ಬಾಂದಾರಿನಲ್ಲಿ ನೀರು ಶೇಖರಣೆಗೆ ಮಾಡಲು ರೈತರ ಮನವಿ
ಕೊಲ್ಹಾರ:ರಾಷ್ಟ್ರೀಯ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿ ಬರುವ ಗರಸಂಗಿ ಹಳ್ಳಕ್ಕೆ ಹೊಂದಿಕೊಂಡಿರುವ ಕೊಲ್ಹಾರ ಬ್ರಿಜ್ ಬಾಂದಾರಿನಲ್ಲಿ ನೀರು ಶೇಖರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮುಖಂಡ ಪವಾಡೆಪ್ಪ ಸೊನ್ನದ ನೇತೃತ್ವದಲ್ಲಿ ಪಟ್ಟಣದ ರೈತರು ಎಪಿಎಂಸಿ ಜವಳಿ ಸಕ್ಕರೆ ಸಚಿವ ಶಿವಾನಂದ ಪಾಟೀಲರಿಗೆ ಮನವಿ ಸಲ್ಲಿಸಿದರು.
190 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಹೊಂದಿರುವ ಈ ಬಾಂದಾರಿನಲ್ಲಿ ನೀರು ಸಂಗ್ರಹ ಮಾಡಿದಲ್ಲಿ ಈ ವ್ಯಾಪ್ತಿಯ ಜನ ಜಾನುವಾರು ಗಳಿಗೆ ಅನುಕೂಲವಾಗುತ್ತದೆ. ಹಾಗಾಗಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.