ಸಮುದಾಯದ ಬೇಡಿಕೆ ಈಡೇರಿಸಲು ಸಿಎಂ ಮೇಲೆ ಒತ್ತಡ ಹೇರಲಾಗುತ್ತದೆ: ಪಾಟೀಲ
ಇಂಡಿ:ವೀರಶೈವ ಲಿಂಗಾಯತ ಹಂಡೆವಜೀರ ಸಮುದಾಯ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳ ಗಮನ ಸೆಳೆದು, ಸಿಎಂ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಭಾನುವಾರ ಪಟ್ಟಣದ ಶ್ರೀಶಾಂತೇಶ್ವರ ಮಂಗಲ ಕರ‍್ಯಾಲಯದಲ್ಲಿ ಅಖಿಲ ರ‍್ನಾಟಕ ವೀರಶೈವ ಲಿಂಗಾ ಯತ ಹಂಡೆವಜೀರ ಕ್ಷೇಮಾಭಿವೃದ್ದಿ ಸಂಘ ತಾಲೂಕು ಘಟಕ ಇಂಡಿ ಹಾಗೂ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ಕಲಬುರಗಿ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಗ್ರಂಥ ಬಿಡಗಡೆ ಮಾಡಿ ಮಾತನಾಡಿದರು..
ವೀರಶೈವ ಲಿಂಗಾಯತ ಹಂಡೆವಜೀರ ಸಮುದಾಯ ತನ್ನದೆ ಆದ ಭವ್ಯ ಪರಂಪರೆ ಹೊಂದಿದ ಸಮುದಾಯ. ರಾಜ್ಯದಲ್ಲಿ ತನ್ನದೆ ಆದ ಇತಿಹಾಸ ಹೊಂದಿದೆ. ಶೈಕ್ಷಣಿ,ರ‍್ಥಿಕವಾಗಿ ಮುಂದೆ ಬರಲು ಶಿಕ್ಷಣದಿಂದ ಮಾತ್ರ ಸಾಧ್ಯ.ಬರುವ ದಿನದಗಳಲ್ಲಿ ಈ ಸಮುದಾಯದ ಬೇಡಿಕೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದರ ಮೂಲಕ ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದರು.ಸಮುದಾಯದಲ್ಲಿರುವ ಶಕ್ತಿವಂತರು ರ‍್ಥಿಕವಾಗಿ ಕಷ್ಟದಲ್ಲಿರುವವರ ಪರವಾಗಿ ಇದ್ದರೆ ಸಮುದಾಯ ಅಭಿವೃದ್ದಿ ಏಳಿಗೆ ಹೊಂದಲು ಸಾಧ್ಯ,ಒಗ್ಗಟ್ಟಿನಿಂದ ಸಮುದಾಯದ ಏಳಿಗೆಗೆ ಶ್ರಮಿಸಿ ಎಂದು ಹೇಳಿದರು.
ಉತ್ತಮ ನಾಯಕತ್ವದ ನಾಯಕ ಹಂಡೆ ವಜೀರ ವಂಶದ ರಾಜಾ ಅಮರಪ್ಪ ನಾಯಕರಂತಹ ನಾಯಕರ ಜೀವನ ಚರಿತ್ರೆ,ಲಕ್ಷಾಂತರ ಜನರ ಬಾಳಿಗೆ ದಾರಿ ದೀಪವಾದ ಅವರ ಆರ‍್ಶ ಯುವಕರಿಗೆ ಮಾದರಿ.ಅವರ ಆರ‍್ಶ ಪಾಲಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಅಂದಾಗ ಸಮಾಜ ಅಭಿವೃದ್ದಿಯಾಗಲು ಸಾಧ್ಯ ವಾಗುತ್ತದೆ ಎಂದು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕಷ್ಟ,ನಷ್ಟಗಳನ್ನು ಮೆಟ್ಟಿನಿಂತು ಸ್ವಂತ ಪರಿಶ್ರಮದಿಂದ ಸಮಾಜದ ಶ್ರೇಯೋಭಿವೃದ್ದಿಗಾಗಿ ಯುವಕರು ಶ್ರಮಿಸಬೇಕಾಗಿದೆ.ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದು ಹೇಳಿದರು.
ಶಾಸಕರಾದ ವಿಠಲ ಕಟಕದೊಂಡ, ರಾಜುಗೌಡ ಪಾಟೀಲ,ಸಿ.ಎಸ್‌.ನಾಡಗೌಡ, ಅನ್ನದಾನೇಶ್ವರಿ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ, ಡಾ.ವಿಶ್ವಪ್ರಭುದೇವ ಶಿವಾಚರ‍್ಯರು,ಮುರುಘೇಂದ್ರ ಶಿವಾಚರ‍್ಯ, ಶಿವಕುಮಾರ ಸ್ವಾಮೀಜಿ, ಹಂಡೆವಜೀರ ಸಮಾಜದ ರಾಜ್ಯಾಧ್ಯಕ್ಷ ಡಾ.ಎಸ್‌.ಎಸ್‌. ಪಾಟೀಲ, ಡಾ.ಡಿ.ಎನ್‌.ಪಾಟೀಲ, ದೇವೇಂದ್ರ ಗೋನಾಳ,ಸಮಾಜದ ಇಂಡಿ ತಾಲೂಕಾಧ್ಯಕ್ಷ ಆರ್‌.ವಿ.ಪಾಟೀಲ, ರವೀಂದ್ರ ಬಗಲಿ ಮಾತನಾಡಿದರು.
ಬಿಜೆಪಿ ರೈತ ಮರ‍್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಡಾ.ಎಸ್‌.ಸಿ.ಪಾಟೀಲ, ಎಂ.ಎಸ್‌.ಚೌದರಿ, ಬಿ.ಎಸ್‌.ಪಾಟೀಲ, ಎಸ್‌.ಜಿ.ಪಾಟೀಲ, ಎಸ್‌.ಆರ್‌.ದೇಸಾಯಿಗೌಡರ,ಮಾಲಾ ಪಾಟೀಲ ಮೊದಲಾದವರು ಕರ‍್ಯಕ್ರಮದಲ್ಲಿ ಇದ್ದರು.
ಇದೆ ಸಂರ‍್ಭದಲ್ಲಿ ಇಸ್ರೋ ವಿಜ್ಞಾನಿ ಶಿವಕುಮಾರ ಪಾಟೀಲ ಹಾಗೂ ರಾಜ್ಯದ ವಿವಿದ ಜಿಲ್ಲೆಯ ಹಂಡೆ ವಜೀರ ಸಮುದಾಯದ ಪ್ರತಿಭಾವಂತ ವಿದ್ಯರ‍್ಥಿಗಳನ್ನು ಸನ್ಮಾನಿಸಲಾಯಿತು.