ನೂತನ ತಾಲೂಕಾ ಅಧ್ಯಕ್ಷರ, ಪದಾಧಿಕಾರಿಗಳ ಆಯ್ಕೆ
ಇಂಡಿ:ಕರ್ನಾಟಕ ರಾಜ್ಯ ಅನುಧಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ,ಬೆಂಗಳೂರು ತಾಲೂಕಾ ಘಟಕ ಇಂಡಿ ಸರ್ವಸದಸ್ಯರ ಸಭೆ ಹಾಗೂ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷರ ನೂತನ ತಾಲೂಕಾ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಶ್ರೀ ವೀರ ಭಾರತಿ ವಿಧ್ಯಾಕೆಂದ್ರದಲ್ಲಿ ನಡೆಯಿತು.
ಈ ಸಭೆಯಲ್ಲಿ ಕ್ರೆöಸ್ಟ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ನಾಯಕೋಡಿ ತಾಲೂಕಾ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ವಿಜಯಕುಮಾರ ಜಾಧವ ಮತ್ತು ಗೌರವ ಅಧ್ಯಕ್ಷರಾಗಿ ಸುಲ್ತಾನ ಇಂಡಿಕರ್ ಖಜಾಂಚಿಯಾಗಿ ಎಸ್.ಎಸ್ ತೆಲಸಂಗ, ಪ್ರಧಾನ ಕಾರ್ಯದರ್ಶಿಯಾಗಿ ರಾಜ ಕುಮಾರ ನಾಯಕೋಡಿ ಇವರನ್ನು ಸರ್ವಾನುಮತದಿಂದ ಆಯ್ಕೆಗೋಳಿಸಲಾಯಿತು.
ವಿಜಯಪೂರ ಜಿಲ್ಲಾಧ್ಯಕ್ಷ ಶಿವಾನಂದ ಹಿರೇಕುರಬರ್, ವಿಜಯಪೂರ ನಗರ ಘಟಕದ ಅಧ್ಯಕ್ಷ ಆನಂದ ಕುಲಕರ್ಣಿ, ರಾಜ್ಯ ಉಪಾಧ್ಯಕ್ಷ ರಣಜೀತ ಬಾಬರ್, ನಿಕಟಪೂರ್ವ ರಾಜ್ಯ ಸಂಘನಾ ಕಾರ್ಯದರ್ಶಿ ರಮೇಶಕುಮಾರ ಬಗಲಿ, ಇಂಡಿ ತಾಲೂಕಿನ ಎಲ್ಲಾ ಶಾಲೆಗಳ ಮುಖ್ಯಗುರುಗಳು ಶಿಕ್ಷಕರು ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.