 : ಮೈಸೂರು ಅರಮನೆಯಲ್ಲಿ ಸದ್ಯವೇ ಇನ್ನೊಂದು ಮಗು? ನವರಾತ್ರಿ ಪೂಜೆಯಲ್ಲಿ ತ್ರಿಶಿಕಾ ಲುಕ್
ಮೈಸೂರು: ಮೈಸೂರು ಅರಮನೆಯಲ್ಲಿ ( ) ನಡೆದ ಖಾಸಗಿ ದರ್ಬಾರ್‌ನಲ್ಲಿ ಯುವರಾಣಿ ತ್ರಿಶಿಕಾ ಕುಮಾರಿ (  ) ಅವರ ಲುಕ್‌ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ( ) ಚರ್ಚೆಗೆ ಕಾರಣವಾಗಿದೆ. ಅವರು ಮತ್ತೊಮ್ಮೆ ಗರ್ಭಿಣಿ () ಆಗಿದ್ದಾರಾ ಎಂದು ಜನ ( ) ಹುಬ್ಬೇರಿಸುತ್ತಿದ್ದಾರೆ.
ಅದಕ್ಕೆ ಕಾರಣ ಇಲ್ಲದಿಲ್ಲ. ಮೈಸೂರು ಅರಮನೆಯಲ್ಲಿ ನವರಾತ್ರಿ ಹಬ್ಬದ ಆರಂಭದ ದಿನ ವೈಭವದ ಪೂಜೆ ಹಾಗೂ ಖಾಸಗಿ ದರ್ಬಾರ್‌ನೊಂದಿಗೆ ಶುರುವಾಯಿತು. ಮೈಸೂರು ಸಂಸದ ಹಾಗೂ ಮಹಾರಾಜ ಯದುವೀರ ಶ್ರೀಕಂಠದತ್ತ ಒಡೆಯರ್‌ ( ) ಖಾಸಗಿ ದರ್ಬಾರ್‌ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಹಾರಾಜರಿಗೆ ಗೌರವ ಸಮರ್ಪಣೆ ನಡೆಯಿತು. ಯುವರಾಣಿ ತ್ರಿಶಿಕಾ ಕುಮಾರಿ ಅದನ್ನು ನೆರವೇರಿಸಿದರು. ಜೊತೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಹಾಗೂ ಯುವರಾಜ ಆದ್ಯವೀರ್‌ ಕೂಡ ಅಲ್ಲಿದ್ದರು.
ಈ ಸಂದರ್ಭದಲ್ಲಿ ತ್ರಿಶಿಕಾ ಕುಮಾರಿ ಅವರು ತಮ್ಮ ಹೊಟ್ಟೆಯನ್ನು ಸೀರೆಯ ಸೆರಗು ಬಳಸಿ ಪೂರ್ತಿಯಾಗಿ ಮುಚ್ಚಿಕೊಂಡಿದ್ದರು. ಉಬ್ಬಿದ ಹೊಟ್ಟೆಯನ್ನು ಅವರು ಮುಚ್ಚಿಕೊಂಡಂತಿತ್ತು. ಜೊತೆಗೆ ಅವರ ನಿಧಾನ ನಡಿಗೆ ಹಾಗೂ ನಡೆನುಡಿಗಳು ಅವರು ಗರ್ಭಿಣಿ ಎಂಬುದನ್ನು ಸಾರುವಂತಿದ್ದವು. ಈ ಖಾಸಗಿ ದರ್ಬಾರ್‌ನ ಕ್ಲಿಪ್ಪಿಂಗ್‌ಗಳನ್ನು ಗಮನಿಸಿದವರು ʼತ್ರಿಶಿಕಾ ಕುಮಾರಿ ಮತ್ತೊಮ್ಮೆ ಪ್ರೆಗ್ನೆಂಟಾ?ʼ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
       (@)
ಈ ಕುರಿತು ಅರಮನೆ ಯಾವುದೇ ಅಧಿಕೃತ ಸುದ್ದಿ ನೀಡಿಲ್ಲ. ಮಹಾರಾಜರಾಗಲೀ ರಾಣಿಯಾಗಲೀ ಮಾತನಾಡಿಲ್ಲ. ಆದರೆ ಅರಮನೆಯ ಸುದ್ದಿ ಮೂಲಗಳು ಮಾತ್ರ ಈ ವಿಚಾರದಲ್ಲಿ ಗುಸುಗುಸು ಸುದ್ದಿಯನ್ನು ಹೊರಬಿಟ್ಟಿವೆ. ಏನೇ ಇದ್ದರೂ ಅದು ಸಂತಸದ ವಿಚಾರವೇ. ಇದೀಗ ಯದುವೀರ್-‌ ತ್ರಿಶಿಕಾ ಜೋಡಿಯ ಮೊದಲ ಮಗ ಆದ್ಯವೀರನಿಗೆ 7 ವರ್ಷ ಪ್ರಾಯ. 2017ರ ಡಿಸೆಂಬರ್‌ 6ರಂದು ಜನಿಸಿದ ಆದ್ಯವೀರ್‌ ಈಗ ಅರಮನೆಯ ಎಲ್ಲರ ಮುದ್ದಿನ ಯುವರಾಜ. ಆದ್ಯವೀರನಿಗೆ ತಮ್ಮನೋ ತಂಗಿಯೋ ಆಗಮಿಸಿದರೆ ಅರಮನೆ ಹಾಗೂ ಮೈಸೂರು ಜನತೆ ಇನ್ನಷ್ಟು ಖುಷಿಯಾಗಲಿದ್ದಾರೆ.
2016ರ ಜೂನ್‌ 17ರಂದು ಯದುವೀರ್-‌ ತ್ರಿಶಿಕಾ ಮದುವೆ ನಡೆದಿತ್ತು. ಇಬ್ಬರೂ ಬಾಲ್ಯದ ಗೆಳೆಯರು ಹಾಗೂ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು.
ಇದನ್ನೂ ಓದಿ: : ಯದುವೀರ್ ಭೇಟಿಯಾದ ಕ್ರಿಕೆಟಿಗ ಚಹಲ್