ಕಾಲುವೆ ನೀರು ಭೀಮಾನದಿ ನದಿಗೆ ಇದೇ ಪ್ರಥಮ ಬಾರಿಗೆ ಸೇರಿದೆ
ಇಂಡಿ:ಭೀಕರ ಬರಗಾಲ ಜನ, ಜಾನುವಾರಗಳಿಗೆ ಕುಡಿಯಲು ನೀರು ಇಲ್ಲದೆ ಕಂಗಾಲಾದ ಸಂಧರ್ಬ ತಾಲೂಕಿ ನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆ ೧ .ಕಿ.ಮೀ ದಿಂದ ೧೭೨ ಕಿ.ಮೀ ಮುಖ್ಯ ಕಾಲುವೆವರೆಗೆ ನೀರು ಹರಿ ಬಿಡಲಾಗಿದೆ.
ಇಂಡಿ ಮುಖ್ಯ ಕಾಲುವೆ ಮಾವಿನಹಳ್ಳಿ, ಅಹಿರಸಂಗ, ಹಲಸಂಗಿ, ಝಳಕಿ, ಹಾವಿನಾಳ ಕ್ರಾಸ್, ಚಡಚಣ, ದಸೂರ, ಗ್ರಾಮ ಮುಖ್ಯ ಕಾಲುವೆ ನೀರು ಹರಿಯುತ್ತಿದ್ದು ಕಾಲುವೆ ನೀರು ಭೀಮಾನದಿ ನದಿಗೆ ಇದೇ ಪ್ರಥಮ ಬಾರಿಗೆ ಕಳೆದ ಹತ್ತು ವರ್ಷಗಳಲ್ಲಿ ಸೇರಿದೆ. ಅದಲ್ಲದೆ ಹಾವಿನಾಳ ಹಲಸಂಗಿ ಭೈರುಣಗಿ, ಇಂಡಿ ಹಳ್ಳ, ಇಂಗಳಗಿ,ಹಿರೇಬೇವನೂರ ತಾಂಡಾ, ಭುಯ್ಯಾರ,ಮೀರಗಿ, ಸಾಲೋಟಗಿ ಅನೇಕ ಹಳ್ಳದಿಂದ ಭೀಮಾನದಿಗೆ ನೀರು ಸೇರಲು ಆರಂಭವಾಗಿದ್ದು ರೈತರಿಗೆ , ನದಿ ಪಾತ್ರದ ಜನರಿಗೆ ಸಂತಸ ಇಮ್ಮಡಿಗೊಂಡಿದೆ.
ಇದೇ ಪ್ರಥಮ ಬಾರಿಗೆ ಹಳ್ಳದಲ್ಲಿ ನೀರು ಹರಿದು ಭೀಮಾನದಿಗೆ ಸೇರುತ್ತಿದೆ. ಅನೇಕ ವರ್ಷಗಳಿಂದ ಬೆಸಿಗೆ ಬಂತೇ ದರೆ ಸಾಕು ಜನ ಜಾನುವಾರಗಳು ಅಷ್ಠೇ ಎಕೆ ಭೀಮಾನದಿಯ ಬತ್ತುತ್ತಿರುವುದರಿಂದ ನದಿ ಪಾತ್ರದ ಜನರು ಕೂಡಾ ನೀರಿಗಾಗಿ ಪರಿತಪ್ಪಿಸುತ್ತಿದ್ದರು ಇಂತಹ ಸಂಕಷ್ಟದ ಪರಸ್ಥಿತಿಯಲ್ಲಿ ಕೃಷ್ಣಾ ಮುಖ್ಯ ಕಾಲುವೆಗೆ ಹರಿಬಿಟ್ಟು ನದಿಗೆ ನೀರು ಹರಿಸಿರುವುದರಿಂದ ಹಳ್ಳ ತೀರದ ಹಾಗೂ ಬೋರವೇಲ್ಲ್ಗಳು ,ತೆರೇದ ಭಾವಿಗಳು ಅಂತರ್ಜಲಮಟ್ಟ ಹೆಚ್ಚಾಗಿ ಇಡೀ ತಾಲೂಕಿನಾದ್ಯೆಂತ ಗ್ರಾಮಗಳ ಜನತೆ ಶಾಸಕ ಯಶವಂತರಾಯಗೌಡ ಪಾಟೀಲರ ರೈತರ ,ಜನ ಜಾನುವಾರಗಳ ಮೇಲಿನ ಪ್ರೀತಿ, ಕರುಣೆಗೆ ಶಾಸಕರ ನಡೆಗೆ ಮತಕ್ಷೇತ್ರದ ಜನತೆ ಹಾಡಿ ಹಾರೈಸುವಂತಾಗಿದೆ ಎನ್ನುತ್ತಿದ್ದಾರೆ.
