 :‌ ಈದ್​ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಸೌಂಡ್, ಹರಿತ ಆಯುಧ ನೋ ನೋ! ಪೊಲೀಸ್‌ ಸೂಚನೆ
ಬೆಂಗಳೂರು: ಈದ್‌ಮಿಲಾದ್ ( ) ಹಬ್ಬದ ಪ್ರಯುಕ್ತ ಬೆಂಗಳೂರು ನಗರ ( ) ಪೊಲೀಸರು ( ) ಕೆಲ ಸೂಚನೆಗಳನ್ನು ಹೊರಡಿಸಿದ್ದಾರೆ. ಅದರಂತೆ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಡಿಜೆ ಮ್ಯೂಸಿಕ್‌ ( ) ಬಳಸುವಂತಿಲ್ಲ. ಹರಿತವಾದ ಆಯುಧ ( ) ಇಟ್ಟುಕೊಳ್ಳುವಂತಿಲ್ಲ. ಸ್ತಬ್ಧ ಚಿತ್ರ ಇರುವಂತಿಲ್ಲ.
ಈದ್‌ಮಿಲಾದ್ ಹಬ್ಬದ ದಿನಗಳಾದ ಸೆ.15 ಹಾಗೂ 16ರಂದು ಮುಸ್ಲಿಮರು ನಗರದಲ್ಲಿ ಮೆರವಣಿಗೆ ನಡೆಸಲಿದ್ದಾರೆ. ವೈಎಂಸಿಎ ಮೈದಾನ, ಮಿಲ್ಲರ್‌ ರಸ್ತೆ, ಖುದ್ದುಸಾಬ್ ಈದ್ಗಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರದ ಸುಲ್ತಾನ್‌ಜೀ ಗುಂಟಾ ಮೈದಾನ ಮತ್ತಿತರ ಕಡೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಈ ಸಂಬಂಧ ಹಬ್ಬದ ದಿನದಂದು ಕೆಲವು ಸೂಚನೆಗಳನ್ನು ಪಾಲಿಸುವಂತೆ ಬೆಂಗಳೂರು ಪೊಲೀಸ್​ ಆದೇಶ ಹೊರಡಿಸಿದೆ.
ಪೊಲೀಸ್‌ ಸೂಚನೆಗಳು
ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕಗಳಿಂದ ಹೊರಡುವ ಶಬ್ದದ ಪ್ರಮಾಣವನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳಬೇಕು. ಹಾಗೂ ಯಾವುದೇ ಕಾರಣಕ್ಕೂ ಡಿಜೆ ಸೌಂಡ್ ಸಿಸ್ಟಂ ಅಳವಡಿಸಲು ಅವಕಾಶ ಇರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:  : ಈದ್‌ ಮಿಲಾದ್‌ ಸಂಭ್ರಮಕ್ಕೆ ಸಾಥ್‌ ನೀಡುವ 3 ಟ್ರೆಂಡಿ ಮೆಹಂದಿ ಡಿಸೈನ್ಸ್!