ಹಲಸಂಗಿ ಗೆಳೆಯರು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ: ಯಶವಂತರಾಯಗೌಡ ಪಾಟೀಲ
ಇಂಡಿ:ಪ್ರಾಚೀನ ಕಾಲದಲ್ಲಿನಮ್ಮ ಪೂರ್ವಜರು ಜನಪದ ಸಾಹಿತ್ಯವನ್ನು ಕೃಷಿ ಮಾಡಿದ್ದಾರೆ,ಗಡಿ ಭಾಗದ ಹಲಸಂಗಿ ಗೆಳೆಯರಾದ ಮಧುರ ಚೆನ್ನರು, ಸಿಂಪಿ ಲಿಂಗಣ್ಣಾ, ದೂಲಾಸಾಹೇಬ, ಶ್ರೀರಂಗರು ಜನಪದ ಸಾಹಿತ್ಯೆವನ್ನು ಶ್ರೀಮಂತಗೋಳಿಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲಹೇಳಿದರು.
ವಿಶ್ವಚೇತನ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಅಭಿವೃದ್ದಿ ಸಂಸ್ಥೆ ,ವಿಜಯಪೂರ ಶಾಖೆ ಇಂಡಿ .ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಇಂಡಿ ಇವರ ಸಹಯೋಗದಲ್ಲಿ ಜಾನಪದ ಝೇಂಕಾರ ಹಾಡಿನ ಸಂಭ್ರಮ ಮತ್ತು ಶಾಸಕ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ ವಿಜಯ ಸಾಧಿಸಿದ್ದರಿಂದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಜನಪದ ಸಾಹಿತ್ಯ ಪೂರ್ವಜರಿಂದ ಬಂದ ಬಳುವಳಿ ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೋಬ್ಬ ನಾಗರಿಕ ಸಮಾಜದ ಕರ್ತವ್ಯ. ಇಂಡಿ ಗಡಿ ಭಾಗದಲ್ಲಿದ್ದು ಜನದ ಸಾಹಿತ್ಯ ಈ ಭಾಗದಲ್ಲಿ ಸಾಕಷ್ಟು ಹಾಸುಹೊಕ್ಕಿದೆ.
ತಾಲೂಕಿನ ಉತ್ತಮ ಸಾಹಿತಿಗಳನ್ನು ಜಾನಪದ ಹಾಡುಗಾರರನ್ನು ಶೋಧ ಮಾಡಿ ಪ್ರತಿ ತಿಂಗಳು ಒಂದೊ0ದು ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಈ ಭಾಗದ ಕಲೆ ಸಾಹಿತ್ಯವನ್ನು ಪೋಷಿಸೋಣ , ವಿಶ್ವಚೇತನ ಶೈಕ್ಷಣಿಕ ಸಾಂಸ್ಕೃತಿಕ ವೇದಿಕೆ ಹಾಗೂ ಸಾಮಾಜಿಕ ಸೇವಾ ಅಭಿವೃದ್ದಿ ಸಂಸ್ಥೆಯ ಇಂಡಿ ಶಾಖೆಯ ಪದಾಧಿಕಾರಿಗಳು ನಿವೇಶನ ಹಾಗೂ ಇತರೆ ಬೇಡಿಕೆಗಳು ಮುಂದಿಟ್ಟಿದ್ದಾರೆ . ಸರಕಾರದ ಅನುಧಾನದ ಅನುಪಾತದೊಂದಿಗೆ ಸರಿ ದೂಗಿಸುವ ಕೆಲಸ ಮುಂಬರುವ ದಿನಗಳಲ್ಲಿ ಮಾಡುವ ಭರವಸೆ ನೀಡಿದರು.
ಖ್ಯಾತ ಅಂಕಣಕಾರ ಮಂಜುನಾಥ ಜುನಗೊಂಡ ನಿತ್ಯ ಬದುಕಿನಲ್ಲಿ ಜಾನಪದ ಕುರಿತು ಉಪನ್ಯಾಸ ನೀಡಿದರು. ಸಾಹಿತಿ ಡಿ.ಎನ್ ಅಕ್ಕಿ, ಜಾವೀದ ಮೋಮಿನ್, ನೀಲಕಂಠಗೌಡ ಪಾಟೀಲ, ಕದಳಿ ವೇದಿಕೆ ಅಧ್ಯಕ್ಷ ಗಂಗಾಬಾಯಿ ಗಲಗಲಿ, ಭದ್ರೀಶ ಮಹೇಶಿ, ಜೀತಪ್ಪ ಕಲ್ಯಾಣಿ, ಚಂದ್ರಶೇಖರ ರೂಗಿ, ಶ್ರೀಮಂತ ಲೋಣಿ, ಶಾಂತು ಶಿರಕನ್ನಳ್ಳಿ, ಶೇಖರ ನಾಯಿಕ, ರಾಜಶೇಖರ ರೂಗಿ, ಪ್ರಶಾಂತ ಕಾಳೆ, ಅಶೋಕ ಮಿರ್ಜಿ, ಶಂಕರ ಚವ್ಹಾಣ, ಮಲ್ಲನಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ರಾಝೇಶ್ವರಿ ಕ್ಷತ್ರಿ, ದ್ರಾಕ್ಷಾಯಣಿ ಮೈದರಗಿ, ಶಶಿಕಲಾ ಅಳೂರ, ಡಾ, ಕಾಂತು ಇಂಡಿ, ಪ್ರಭು ಹೊಸಮನಿ, ರಾಜು ಕುಲಕರ್ಣಿ, ಶರಣು ಕಾಂಬಳೆ, ಜಿ.ಜಿ ಬರಡೋಲ, ರಮೇಶ ನಾಯಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಸವರಾಜ ಗೊರನಾಳ, ನಿರೂಪಿಸಿ, ಬಿ.ಈ ಹಿರೇಮಠ ಸ್ವಾಗತಿಸಿ, ಆನಂದ ವಾಲೀಕಾರ .ಎಂ.ಪಿ.ಚಿಮ್ಮಾಗೋಳ ,ಸಂಜೀವ ತೆಲ್ಲೂರ, ಸಂದೇಶ ಗಲಗಲಿ ವಂದಿಸಿದರು. ಇದೇ ಸಂದರ್ಬದಲ್ಲಿ ಸಂತೋಷ ವಾಲೀಕಾರ, ಶಿಕ್ಷಕಿ ಮಹಾದೇವಿ ತಳವಾರ ಇವರಿಂದ ಜಾನಪದ ಹಾಡುಗಳು ಹಾಡಿ ಜನರಿಗೆ ಮನ ರಂಜನೆ ನೀಡಿದರು.