ಜಗತ್ತು ಉಳಿಯಬೇಕಾದರೆ ತತ್ವ, ಆರ‍್ಶಗಳಿಂದ ಮಾತ್ರ ಸಾಧ್ಯ
ಇಂಡಿ:ಜಗತ್ತು ಉಳಿಯಬೇಕಾದರೆ ಶರಣ ಸಾಹಿತ್ಯ ಪರಿಷತ್ತಿನ ತತ್ವ,ಆರ‍್ಶಗಳಿಂದ ಮಾತ್ರ ಸಾಧ್ಯ ,ಇದು ನನ್ನ ಅಭಿಪ್ರಾಯವಲ್ಲ,ಜಗತ್ತಿನ ದರ‍್ಶನಿಕರ ಅಭಿಪ್ರಾಯವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಹೇಳಿದರು.
ಅವರು ಭಾನುವಾರ ಪಟ್ಟಣದ ರಾಜ್ಯ ರ‍್ಕಾರಿ ನೌಕರರ ಸಂಘದ ಸಭಾ ಭವನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ತುಂಬಿ ತುಳುಕುತ್ತಿದ್ದ ಅಂಧಶ್ರದ್ದೆಗಳನ್ನು ತೊಲಗಿಸಿ ಸಮಾಜವನ್ನು ಸರಿ ದಾರಿಗೆ ತರುವಲ್ಲಿ ೧೨ ನೇ ಶತಮಾನದ ಶರಣರ ಕೊಡುಗೆ ಬಹುದೊಡ್ಡದು.ಕೇವಲ ಶರಣರ ವಚನಗಳು ಹಾಡಿದರೆ, ಶರಣರ ಭಾವಚಿತ್ರ ಗಳನ್ನು ಇಟ್ಟು ಪೂಜಿಸಿದರೆ ಸಾಲದು ಅವರು ಹೇಳಿದಂತೆ ನಡೆದಾಗ ನಾವು ಶರಣರಿಗೆ ನಾವು ಬೆಲೆ ಕೊಟ್ಟಂತಾ ಗುತ್ತದೆ. ಮನುಷ್ಯ ಈ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಶರಣರು ವಚನಗಳ ಮೂಲಕ ಸಾರಿ ಹೇಳಿದ್ದಾರೆ. ಅವರ ತತ್ವಾರ‍್ಶಗಳನ್ನು ಬದುಕಿನಲ್ಲಿ ಅಳವಡಸಿಕೊಳ್ಳಬೇಕು ಎಂದು ಹೇಳಿದರು.
ಇಂದಿನ ಶಾಲಾ ಮಕ್ಕಳಲ್ಲಿ ಶರಣರ ಜೀವನ,ಹೋರಾಟ,ತ್ಯಾಗಗಳ ಕುರಿತು ಮನವರಿಕೆ ಮಾಡಬೇಕಾದ ಅಗತ್ಯ ಇದೆ. ಪ್ರಾಥಮಿಕ ಶಾಲಾ ಹಂತದಿಂದಲೇ ಪಠ್ಯಗಳಲ್ಲಿ ಶರಣರ ವಚನ, ಅವರ ಸಾಧನೆ ಕುರಿತು ತಿಳಿ ಹೇಳುವ ಪಠ್ಯಗಳನ್ನು ಅಳವಡಿಸುವ ಕೆಲಸ ಆಗಬೇಕು ಎಂದು ಹೇಳಿದರು. ಶಸಾಪ ನಿಕಟಪರ‍್ವ ಅಧ್ಯಕ್ಷ ಎಂ.ಜೆ.ಪಾಟೀಲ ಕರ‍್ಯಕ್ರಮ ಉದ್ಘಾಟಿಸಿದರು.
ಡಾ.ಸ್ವರೂಪಾನಂದ ಸ್ವಾಮೀಜಿ, ರಾಜಯೋಗಿನಿ ಯಮುನಾ ಅಕ್ಕನವರು ಸಾನಿಧ್ಯ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ, ನಿಕಟಪರ‍್ವ ಅಧ್ಯಕ್ಷ ಮು.ಗು,ಯಾದವಾಡ, ಐ.ಬಿ.ಸುರಪೂರ, ಎಸ್‌.ಆರ್‌.ಪಾಟೀಲ, ಕಸಾಪ ತಾಲೂಕು ಅಧ್ಯಕ್ಷ ರಾಘವೇಂದ್ರ ಕುಲರ‍್ಣಿ, ಶಸಾಪ ನೂತನ ಅಧ್ಯಕ್ಷ ಬಿ.ಎಸ್‌.ಪಾಟೀಲ, ಕದಳಿ ವೇದಿಕೆ ಅಧ್ಯಕ್ಷೆ ಗಂಗಾ ಗಲಗಲಿ, ಯುವ ಘಟಕದ ಅಧ್ಯಕ್ಷ ಎಸ್‌.ಐ.ಸುಗೂರ,