   : ಬಿಜೆಪಿ-ಜೆಡಿಎಸ್‌ ಸರ್ಕಾರದ ಅವಧಿಯ ಹಗರಣಗಳ ಪರಿಶೀಲನೆಗೆ ಪರಮೇಶ್ವರ್‌ ನೇತೃತ್ವದ ಸಮಿತಿ
ಬೆಂಗಳೂರು:ಬಿಜೆಪಿ, ಜೆಡಿಎಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ರಚಿಸಿರುವ ವಿವಿಧ ತನಿಖಾ ಸಂಸ್ಥೆೆಗಳ ಪ್ರಗತಿ ಪರಿಶೀಲನೆ ಮಾಡಲು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಮಿತಿ (   ) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕಾಂಗ್ರೆೆಸ್ ಅಧಿಕಾರಕ್ಕೆೆ ಬರುತ್ತಿದ್ದಂತೆ ವಿವಿಧ ಅಕ್ರಮ ಆರೋಪಕ್ಕೆೆ ಸಂಬಂಧಿಸಿದಂತೆ ಹಲವು ಸಮಿತಿಗಳನ್ನು ರಚಿಸಲಾಗಿದೆ. ಇವುಗಳಲ್ಲಿ ಅನೇಕ ಸಮಿತಿಗಳಿಂದ ನಿರೀಕ್ಷಿತ ವೇಗದಲ್ಲಿ ಕಾರ್ಯನಡೆಯುತ್ತಿಲ್ಲ ಎನ್ನುವ ಅಸಮಾಧಾನವನ್ನು ಹಿರಿಯ ಸಚಿವರುಗಳೇ ಹೊರಹಾಕಿದ್ದರು. ಆದ್ದರಿಂದ ಈ ಎಲ್ಲ ಸಮಿತಿಗಳ ತನಿಖೆಯ ಪ್ರಗತಿ, ಸಮನ್ವಯ ಸೇರಿ ಮುಂದಿನ ಕಾರ್ಯವಿಧಾನದ ಬಗ್ಗೆೆ ಚರ್ಚಿಸಲು ಸಮಿತಿಯನ್ನು ರಚಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | : ಆನ್‌ಲೈನ್‌ ವಂಚನೆ ತಡೆಯಲು ಕೇಂದ್ರ ಸರ್ಕಾರದಿಂದ 5000 ಸೈಬರ್‌ ಕಮಾಂಡೊಗಳ ನೇಮಕ!
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಈ ಸಮಿತಿಗೆ ಅಧ್ಯಕ್ಷರಾಗಿದ್ದು, ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ ಹಾಗೂ ಸಂತೋಷ್ ಲಾಡ್ ಸದಸ್ಯರಾಗಿದ್ದಾರೆ.