ಡಿಕೆಶಿಗೆ ಮನವಿ ಸಲ್ಲಿಸಿದ ಓಲಾ, ಊಬರ್ ಚಾಲಕರು
ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಓಲಾ, ಉಬರ್, ಟ್ಯಾಕ್ಸಿ ಮತ್ತು ಆಟೋ ಚಾಲಕ ಸಂಘಟನೆಗಳ ಮುಖಂಡರು ಶನಿವಾರ ಭೇಟಿ ನೀಡಿ ತಮ್ಮ ಸಮಸ್ಯೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಓಲಾ, ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ, ಪೀಸ್ ಆಟೋ ಯೂನಿಯನ್ ಅಧ್ಯಕ್ಷ ರಘು ನಾರಾಯಣಗೌಡ, ಜೈಭಾರತ್ ವಾಹನ ಚಾಲಕರ ಸಂಘದ ಅಧ್ಯಕ್ಷರಾದ ಚಂದ್ರಕುಮಾರ್, ಏರ್ಪೋರ್ಟ್ ಟ್ಯಾಕ್ಸಿ ಯೂನಿಯನ್ ನ ಹಮೀದ್ ಅಕ್ಬರ್ ಅಲಿ, ಮತ್ತು ಆರ್ಮುಗಂ. ಬೃಹತ್ ಬೆಂಗಳೂರು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ರಮೇಶ್ ಹೊಳ್ಳ, ರಾಜೀವ್ ಗಾಂಧಿ ಆಟೋ ಯೂನಿಯನ್ ಅಧ್ಯಕ್ಷ ಚಂದ್ರಶೇಖರ್, ಕರ್ನಾಟಕ ಆಟೋ ಟ್ಯಾಕ್ಸಿ ಟ್ರೇಡ್ ಯೂನಿಯನ್ ಅಧ್ಯಕ್ಷ ಅತೀಕ್ ಅಹಮದ್, ಸಾರಥಿ ಸೇನೆ ಅಧ್ಯಕ್ಷರಾದ ಶಬರಿನಾಥ್ ಉಪಸ್ಥಿತರಿದ್ದರು.