ಶಿಕ್ಷಣದ ಕುರಿತು ತಮ್ಮ ಮಕ್ಕಳೊಂದಿಗೆ ಸೂಕ್ಷ್ಮವಾಗಿ ಸಮಾಲೋಚನೆ ಮಾಡಬೇಕು
ಇಂಡಿ:ಸರಕಾರ ಮಕ್ಕಳಿಗೆ ಸಿಗುವಂತಹ ಮೂಲ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರ ಹಂತದಲ್ಲಿಯೇ ಸಿಗುತ್ತವೆ. ಒಂದು ಮಗು ಅಂಗನವಾಡಿ ಕೇಂದ್ರಕ್ಕೆ ಬಂದು ಚಿಕ್ಕ ವಯಸ್ಸಿನಲ್ಲಿಯೇ ಆಟ, ಪಠ್ಯೇತರ ಚಟುವಟಿಕೆಗಳ ಜೊತೆಗೆ ಬಹುತೇಕವಾಗಿ ಅಕ್ಷರ ಜ್ಞಾನವನ್ನು ಹೊಂದುತ್ತವೆ. ಆದ್ದರಿಂದ ಪಾಲಕರು ಅಂಗನವಾಡಿ ಶಿಕ್ಷಣದ ಕುರಿತು ತಮ್ಮ ಮಕ್ಕಳೊಂದಿಗೆ ಸೂಕ್ಷ್ಮವಾಗಿ ಸಮಾಲೋಚನೆ ಮಾಡಬೇಕು ಎಂದು ಶಿಶು ಅಭಿವೃದ್ದಿ ಇಲಾಖೆಯ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಪುತಳಾಬಾಯಿ ಭಜಂತ್ರಿ, ಚೌಡವ್ವ ತೊರವಿ, ತೃಪ್ತಿ ತಿಳುಗುಳ, ರುಕ್ಮೀಣಿ ಮಾದರ ಜಂಟಿಯಾಗಿ ಪಾಲಕ ಪೋಷಕರಿಗೆ ಹೇಳಿದರು.
ಅವರು ತಾಲೂಕಿನ ಗ್ರಾಮದ ಖೇಡಗಿ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡ ಪಾಲಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪ್ರತಿ ತಿಂಗಳು ಮೂರನೆ ಶನಿವಾರ ರ‍್ಕಾರದ ಆದೇಶದಂತೆ ಹಾಗೂ ಜಿಪಂ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿಗಳ ಸೂಚನೆಯಂತೆ ಪಾಲಕರ ಸಭೆ ನಡೆಸಬೇಕು ಎಂಬಂತೆ ,೩ ರ‍್ಷದಿಂದ ೬ ರ‍್ಷದ ಒಳಗಿನ ಮಕ್ಕಳನ್ನು ತಪ್ಪದೆ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಬೇಕು. ಪಾಲಕರು ತಮ್ಮ ಮಕ್ಕಳ ಬೌದ್ಧಿಕ ಮಟ್ಟವನ್ನು ತಿಳಿದುಕೊಳ್ಳಲು ಕಡ್ಡಾಯವಾಗಿ ಪಾಲಕರ ಸಭೆಗೆ ಹಾಜರಾಗಬೇಕು. ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಿಗೆ ತಪ್ಪದೆ ಕಳುಹಿಸಬೇಕು.ಇದರಿಂದ ರ‍್ಕಾರದ ಯೋಜನೆ ಸರ‍್ಪಕ ಅನುಷ್ಠಾನಕ್ಕೆ ತಾವು ಕೈಜೊಡಿಸಬೇಕು ಎಂದು ಹೇಳಿದರು.
ಇಂದು ನಮ್ಮ ಮಕ್ಕಳ ಶಾಲಾ ಹಂತ ಪ್ರಾರಂಭವಾಗುವುದು ಅಂಗನವಾಡಿ ಕೇಂದ್ರದಿಂದಲೇ ನಾವುಗಳು ನಮ್ಮ ಮಕ್ಕಳನ್ನು ಶಿಕ್ಷಣವಂತರಾಗುವಲ್ಲಿ ಪ್ರಯತ್ನಿಸಬೇಕು .ರ‍್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇಂಡಿ ವಲಯದ ಮೇಲ್ವಿಚಾರಕಿ ರುಕ್ಮೀಣಿ ಮಾದರ,ಕರ‍್ಯರ‍್ತೆ ಜಗು ವಾಲಿ,ತಡವಲಗಾ ವಲಯದ ಮೇಲ್ವಿಚಾರಕಿ ತೃಪ್ತಿ ತಿಳಗುಳ,ಕರ‍್ಯರ‍್ತೆ ಸುರೇಖಾ ಮಾಂಕಣಿ,ಅಗರಖೇಡ ಕರ‍್ಯರ‍್ತೆ ಯಲ್ಲವ್ವ ಮಡ್ಡಿಮನಿ, ವಿದ್ಯಾ ತೊರವಿ,ಲಚ್ಯಾಣ ವಲಯದ ಮೇಲ್ವಿಚಾರಕಿ ಚೌಡವ್ವ ತೊರವಿ,ಕರ‍್ಯರ‍್ತೆ ಈಠಾಬಾಯಿ ಕಾಶಿಕಾರ ಮೊದಲಾದವರು ಈ ಸಂರ‍್ಭದಲ್ಲಿ ಇದ್ದರು.
*
ಇಂಡಿ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಇಂಡಿ, ಅರ‍್ಗಾ, ಝಳಕಿ, ಅಗರಖೇಡ-ಎ, ಅಗರಖೇಡ-ಬಿ, ತಾಂಬಾ-ಎ, ತಾಂಬಾ-ಬಿ, ಹರ‍್ತಿ, ನಾದ ಕೆ.ಡಿ, ಲಚ್ಯಾಣ, ಹಡಲಸಂಗ, ತಡವಲಗಾ ವಲಯಗಳ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆ ಹಮ್ಮಿಕೊಳ್ಳಲಾಗಿತ್ತು. ಪಾಲಕರ ಸಭೆಗಳಲ್ಲಿ ಮಕ್ಕಳಿಗೆ ಮತ್ತು ಪಾಲಕರಿಗೆ ೨ ರ‍್ಷ ಒಳಗಿನ ಮಕ್ಕಳ ಪಾಲನೆ- ಪೋಷಣೆ, ರ‍್ಭಿಣಿ ಮಹಿಳೆಯರು,ಬಾಣಂತಿಯರ ಆರೈಕೆ ಮತ್ತು ಮಕ್ಕಳ ವೈಯಕ್ತಿಕ ಸ್ವಚ್ಛತೆ ಮತ್ತು ಬೆಳವಣಿಗೆ ಹಾಗೂ ಶಾಲಾ ಪರ‍್ವ ಶಿಕ್ಷಣದ ಬಗ್ಗೆ ತಿಳಿಸಲಾಯಿತು. ರ‍್ಕಾರದ ಯೋಜನೆಗಳಾದ ಮಾತೃ ವಂದನಾ ಹಾಗೂ ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮಾಹಿತಿಯನ್ನು ಮೇಲ್ವಿಚಾರಕಿಯರಿಂದ ನೀಡಲಾಯಿತು.ಗೀತಾ ಎಸ್‌,ಗುತ್ತರಗಿಮಠ,ಸಿಡಿಪಿಒ, ಇಂಡಿ.