ಶೈನ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ
ಕೊಲ್ಹಾರ:ಪಟ್ಟಣದ ಎ.ಎಚ್.ಪಿ. ಶಿಕ್ಷಣ ಸಂಸ್ಥೆಯ ಸನ್ ಶೈನ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಫೆಬ್ರವರಿ 23 ರ ಶುಕ್ರವಾರ ಸಾಯಂಕಾಲ 6 ಗಂಟೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶರೀಫಖಾನ ಪಠಾಣ ಹೇಳಿದ್ದಾರೆ.
ಪಟ್ಟಣದ ಆಜಾದ್ ನಗರದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ಜರುಗಲಿದೆ ಕಾರ್ಯಕ್ರಮದ ಧಿವ್ಯ ಸಾನಿಧ್ಯವನ್ನು ಡಾ. ಸೈಯ್ಯದ ಮುರ್ತುಜಾ ಹುಸೈನಿ ಸಜ್ಜಾದ ನಶೀನ್‌ ಆಸ್ತಾನಾ ಯೆ ಹಾಶಿಂಪೀರ್ ದಸ್ತಗೀರ (ರ.ಅ) ವಿಜಯಪುರ, ಶ್ರೀ ಘ.ಮ.ಪೂ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಕಲ್ಯಾಣಿ ಕಟ್ಟಿಮನಿ ಹಿರೇಮಠ ಬೇಲೂರು-ಕೊಲ್ದಾರ, ಸಾನಿಧ್ಯ ಡಾ. ಸೈಯ್ಯದ ರುಹುಲ್ಲಾ ಹುಸೇನಿ ಉರ್ಫ ತಕೀ ಪೀರಾ ಸಜ್ಜಾದ ನಶೀನ್‌ ಆಸ್ತಾನಾ ಯೆ ಸಿಬಗತುಲ್ಲಾ ಉರ್ಫ ಆರ್ಕಾಟ್ ದರ್ಗಾ ವಿಜಯಪುರ, ಅಲ್ ಹಾಜ್ ಡಾ.ಭಕ್ತಿಯಾರಖಾನ್ ಪಠಾಣ ಪೀಠಾಧಿಪತಿಗಳು ಖಾನಕಾಯೆ ಗಫಾರಿಯಾ ಕೊಲ್ದಾರ, ಘ.ಮ.ಪು ಡಾ.ಕೈಲಾಸನಾಥ ಮಹಾಸ್ವಾಮಿಗಳು ಶೀಲವಂತ ಹಿರೇಮಠ ಕೊಲ್ಹಾರ. ಉದ್ಘಾಟಕರಾಗಿ ಶ್ರೀಮತಿ ಭಾಗ್ಯಶ್ರೀ ಎಸ್. ಕೆ ಉಪ ನಿಬಂಧಕರು, ಸಹಕಾರ ಸಂಘಗಳ ಇಲಾಖೆ ವಿಜಯಪುರ, ಜ್ಯೋತಿ ಬೆಳಗಿಸುವವರು ಮೈನುದ್ದಿನ ಮನ್ನಾಬಾಯಿ ಪ್ರಗತಿಪರ ರೈತರು, ಕೊಲ್ಹಾರ.ಅಧ್ಯಕ್ಷತೆ ಶರೀಫಖಾನ ಪಠಾಣ ಅಧ್ಯಕ್ಷರು ಎ.ಎಚ್.ಪಿ. ಶಿಕ್ಷಣ ಸಂಸ್ಥೆ, ಕೊಲ್ಹಾರ. ಮುಖ್ಯ ಅತಿಥಿಗಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ಘಟಕ ರಾಜ್ಯ ಉಪಾಧ್ಯಕ್ಷರಾದ ಅಲ್ ಹಾಜ್ ಉಸ್ಮಾನ್ ಪಟೇಲ ಖಾನ್ನವರ್, ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಬಿ ಪತಂಗಿ, ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ, ಸಿಕ್ಯಾಬ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಎಂ. ಎಲ್. ಹೊನ್ಯಾಳ, ಸಿ.ಎಮ್. ಗಣಕುಮಾರ, ಮೋದಿನ ಪಟೇಲ ಖಾನ್ನವರ, ಅಕ್ಖರ್‌ಬಾಷಾ ಅಲ್ಲಖಾನ (ಪೋಲಿಸ್ ಇಲಾಖೆ ಬೆಳಗಾವಿ), ಅಮಾನತ್ ಬ್ಯಾಂಕ್ ಅಧ್ಯಕ್ಷರಾದ ಸಲೀಮ್ ಅತ್ತಾರ, ಪ ಪಂ ಸದಸ್ಯರಾದ ಸಿ.ಎಸ್ ಗಿಡ್ಡಪ್ಪಗೋಳ, ತೌಸಿಫ್ ಗಿರಗಾಂವಿ, ದಸ್ತಗೀರ ಕಲಾದಗಿ, ಬಸವರಾಜ ಹುಲ್ಯಾಳ. ಅತಿಥಿಗಳಾಗಿ ಅಲ್ ಹಾಜ್ ಹಟೇಲಸಾಬ ಕಂಕರಪೀರ್, ಪಿ.ಕೆ ಗಿರಗಾಂವಿ, ಡಾ.ವಾಯ್ ಕೆ ಹೂಗಾರ, ಅಲ್ ಹಾಜ್ ಕಾಸೀಂಸಾಬ (ಬಡೇಬಾಯಿ) ಗಿರಗಾಂವಿ, ಅಲ್ ಹಾಜ್ ಐ.ಎನ್ ತಹಶೀಲ್ದಾರ್, ಅಲ್ ಹಾಜ್ ಹಸನಸಾಬ ಚೌದ್ರಿ, ಬಾಷಾಸಾಬ ಶಿರೂರ, ಅಲ್ ಹಾಜ್ ಎಸ್.ಎಸ್ ಹಕೀಂ, ರಾಜೇಸಾಬ ಚೌದ್ರಿ, ನಾಸೀರ್ ದಿಂದಾರ, ನಿಂಗಪ್ಪ ಗಣಿ, ಎಮ್.ಆರ್ ಕಲಾದಗಿ, ಇಕ್ಬಾಲ್ ನದಾಫ್, ಅನ್ವರ ಕಂಕರಪೀರ, ದಶರಥ ಈಟಿ ಸಹಿತ ಅನೇಕರು ಉಪಸ್ಥಿತ ರಿರುವರು ಎಂದು ಹೇಳಿದ್ದಾರೆ.