 -5 : ವಿಜಯದಶಮಿಗೆ ಕಾವೇರಿ 5ನೇ ಹಂತ ಉದ್ಘಾಟನೆ; ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು
ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸುವ ಕಾವೇರಿ 5 ನೇ ಹಂತದ ವಿವಿಧ ಕಾಮಗಾರಿಗಳನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ( -5 ) ಅವರು ಸೋಮವಾರ ವೀಕ್ಷಕಿಸಿದರು. ಯಶವಂತಪುರ ಶಾಸಕ ಎಸ್. ಟಿ. ಸೋಮಶೇಖರ್ ಹಾಗೂ ಬಿಡಬ್ಲ್ಯೂಎಸ್‌ಎಸ್ ಬಿ ಚೇರ್ಮನ್, ಡಿಸಿಎಂ ಕಾರ್ಯದರ್ಶಿ, ಬಿಎಂಆರ್ ಡಿಎ ಕಮಿಷನರ್ ರಾಜೇಂದ್ರ ಚೋಳನ್  ಹಾಗೂ ಜಲ ಮಂಡಳಿ ಅಧಿಕಾರಿಗಳ ಜತೆ ಕಾಮಗಾರಿಗಳನ್ನು ಪರಿಶೀಲಿಸಿದ ಡಿಸಿಎಂ ಅವರು, ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೆಂಗೇರಿ-ಉತ್ತರಹಳ್ಳಿ ಮುಖ್ಯರಸ್ತೆಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಬಳಿಯ ಕಾಮಗಾರಿ, ಬೆಂಗಳೂರಿನ ತಾತಗುಣಿ ವರೆಗೆ ಕಾವೇರಿ ಕುಡಿಯುವ ನೀರನ್ನು ಪಂಪ್ ಮಾಡುವ ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ 5 ನೇ ಹಂತದ ಪಂಪ್ ಸ್ಟೇಷನ್, ಹಾರೋಹಳ್ಳಿಯಲ್ಲಿ 5ನೇ‌ ಹಂತದ ಜಲರೇಚಕ‌ ಯಂತ್ರಗಾರ ಹಾಗೂ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ನಿರ್ಮಿಸಿರುವ ಜಲಶುದ್ಧೀಕರಣ ಹಾಗೂ ಜಲರೇಚಕ ಯಂತ್ರಾಗಾರವನ್ನಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ವೀಕ್ಷಿಸಿದರು.
ಈ ವೇಳೆ ಮಾತನಾಡಿರುವ ಡಿಸಿಎಂ ಡಿಕೆಶಿ ಅವರು, ವಿಜಯದಶಮಿ ದಿನದಂದು ಯೋಜನೆ ಉದ್ಘಾಟಿಸಲು ಸಿದ್ಧತೆಗಳು ನಡೆದಿವೆ. ಅದಕ್ಕೂ ಮುನ್ನ ಕಾಮಗಾರಿಯನ್ನು ಕಣ್ಣಾರೆ ನೋಡಬೇಕೆನ್ನುವ ಉದ್ದೇಶದಿಂದ ಇಂದು ಪರಿಶೀಲನೆ ನಡೆಸಿದ್ದೇನೆ. ಡ್ರೈನೇಜ್ ಸಂಬಂಧಿಸಿದಂತೆ ಸಾವಿರ ಕೋಟಿ ರೂ. ಕಾಮಗಾರಿ ನಡೆಯುತ್ತಿದೆ. 110 ಕಿ.ಮೀ. ನೀರು ಸರಬರಾಜಿಗೆ 1.45 ಲಕ್ಷ ಮೆಗಾ ಟನ್ ಸ್ಟೀಲ್ ಪೈಪ್ ಬಳಕೆ ಮಾಡಲಾಗಿದೆ. ಕನಕಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಪರವಾನಿಗೆ ಪಡೆದು ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಯಶವಂತಪುರ, ಬ್ಯಾಟರಾಯನಪುರ, ದಾಸರಹಳ್ಳಿ ಯೋಜನಾ ವ್ಯಾಪ್ತಿ ಸೇರಿದೆ. ಬೆಂಗಳೂರು ಮೂರನೇ ಒಂದು ಭಾಗ 110 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು. ಈ ಮೊದಲು 1450 ಎಂಎಲ್​ಡಿ ನೀರನ್ನು ನಾಲ್ಕು‌ ಹಂತದಲ್ಲಿ ಸರಬರಾಜು ಮಾಡಲಾಗುತ್ತಿತ್ತು. ಇದೀಗ ಒಂದೇ ಹಂತ‌ 775 ಎಂಎಲ್​ಡಿ ನೀರು ಸರಬರಾಜು ಮಾಡಲಾಗುತ್ತಿದೆ. 4 ಲಕ್ಷ ಹೊಸ ನೀರಿನ ಸಂಪರ್ಕ ಕೊಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಬೆಂಗಳೂರನ್ನು ವಾಟರ್ ಸರ್ಪ್ಲಸ್‌ ಮಾಡುವುದು ನಮ್ಮ ದಿಟ್ಟ ಹೆಜ್ಜೆ. ಇಡೀ ದೇಶದಲ್ಲಿ ಇದೇ ಅತಿ ದೊಡ್ಡ ನೀರಿನ ಯೋಜನೆ. ದಸರಾ ಹಬ್ಬಕ್ಕೆ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ವಿಶ್ವಾಸವಿದೆ.
ಈ ಸುದ್ದಿಯನ್ನೂ ಓದಿ |’   : ಸೆ.28ರಂದು ಬೆಂಗಳೂರಿನ ಹೊಸ ಎನ್‌ಸಿಎ ಸೌಲಭ್ಯ ಉದ್ಘಾಟನೆ
ಕಾವೇರಿ 5ನೇ ಹಂತದ ಕುಡಿಯುವ ನೀರು ಪೂರೈಕೆ ಯೋಜನೆ ಸಂಬಂಧ ಇಂದು ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ನಿರ್ಮಿಸಿರುವ ಜಲಶುದ್ಧೀಕರಣ ಹಾಗೂ ಜಲರೇಚಕ ಯಂತ್ರಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.● ವಿಜಯದಶಮಿ ದಿನದಂದು ಯೋಜನೆ ಉದ್ಘಾಟಿಸಲು ಸಿದ್ಧತೆಗಳು ನಡೆದಿವೆ. ಅದಕ್ಕೂ ಮುನ್ನ ಕಾಮಗಾರಿಯನ್ನು ಕಣ್ಣಾರೆ…../NmdYCTSrl2