 : ಸಾಲ ತೀರಿಸಲು ಸ್ನೇಹಿತರ ಜೊತೆ ‘ಸಹಕರಿಸದʼ ಪತ್ನಿಯನ್ನು ಕೊಂದ ಪಾತಕಿ!
ಯಾದಗಿರಿ: ತಾನು ಮಾಡಿದ ಸಾಲ ತೀರಿಸಲು ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪುವಂತೆ ಪತಿಯೊಬ್ಬ ಪತ್ನಿಯನ್ನು ( ) ಬಲಾತ್ಕರಿಸಿದ್ದು, ಅದಕ್ಕೆ ಒಪ್ಪದೆ ಹೋದಾಗ ಆಕೆಯನ್ನು ಹತ್ಯೆ ( ) ಮಾಡಿದ್ದಾನೆ. ವಿಕೃತ ಪತಿಯ ಈ ಪೈಶಾಚಿಕ ಕೃತ್ಯ ಯಾದಗಿರಿ ( ) ಜಿಲ್ಲೆ ಶಹಾಪುರ ತಾಲೂಕಿನ ಹುಣಸಗಿಯಲ್ಲಿ ನಡೆದಿದೆ.
ಬೇರೆ ಪುರುಷರೊಂದಿಗೆ ಸೇರಲು ಒಪ್ಪದ ಹೆಂಡತಿಯನ್ನು ಗಂಡ ಕೊಲೆ ಮಾಡಿದ್ದು, ಹುಣಸಗಿಯ ಭೀಮಣ್ಣ ಎಂಬಾತ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಆರೋಪಿ. ಆರೋಪಿ ಭೀಮಣ್ಣ ಭಾಗಲೇರನನ್ನು ಪೊಲೀಸರು ಬಂಧಿಸಿದ್ದಾರೆ.
ಗಂಗನಾಳ ಗ್ರಾಮದ ಮಹಿಳೆಯೊಬ್ಬರು ಕಳೆದ ಜುಲೈ 25 ರಂದು ಗಂಡನ ಜೊತೆ ಮಲಗಿದ್ದ ವೇಳೆ ಸಂಶಯಾಸ್ಪದವಾಗಿ ಮೃತಪಟ್ಟಿದ್ದರು. ಮೃತ ಮಹಿಳೆಯ ಸಹೋದರ ತಂಗಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಂಗಿಯ ಮೊಬೈಲ್ ಗಮನಿಸಿದಾಗ ಕಾಲ್ ರೆಕಾರ್ಡಿಂಗ್‌ನಲ್ಲಿ ಭೀಮಣ್ಣ ಭಾಗಲೇರ ಪತ್ನಿಗೆ ಕಿರುಕುಳ ನೀಡಿರುವುದು ಪತ್ತೆಯಾಗಿದೆ. ನೀನು ಬೇರೆಯವರ ಜೊತೆಗೆ ಲೈಂಗಿಕ ಕ್ರಿಯೆ ನಡೆಸಬೇಕು, ಇದರಿಂದ ನನಗೆ ಖುಷಿಯಾಗುತ್ತದೆ, ಮಕ್ಕಳು ಆಗುತ್ತವೆ, ದುಡ್ಡು ಬರುತ್ತದೆ, ಸಾಲ ತೀರುತ್ತದೆ. ನೀನು ಇದನ್ನು ಮಾಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಜುಲೈ 25ರಂದು ಭೀಮಣ್ಣ ಬಾಗಲೇರ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಉಳಿದವರು ಕೊಲೆ ಮಾಡಲು ಸಹಕಾರ ನೀಡಿದ್ದಾರೆ ಎಂದು ಮೃತಳ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಭೀಮಣ್ಣನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: : ಮಸೀದಿ ಮೇಲೆ ಕಲ್ಲು ತೂರಾಟ, ಸುರತ್ಕಲ್‌ನಲ್ಲಿ ಆತಂಕ