ಉತ್ತಮ ಸಮಾಜ ಕಟ್ಟಲು ಶ್ರಮಿಸಿದ ಬಸವಣ್ಣನವರು: ರಾಜಶೇಖರ ಉಮರಾಣಿ
ಕೊಲ್ಹಾರ:ಸರ್ವ ಸಮುದಾಯಗಳನ್ನು ಒಗ್ಗೂಡಿಸಿ ಉತ್ತಮ ಸಮಾಜ ಕಟ್ಟಲು ಶ್ರಮಿಸಿದವರಲ್ಲಿ ವಿಶ್ವಗುರು ಬಸವಣ್ಣನವರ ಮೊದಲಿಗರಾಗಿ ನಿಲ್ಲುತ್ತಾರೆ ಎಂದು ಶಿಕ್ಷಕ ಹಾಗೂ ಕನ್ನಡ ಪಂಡಿತರಾದ ರಾಜಶೇಖರ ಉಮರಾಣಿ ಹೇಳಿದರು.
ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಎಂಬ ಘೋಷವಾಕ್ಯ ಇರುವ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವುದಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕ ದಂಡಾಧಿಕಾರಿಗಳ‌ ಕಾರ್ಯಾಲಯದಲ್ಲಿ ಬಸವಣ್ಣನವರ ಭಾವಚಿತ್ರ ಅನಾ ವರಣಗೊಳಿಸುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು ಜಾತ್ಯತೀತ ತತ್ವವುಳ್ಳ ಬಸವಣ್ಣನವರು ಅತ್ಯಂತ ಉತ್ಕೃಷ್ಟ ವ್ಯಕ್ತಿತ್ವವುಳ್ಳ ನಾಯಕರು. ಸರ್ವರಿಗೂ ಪ್ರೀಯವಾದ ವಚನಗಳನ್ನು ನೀಡಿ, ಸಂಸ್ಕೃತಿಯನ್ನು ಪ್ರಚೂರಪಡಿಸಿ ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಣೆ ಮಾಡಿ ಕೊಂಡು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಅವಿರತವಾಗಿ ಶ್ರಮಿಸುವ ಮೂಲಕ ಅಜರಾಮರವಾಗಿ ಉಳಿದಿದ್ದಾರೆ ಎಂದು ಅವರು ಹೇಳಿದರು.ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿ ಎಸ್.ಎಸ್ ನಾಯಕಲಮಠ, ಪ ಪಂ ಮುಖ್ಯಾಧಿಕಾರಿ ಉಮೇಶ್ ಛಲವಾದಿ ಸಹಿತ ಪ ಪಂ ಸದಸ್ಯರು, ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.