 : ಬಯಲುಸೀಮೆಯ 7 ಜಿಲ್ಲೆಗಳ ಚಿತ್ರಣ ಬದಲಿಸಲಿದೆ ಎತ್ತಿನಹೊಳೆ ಯೋಜನೆ; ಇದರ ವೈಶಿಷ್ಟ್ಯಗಳು ಏನೇನು?
ಬೆಂಗಳೂರು:ರಾಜ್ಯದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ 527 ಕೆರೆಗಳನ್ನು ತುಂಬಿಸಲು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ( ) ಮೊದಲ ಹಂತದ ಕಾಮಗಾರಿಗಳನ್ನು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ( ) ಅವರು ಉದ್ಘಾಟಿಸಿದ್ದಾರೆ. ಬಯಲು ಸೀಮೆ ಜಿಲ್ಲೆಗಳ ಜನರ ಬದುಕು ಬದಲಿಸುವ ಈ ಯೋಜನೆಯ ಉದ್ದೇಶ ಹಾಗೂ ವೈಶಿಷ್ಟ್ಯಗಳ ಕುರಿತ ಮಾಹಿತಿ ಇಲ್ಲಿದೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ವೈಶಿಷ್ಟ್ಯಗಳು
ಯೋಜನೆಯ ಉದ್ದೇಶ: ಏನು?
ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗದಹಳ್ಳ ಹಾಗೂ ಕೇರಿಹೊಳೆ ಹಳ್ಳಗಳಿಗೆ ಅಡ್ಡಲಾಗಿ 8 ವಿಯರ್‌ಗಳನ್ನು ನಿರ್ಮಿಸಿ, ಈ ಹಳ್ಳಗಳ ಪ್ರವಾಹದಿಂದ ದೊರೆಯಬಹುದಾದ ನೀರಿನ ಪೈಕಿ 24.01 ಟಿ.ಎಂ.ಸಿ ನೀರನ್ನು ಮುಂಗಾರಿನ ಅವಧಿಯಲ್ಲಿ ಪೂರ್ವಾಭಿಮುಖವಾಗಿ ತಿರುಗಿಸಿ, ರಾಜ್ಯದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಹಾಗೂ 527 ಕೆರೆಗಳನ್ನು ತುಂಬಿಸುವುದು.
ಫಲಾನುಭವಿ ಜಿಲ್ಲೆಗಳು ಯಾವವು?:
7 ಜಿಲ್ಲೆಗಳ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳ 75.59 ಲಕ್ಷ (   2023-24) ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುವುದು.
ಪ್ರಯೋಜನ ಪಡೆಯಲಿರುವ ಜಿಲ್ಲೆಗಳು:
7 ಜಿಲ್ಲೆಗಳು (ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು)
ಬಳಸಿಕೊಳ್ಳುವ ನೀರಿನ ಪ್ರಮಾಣ ಎಷ್ಟು?:
24.01 ಟಿ.ಎಂ.ಸಿಕುಡಿಯುವ ನೀರಿಗಾಗಿ-14.056 ಟಿಎಂಸಿಕೆರೆ ತುಂಬಿಸಲು- 9.953 ಟಿಎಂಸಿ
ಯೋಜನೆಯ ವೆಚ್ಚ:
ಯೋಜನೆಯ ಹಂತ-1ರ ಕಾಮಗಾರಿಗಳು:ನದಿ ಪಾತ್ರದ ಕಾಮಗಾರಿಗಳು- 2 –  : .4115.33 . (7 ) ( )
ಯೋಜನೆಯ ಹಂತ-2ರ ಕಾಮಗಾರಿಗಳು:
ಯೋಜನಾ ಕಾಮಗಾರಿಗಳ ಪ್ರಸ್ತುತ ಹಂತ:
ಫೀಡರ್ ಕಾಮಗಾರಿಗಳು:ಪ್ರಗತಿಯಲ್ಲಿರುವ ಫೀಡರ್ ಪೈಪ್‌ ಲೈನ್ ಕಾಮಗಾರಿಗಳು- ಮಧುಗಿರಿ-ಪಾವಗಡ ಫೀಡರ್. ಟಿ.ಜಿ.ಹಳ್ಳಿ-ರಾಮನಗರ ಫೀಡರ್ ಹಾಗೂ ಗೌರಿಬಿದನೂರು ಫೀಡರ್.
ಪ್ರಾರಂಭಿಸಬೇಕಿರುವ ಫೀಡರ್ ಪೈಪ್‌ ಲೈನ್ ಕಾಮಗಾರಿಗಳು-ಕೋಲಾರ ಮತ್ತು ಶ್ರೀನಿವಾಸಪುರ ಫೀಡರ್