 : ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ, ಯುವಕನ ಬೆತ್ತಲೆ ಮಾಡಿ ಹಲ್ಲೆ
ಬೆಂಗಳೂರು: ನಗರದಲ್ಲಿ ರೌಡಿ ಶೀಟರ್‌ಗಳು ( ) ಯಾವ ಕಾನೂನಿನ ಭಯವಿಲ್ಲದೆ ತಮ್ಮ ಅಟ್ಟಹಾಸ ( ) ಮುಂದುವರಿಸಿದ್ದಾರೆ. ಯುವಕನೊಬ್ಬನನ್ನು ನಡು ರಸ್ತೆಯಲ್ಲೇ ಬೆತ್ತಲೆಗೊಳಿಸಿ, ಆತನ ಮೇಲೆ ಹಲ್ಲೆ ಮಾಡಿ ( ), ಓಡಿಸಿದ ಘಟನೆ ನಡೆದಿದೆ. ರೌಡಿಗಳ ಕೀಚಕತನ (  ) ಕಂಡು ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.‌ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಗೋಪಾಲನಗರದಲ್ಲಿ ಘಟನೆ ನಡೆದಿದೆ. ನಡುರಸ್ತೆಯಲ್ಲೇ ರೌಡಿ ಶೀಟರ್‌ಗಳು ಯುವಕನೊಬ್ಬನನ್ನು ಬಟ್ಟೆ ಬಿಚ್ಚಿಸಿ ಸಂಪೂರ್ಣ ಬೆತ್ತಲೆಗೊಳಿಸಿ, ಆತನ ಮುಖ, ದೇಹದಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲಾ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ. ನಂತರ ಆತನನ್ನು ಬೆತ್ತಲೆಯಾಗಿ ನಡು ರಸ್ತೆಯಲ್ಲಿ ಓಡಿಸಿದ್ದಾರೆ.
ರೌಡಿಗಳಿಂದ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಯುವಕ ಬೆತ್ತಲೆಯಾಗಿ ಓಡಿರುವುದಾಗಿ ಹೇಳಲಾಗುತ್ತಿದೆ. ರೌಡಿಗಳ ಅಟ್ಟಹಾಸದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಕೃತ್ಯ ಎಸಗಿದ ರೌಡಿ ಶೀಟರ್‌ಗಳ ತಲಾಶೆ ಆರಂಭಿಸಿದ್ದಾರೆ.
ಇದನ್ನೂ ಓದಿ: : ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಭದ್ರತಾ ವೈಫಲ್ಯ; ವೇದಿಕೆಗೆ ನುಗ್ಗಿದ ವ್ಯಕ್ತಿ