  : ರಾಗಿಣಿ, ಶುಭಾ ಪೂಂಜಾಗೂ ಕೊಳಕು ಮೆಸೇಜ್ ಕಳಿಸಿದ್ದ ರೇಣುಕಾಸ್ವಾಮಿ!
ಬೆಂಗಳೂರು: ನಟ ದರ್ಶನ್‌ ( ) ಗ್ಯಾಂಗ್‌ನಿಂದ ಕೊಲೆಯಾಗಿರುವ ರೇಣುಕಾಸ್ವಾಮಿ (  ) ಪವಿತ್ರಾ ಗೌಡಗೆ ಮಾತ್ರ ಅಸಹ್ಯ ಮೆಸೇಜ್ ಕಳುಹಿಸಿರಲಿಲ್ಲ. ಕನ್ನಡದ ಬೇರೆ ಕೆಲವು ಸ್ಟಾರ್ ನಟಿಯರಿಗೂ ಕೊಳಕು ಮೆಸೇಜ್‌ಗಳನ್ನು ಕಳುಹಿಸಿದ್ದ ಎಂಬುದು ಬಯಲಾಗಿದೆ.
ನಟ ದರ್ಶನ್‌ ಜೈಲುಪಾಲಾಗಲು ಕಾರಣವಾಗಿರುವ ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಕೋರ್ಟಿಗೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ () ಇನ್ನಷ್ಟು ಸ್ಫೋಟಕ ವಿಷಯಗಳು ಬಯಲಾಗಿವೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳಿಸಿ ತನ್ನ ಸಾವನ್ನೂ ತಾನೇ ತಂದುಕೊಂಡ ರೇಣುಕಾಸ್ವಾಮಿ, ಇತರ ಕೆಲ ನಟಿಯರಿಗೂ ಹೀಗೇ ಕಾಡಿದ್ದನಂತೆ.
ಕನ್ನಡದ ಹೆಸರಾಂತ ನಟಿಯರಾದ ರಾಗಿಣಿ ದ್ವಿವೇದಿ , ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ತನ್ನ ನಕಲಿ ಅಕೌಂಟ್‌ನಿಂದ ಅಶ್ಲೀಲ ಸಂದೇಶ ಕಳುಹಿಸಿದ್ದನಂತೆ. ಪೊಲೀಸರ ವಿಚಾರಣೆ ವೇಳೆಯಲ್ಲಿ ಇಬ್ಬರು ಆರೋಪಿಗಳು ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪ್ರದೋಶ್ ಮತ್ತು ವಿನಯ್‍ ನೀಡಿರುವ ಹೇಳಿಕೆಯಲ್ಲಿ, ರೇಣುಕಾಸ್ವಾಮಿ ಈ ನಟಿಯರಿಗೆ ಮಾತ್ರವಲ್ಲ, ಇನ್ನೂ ಹಲವು ನಟಿಯರಿಗೆ ಮೆಸೇಜ್ ಕಳುಹಿಸಿದ್ದ ಎಂಬ ಮಾತು ಉಲ್ಲೇಖವಾಗಿದೆ.
ರೇಣುಕಾಸ್ವಾಮಿ ಮೊಬೈಲ್ ನಲ್ಲಿ ರಾಗಿಣಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ಅಶ್ಲೀಲ ಮಸೇಜ್ ಕಳುಹಿಸಿದ್ದನ್ನು ನಾವು ನೋಡಿದ್ದೇವೆ ಎಂದು ಪೊಲೀಸರಿಗೆ ಆರೋಪಿಗಳು ಹೇಳಿದ್ದಾರೆ. ಅವರ ಮಾತುಗಳನ್ನು ಚಾರ್ಜ್‌ಶೀಟ್‌ನಲ್ಲೂ ದಾಖಲಿಸಲಾಗಿದೆ.
20,000 ಸಂಬಳದಲ್ಲಿ ಇವಳನ್ನು ಸಾಕ್ತೀಯಾ?
ರೇಣುಕಾಸ್ವಾಮಿ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್‌ ಮಾಡುವುದರೊಂದಿಗೆ “ತಿಂಗಳಿಗೆ 10 ಸಾವಿರ ಕೊಟ್ಟು ನಿನ್ನನ್ನು ನೋಡ್ಕೋತೀನಿ” ಎಂದು ಬರೆದಿದ್ದ. ಶೆಡ್‌ನಲ್ಲಿ ಕೂಡಿಹಾಕಲಾಗಿದ್ದ ರೇಣುಕಾಸ್ವಾಮಿಯನ್ನು ಕಂಡಕೂಡಲೇ ಸಿಟ್ಟಿನಿಂದ ಕೆಂಡವಾಗಿದ್ದ ದರ್ಶನ್‌, “…ಮಗನೇ ನನ್ನ ಹೆಂಡತಿಗೆ ಕೆಟ್ಟದಾಗಿ ಮೆಸೇಜ್‌ ಮಾಡ್ತಿಯ?” ಅಂತ ಒದ್ದಿದ್ದ. ನಿನ್ನ ಖಾಸಗಿ ಅಂಗಾಂಗದ ಫೋಟೋ ಕಳುಹಿಸ್ತೀಯಾ ಅಂತ ರೇಗಿ, ತನ್ನ ಕಾಲಿನಿಂದ ರೇಣುಕಾಸ್ವಾಮಿಯ ಎದೆ, ಮೊಣಕಾಲು ಮತ್ತು ಇತರೆ ಕಡೆಗೆ ಒದ್ದಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಒದ್ದ ಕೂಡಲೇ ರೇಣುಕಾಸ್ವಾಮಿ ಕೆಳಗೆ ಬಿದ್ದ. ಶೆಡ್‌ನಲ್ಲಿದ್ದ ಪವನ್‌, ನಂದೀಶ, ರಾಘವೇಂದ್ರ ಅವನನ್ನು ಎಬ್ಬಿಸಿದ್ದಾರೆ. ನಂತರ ದರ್ಶನ್‌ ಅಲ್ಲೇ ಇದ್ದ ಮರದ ಕೊಂಬೆಯಿಂದ ರೆಣುಕಾಸ್ವಾಮಿ ಬೆನ್ನಿಗೆ ಬಾರಿಸಿದ. ʼಎಷ್ಟೋ ನಿನ್ನ ಸಂಬಳ?ʼ ಎಂದು ಕೇಳಿದ್ದಾನೆ. ʼ20 ಸಾವಿರʼ ಅಂತ ರೇಣುಕಾಸ್ವಾಮಿ ಅಳುತ್ತಲೇ ಉತ್ತರಿಸಿದ್ದ. ʼ20 ಸಾವಿರ ದುಡೀತಿಯಾ, ನನ್ನ ಹೆಂಡತಿನಾ ಸಾಕ್ತೀಯಾ?ʼ ಅಂತ ರೇಣುಕಾಸ್ವಾಮಿ ತಲೆಯನ್ನು ಅಲ್ಲೇ ನಿಲ್ಲಿಸಿದ್ದ ಲೈಲ್ಯಾಂಡ್‌ ಲಾರಿ ಗಾಡಿಗೆ ಗುದ್ದಿದ್ದಾನೆ ಎಂದು ಗೊತ್ತಾಗಿದೆ.
ಈ ಸುದ್ದಿ ಓದಿ:  : 60ರ ವೃದ್ಧೆಯ ಮೇಲೂ ಪೌರುಷ ತೋರಿದ ಪ್ರಜ್ವಲ್‌ ರೇವಣ್ಣ! ಕೈಮುಗಿದು ಬೇಡಿದರೂ ಬಿಡದೆ ವಿಡಿಯೋ