ಕೋಟೆ ಓಣೆಯಲ್ಲಿ ಶ್ರದ್ಧಾ ನಿಧಿ ಅಭಿಯಾನ ಯಶಸ್ವಿ
ಸಿಂಧನೂರು:ನಗರದ ವಾರ್ಡ್ ನಂ 24 ರಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ಕೋಟೆಯ ಶ್ರೀರಾಮ ಭಕ್ತಾದಿಗಳಿಂದ ಹಮ್ಮಿಕೊಳ್ಳ ಲಾಗಿದ್ದ ಶ್ರದ್ಧಾ ನಿಧಿ ಅಭಿಯಾನ ಕಾರ್ಯಕ್ರಮವು ಭಾನುವಾರ ಯಶಸ್ವಿಯಾಗಿ ಜರುಗಿತು.
ವಾರ್ಡಿನ ಯುವಕರು ಬೆಳಿಗ್ಗೆಯಿಂದಲೇ ಸರ್ವಧರ್ಮ ಸಮಾಜದವರ ನಿವಾಸ ಗಳಿಗೆ ತರಲಿ ಶ್ರೀರಾಮ ಜನ್ಮಭೂಮಿ ನಿರ್ಮಾಣ ಕ್ಕಾಗಿ ನಿಧಿ ಸಂಗ್ರಹ ಮಾಡಿ ದರು.
ಸರ್ವ ಸಮುದಾಯದವರು ಸಹಕಾರ ನೀಡಿ ಯಶಸ್ವಿಯಾಗಲಿ ಎಂದು ಶುಭ ಆರಿಸಿರುವುದು ಕಂಡುಬಂತು. ಈ ಸಂದರ್ಭದಲ್ಲಿ ಯುವಕರಾದ ಕಿಲ್ಲೇದ್, ವಿರೇಶ್ ಮಾಳಗಿ, ಮನೋಹರ್ , ವೀರೇಶ ಯರದಿಹಾಳ್,ವಿರುಪಾಕ್ಷಿ ಹೊಸಮನಿ, ವೀರೆಶ ಹೊಸಮನಿ, ಸತೀಶ್ ಕುಮಾರ್ ,ಬದ್ರಿ ಸಾಲಿಮಠ್, ಶ್ರೀಕಾಂತ್ ಗಸ್ತಿ ಮತ್ತಿತರರು ಇದ್ದರು.