ಕಾಲುವೆ ಮಾಡಿದರೂ ನೀರೆ ಕಂಡಿರಲ್ಲಿಲ್ಲ:ಕಳೆದ ೨೨ ವರ್ಷಗಳಿಂದ ತಾಲೂಕಿನ ಇನೀತರಕಡೆ ನೀರೇ ಕಾಣದ ಪ್ರದೇಶಗಳಿದ್ದವು ಇಂತಹ ಭೀಕರ ಪರಸ್ಥಿತಿಯಲ್ಲಿ ರಾಂಪೂರ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಎಲ್ಲಾ ಕಡೇಯಿಂದ ವರದಿ ತರಿಸಿಕೊಂಡು ೧.೩ಕ್ಕೆ ರಾಂಪೂರ ಅಧೀಕ್ಷಕ ಅಭಿಯಂತರ ಅಧಿಕಾರ ವಹಿಸಿಕೊಂಡ ಮರುದಿನವೇ ಅಂದರೆ ನ,೪ ರಂದು ಇಂಡಿಯಲ್ಲಿ ಸಭೆ ಕರೆದು ಅವರ ಸಿಬ್ಬಂದಿಗಳ ಸಹಕಾರದೊಂದಿಗೆ ಹಗಲು ರಾತ್ರಿ ಎನ್ನದೆ ಕರ‍್ಯ ಮಾಡಿದ ಅಧಿಕಾರಿ ಮನೋಜಕುಮಾರ ಪ್ರಯತ್ನ ಹಾಗೂ ಶಾಸಕರಾದ ಯಶವಂತರಾಯಗೌಡ ಪಾಟೀಲರು ಈ ಭಾಗದ ರೈತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಕಾಲುವೆಗೆ ನೀರು ಹರಿಸಲೆಬೇಕು ಎಂಬ ಸರಕಾರದ ಮೇಲೆ ಹೆರಿದ ಧಿಟ್ಟ ನಿರ್ಧಾರದಿಂದ ೨೨-೩೦ ವರ್ಷಗಳ ವರೆಗೆ ಕಾಣದೆ ಇರುವ ಕಾಲುವೆಗಳಿಗೆ ನೀರು ಹರಿಸಿ ಮತ್ತಷ್ಟು ಜನಾನುರಾಗಿ ಶಾಸಕರಾಗಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಿಂದ ನೋಡ ಬಹುದಾಗಿದೆ.
*
ಮತಕ್ಷೇತ್ರದ ಜನತೆ ಹೃದಯವಂತರು ಈ ಭಾಗದ ಜನ ಸದಾ ಕಷ್ಟದಲ್ಲಿದ್ದಾರೆ. ಇದನ್ನು ಅರಿತು ಕಾಲುವೆ ಕೊನೆ ಭಾಗದವರೆಗೆ ನೀರು ಹರಿಸಿ ಜನ ಜಾನುವಾರಗಳಿಗೆ ಕುಡಿಯಲು ನೀರು ಒದಗಿಸಲು ಸರಕಾರದ ಮೇಲೆ ಒತ್ತಡ ಹಾಕಿರುವೆ ಆದರೆ ಒಳ್ಳೇಯ ಅಧಿಕಾರಿಗಳು ಇದ್ದರೆ ಎನ್ನೇಲ್ಲಾ ಮಾಡಲು ಸಾಧ್ಯ ಎಂಬುದು ರಾಂಪೂರ ಅಧೀಕ್ಷಕ ಮನೋಜಕುಮಾರ ಗಡಬಳ್ಳಿಕಾಲುವೆ ಕೊನೆಯ ಭಾಗದವರೆಗೂ ,ಹಳ್ಳ,ಕೊಳ್ಳ ,ಭೀಮಾನದಿಯವರೆಗೂ ನೀರು ಹರಿಸಿ ರೈತರ,ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.ಶಾಸಕ ಯಶವಂತರಾಯಗೌಡ ಪಾಟೀಲ
ಶಾಸಕ ಯಶವಂತರಾಯಗೌಡ ಪಾಟೀಲರ ಸತತ ಪ್ರಯತ್ನ ಹಾಗೂ ಕಾಲುವೆಯ ಕೊನೆ ಭಾಗದವರೆಗೂ ನೀರು ಹರಿಸಬೇಕು ಎಂಬ ಒತ್ತಾಶೇಯದ ಮೇರೆಗೆ ನೀರು ಹರಿಸಲು ಪ್ರಯತ್ನಿಸಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾ ಕಾಲುವೆ ನೀರು ದೊರೆಯಲಿದೆ, ಕಾಲುವೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವುರಿಂದ ಕೊನೆ ಭಾಗದವರೆಗೂ ನೀರು ತಲುಪಿವೆ.ರಾಂಪೂರ ಅಧೀಕ್ಷಕ ಮನೋಜಕುಮಾರ ಗಡಬಳ್ಳಿ