ಹುಳಿಮಾವು ಸಂಚಾರ ಪೊಲೀಸ್ ಠಾಣೆ ಸ್ಥಳಾಂತರ
ಹುಳಿಮಾವು ಸಂಚಾರ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲಾಗುತ್ತಿದೆ. ಸೋಮೇಶ್ವರ ದೇವಸ್ಥಾನದ ಸಮುದಾಯ ಭವನವು ರಸ್ತೆ ಆಗಲೀಕರಣಕ್ಕೆ ಒಳಪಡುವುದರಿಂದ, ಸೋಮೇಶ್ವರ ದೇವಸ್ಥಾನದ ಸಮುದಾಯ ಭವನದಿಂದ ಹುಳಿಮಾವು ಸಂಚಾರ ಪೊಲೀಸ್ ಠಾಣೆಯನ್ನು ಬನ್ನೇರುಘಟ್ಟ ರಸ್ತೆ, ಉತ್ತರಹಳ್ಳಿ ಹೋಬಳಿ, ಗೊಟ್ಟಿಗೆರೆ ಗ್ರಾಮದ ಸರ್ವೆ ನಂ.91ರಲ್ಲಿರುವ ಬಿಬಿಎಂಪಿ ಕಚೇರಿ ಕಟ್ಟಡಕ್ಕೆ  ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
