  : ಹಿಂದು ದೇವರುಗಳಿಗೆ ಅಪಮಾನ; ‘ ’ ಫೇಸ್‌ಬುಕ್ ಪೇಜ್‌ ವಿರುದ್ಧ ಎಫ್‌ಐಆರ್‌
ಮಂಗಳೂರು:ಕೃತಕ ಬುದ್ಧಿಮತ್ತೆ ( ) ಬಳಸಿಕೊಂಡು ಹಿಂದು ದೇವರುಗಳ ಫೋಟೊಗಳನ್ನು ಅವಹೇಳನಕಾರಿಯಾಗಿ (  ) ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವ ‘ ’ ಫೇಸ್‌ಬುಕ್‌ ಪೇಜ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜನಜಾಗೃತಿ ಸಮಿತಿ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ ’ ಹೆಸರಿನ ಫೇಸ್‌ಬುಕ್‌ ಪೇಜ್ ಒಂದರಲ್ಲಿ ಅನೇಕ ದಿನಗಳಿಂದ ಎಐ ( ) ಬಳಸಿಕೊಡು ಹಿಂದು ದೇವರುಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೊಗಳನ್ನು ನಿರಂತರವಾಗಿ ಫೇಸ್‌ಬುಕ್‌ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ. ಈ ಎಐ ಆಧಾರಿತ ಚಿತ್ರಗಳಿಂದ ಕೋಟ್ಯಂತರ ಹಿಂದುಗಳ  ಧಾರ್ಮಿಕ  ಭಾವನೆಗಳಿಗೆ ಧಕ್ಕೆಯಾಗಿದೆ. ಸಂಬಂಧಿತ ಸೈಬರ್ ಕ್ರೈಮ್ ವಿಭಾಗವು ಇದರ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಪೇಜ್‌ನ ಅಡ್ಮಿನ್‌ಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿಂದು ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ವಿಜಯ ಕುಮಾರ ಆಗ್ರಹಿಸಿದ್ದಾರೆ.
ಈ ಬಗ್ಗೆ ಸೆ. 10ರಂದು ಮಂಗಳವಾರದಂದು ಮಂಗಳೂರಿನ ಸೈಬರ್ ಕ್ರೈಮ್ ವಿಭಾಗಕ್ಕೆ ಸಮಿತಿಯ ಸಮನ್ವಯಕರು ಮತ್ತು ನ್ಯಾಯವಾದಿಗಳ ಒಕ್ಕೂಟವು ಸೇರಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ‍್ಯ ಎಂದು ತಮ್ಮ ಬಗ್ಗೆ ಬರೆದುಕೊಂಡ ‘ ’ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರತಿದಿನ 7 ರಿಂದ 8 ಹಿಂದು ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳು ಪ್ರಸಾರವಾಗುತ್ತಿದ್ದು, ಇದರಲ್ಲಿ ಹಿಂದು ಧರ್ಮದ ಶ್ರದ್ಧಾಸ್ಥಾನ ಭಗವಾನ್ ಶಿವ, ಕೃಷ್ಣ, ರಾಮ, ಗಣೇಶ ಮೊದಲಾದ ದೇವರು ಸ್ತ್ರೀಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವಂತೆ, ಓಡಿಸುತ್ತಿರುವಂತೆ, ಕುಸ್ತಿ ಆಡುತ್ತಿರುವಂತೆ… ಹೀಗೆ ವಿವಿಧ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಪೋಸ್ಟ್‌ಗಳಿಗೆ ಅನೇಕ ಮತಾಂಧರು ಧಾರ್ಮಿಕ ಭಾವನೆಗಳನ್ನು ನೋಯಿಸುವಂತೆ ಕಮೆಂಟ್‌ಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಹಿಂದುಗಳನ್ನು ಕೆರಳಿಸುವ ಬಹುದೊಡ್ಡ ಷಡ್ಯಂತ್ರ ಇದರಲ್ಲಿ ಅಡಗಿದೆ ಎಂದು ಹಿಂದು ಜನಜಾಗೃತಿ ಸಮಿತಿ ಮುಖಂಡರು ಕಿಡಿಕಾರಿದ್ದಾರೆ.
ವಕೀಲ ತೀರ್ಥೇಶ್ ಅವರು ಮಾತನಾಡಿ, ಫೇಸ್‌ಬುಕ್‌ ಪೇಜ್ ‘ ’ ವನ್ನು ನಿಯಂತ್ರಿಸುತ್ತಿರುವ ಅಡ್ಮಿನ್ ಮತ್ತು ಪೇಜ್‌ನಲ್ಲಿ ಹಿಂದು ದೇವರ ಅವಹೇಳನ ಮಾಡುವ ಕಮೆಂಟ್‌ಗಳನ್ನು ಹಾಕುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 299, 192, 353 ಮತ್ತು 67   ಸೆಕ್ಷನ್ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಧಾರ್ಮಿಕ ಭಾವನೆಗೆ ನೋವುಂಟು ಮಾಡಲು ಎಡೆಮಾಡಿಕೊಡುವ   ಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | : ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಭರ್ಜರಿ ಬೇಟೆ; ಮೂವರು ಜೈಷ್‌ ಉಗ್ರರ ಎನ್‌ಕೌಂಟರ್‌
ಈ ವೇಳೆ ವಕೀಲರಾದ ಈಶ್ವರ ಕೊಟ್ಟಾರಿ, ಯತೀಶ್, ವಿಜಯ ಕುಮಾರ್, ಸುಷ್ಮಾ, ಉದ್ಯಮಿಗಳಾದ ದಿನೇಶ್ ಎಂ. ಪಿ. ಚಂದ್ರಕಾಂತ್ ಕಾಮತ್, ಪ್ರಶಾಂತ್ ಕಾಂಚನ್, ಬಾಲಗಂಗಾಧರ, ನಾರಾಯಣ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಪೊಲೀಸ್ ನಿರೀಕ್ಷಕರಾದ ಭಾರತಿ ವರು ದೂರನ್ನು ಸ್ವೀಕರಿಸಿ, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.