  : ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!
ಬೆಂಗಳೂರು:ಬೆಂಗಳೂರು ನಗರದ 66/11ಕೆವಿ ಪೂರ್ವಾಂಕರ ಪಾಮ್ ಬೀಚ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಸೆ.25ರಂದು ಬುಧವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3.30 ಗಂಟೆಯವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ (  ) ಉಂಟಾಗಲಿದೆ ಎಂದು ಬೆಸ್ಕಾಂ () ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.
ನಗರದ ಹಳೆಹಳ್ಳಿ, ಮಾರ್ಗೊಂಡಣ ಹಳ್ಳಿ, ಗವಿಗುಡಿ, ಕಲ್ಕೆರೆ ರಸ್ತೆ, ಬೈರತಿ ಗ್ರಾಮ, ಕನಕಶ್ರೀ ಲೇಔಟ್, ಅಥಮ ವಿದ್ಯಾನಗರ, ಕೆ.ಆರ್.ಸಿ ಬಸ್ ನಿಲ್ದಾಣ, ಬೈರತಿ, ಗುಬ್ಬಿ ಅಡ್ಡ ರಸ್ತೆ, ಬೈರತಿ ಬಂಡೆ, ಕ್ಯಾಲಸನಹಳ್ಳಿ, ಪೂರ್ವಾಂಕರ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶ.
ಈ ಸುದ್ದಿಯನ್ನೂ ಓದಿ | : ಬೆಂಗಳೂರಿನಲ್ಲಿ ಬಾಕ್ಸಿಂಗ್ ಕದನ ಕಲಿಗಳ ನಡುವೆ ರೋಚಕ ಹಣಾಹಣಿ
ಬೆಂಗಳೂರು ಕವಿಪ್ರನಿನಿ ವತಿಯಿಂದ 66/11 ಕೆ.ವಿ. ಇಸ್ಕಾನ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜಯನಗರ ವಿಭಾಗದ ದ5ನೇ ಉಪವಿಭಾಗದ ಹಲವೆಡೆ ಸೆ.25 ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜಯನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.
ನಗರದ ಮಂತ್ರಿ ಅಪಾರ್ಟ್‌ಮೆಂಟ್‌, ತಲಘಟ್ಟಪುರ, ರಘುವನಹಳ್ಳಿ, ಗುಬ್ಬಲಾಳ, ಕುವೆಂಪುನಗರ, ವಿ.ವಿ.ನಗರ, ವಿ.ವಿ. ಲೇಔಟ್‌, ಬಾಲಾಜಿ ಲೇಔಟ್‌, ರಾಯಲ್‌ ಫಾರಂ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಈ ಸುದ್ದಿಯನ್ನೂ ಓದಿ | : ಮ್ಯಾಗ್ನೆಟಿಕ್‌ ಸ್ಟಡ್ಸ್‌, ಇಯರ್‌ ರಿಂಗ್ಸ್; ಹೊಸ ಜನರೇಶನ್ ಹುಡುಗರ ಮೆಚ್ಚಿನ‌ ಆಯ್ಕೆ!
ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.