮಗಾರಿಗಳು ಮಾಡುವ ಯೋಜನೆಯನ್ನು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ಮಾಡಲಾಗುವುದು,
ಡಾ.ಜಿ.ಪರಮೇಶ್ವರ್ ,ಗೃಹ ಸಚಿವ.