ವೀರ ರಾಣಿ ಚೆನ್ನಮ್ಮನವರ ಜಯಂತಿ ಆಚರಣೆಗೆ ಆದೇಶ
ಇಂಡಿ:ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡ ವೀರ ರಾಣಿ ಚೆನ್ನಮ್ಮ ಜಯಂತಿ ಕಾರ‍್ಯಕ್ರಮಕ್ಕೆ ಎಸಿ, ತಹಸೀಲದಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗದ ಚೆನ್ನಮ್ಮನ ಭಾವಚಿತ್ರಕ್ಕೆ ಟೆಂಗು, ರ‍್ಪೂರ ಬೆಳಗದೆ ಕೇವಲ ಹೂವಿನ ಹಾರ ಹಾಕಿ ಕೆಳಹಂತದ ಸಿಬ್ಬಂದಿಯಿಂದ ಪೂಜೆ ಸಲ್ಲಿಸಿ ಅಗೌರವ ತೋರಿದ ಪರಿಣಾಮ ಪಂಚಮಸಾಲಿ ಸಮಾಜದ ಮುಖಂಡರು ಮಿನಿ ವಿಧಾನಸೌಧದಲ್ಲಿ ಚೆನ್ನಮ್ಮನವರ ಭಾವಚಿತ್ರದ ಮುಂದೆ ಕುಳಿತು ಪ್ರತಿಭಟನೆ ನಡೆಸಿದಾಗ ತಹಶೀಲ್ದಾರ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಗೆ ಸರಿಯಾಗಿ ಸ್ಪಂಧಿ ಸದೆ, ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಇಂಡಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಹೆಚ್. ಬಿರಾದಾರ್ ಹೇಳೀದರು.
ಅವರು ವೀರ ರಾಣಿ ಕಿತ್ತೂರು ಚೆನ್ನಮ್ಮ ಸಹಕಾರಿ ಬ್ಯಾಂಕಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರ‍್ಕಾರ ಅಕ್ಟೋಬರ್ ೨೩ ರಂದು ವೀರ ರಾಣಿ ಚೆನ್ನಮ್ಮನವರ ಜಯಂತಿ ಆಚರಣೆಗೆ ಆದೇಶ ಹೊರಡಿಸಿದೆ, ಆದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಚೆನ್ನಮ್ಮನವರ ಭಾವಚಿತ್ರ ಪೂಜೆಗೆ ಆಗಮಿಸದೆ ರಾಣಿ ಚೆನ್ನಮ್ಮ ನವರಿಗೆ ಅ ಗೌರವ ತೋರಿದ್ದಾರೆ.ಕಂದಾಯ ಉಪ ವಿಭಾಗಾಧಿಕಾರಿಗಳು ,ತಹಸೀಲದಾರ ಸೇರಿದಂತೆ ಯಾವುದೇ ತಾಲೂಕು ಮಟ್ಟದ ಅಧಿಕಾರಿಗಳು ಚನ್ನಮ್ಮ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳದೆ ಅಗೌರವ ತೋರಿದ್ದಾರೆ.
ಜಯಂತಿಯಲ್ಲಿ ಆಗಮಿಸದ ಅಧಿಕಾರಿಗಳನ್ನು ಈ ಕೂಡಲೇ ಅಮಾನತುಗೊಳಿಸಬೇಕು. ಎಂದು ಆಗ್ರಹಿಸಿದರು. ರಾಣಿ ಕಿತ್ತೂರು ಚೆನ್ನಮ್ಮ ನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲು ಆಗಮಿಸದೆ ಅಗೌರವ ತೋರಿದ ಎಲ್ಲ ಅಧಿಕಾರಿಗಳನ್ನು ಕಡ್ಡಾಯವಾಗಿ ಅಮಾನತುಗೊಳಿಸಬೇಕು, ತಹಸಿಲ್ದಾರ್ ಹಾಗೂ ಕಂದಾಯ ಉಪ ವಿಭಾಗ ಅಧಿಕಾರಿಗಳಿಗೆ ಸಮಾಜದವರು ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದರು ಸಹಿತ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
ಹೀಗಾಗಿ ಕಂದಾಯ ಉಪವಿಭಾಗಾಧಿಕಾರಿ ಹಾಗೂ ತಹಸಿಲ್ದಾರ್ ಸೇರಿದಂತೆ, ಚೆನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ಅಗೌರವ ತೋರಿದ ಎಲ್ಲ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ರ‍್ಕಾರ ಆದೇಶ ಹೊರಡಿಸಬೇಕು ಇಲ್ಲವಾದಲ್ಲಿ ಮುಂಬರುವ ದಿನದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂರ‍್ಭದಲ್ಲಿ ವಿಜಯಪೂರ ಜಿಲ್ಲಾ ಪಂಚಮಸಾಲಿ ಸಮಾಜದ ಯುವ ಘಟಕ ಅಧ್ಯಕ್ಷ ಸೋಮು ದೇವರ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಬಾಳು ಮುಳುಜಿ, ಶರಣಗೌಡ ಬಂಡಿ,ಶಿವಾನಂದ ಚಾಳಿಕಾರ, ಉಮೇಶ ಬಳಬಟ್ಟಿ, ರಾಜಗುರು ದೇವರ, ದಾದು ಕೋಣಶಿರಗಿ, ಶಿವಾನಂದ ಮಲಕಗೊಂಡ, ನಾಗೇಶ್ ಹೇಗಡ್ಯಾಳ, ನಿಂಗನಗೌಡ ಬಿರಾದಾರ, ಶರಣಗೌಡ ಜೋಗುರ, ಪ್ರಶಾಂತಗೌಡ ಬಿರಾದಾರ, ಶ್ರೀಶೈಲ ಕೋರಹಳ್ಳಿ, ಅರವಿಂದ ಪಾಟೀಲ, ರಾಹುಲ್ ಮರಗೂರ, ಸಂತೋಷ ದೇವರ, ಆನಂದ ದೇವರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.