ಮಹಿಳೆಯರಿಗೆ 33% ಮೀಸಲಾತಿ ತಂದು ಕೊಟ್ಟಿದ್ದು ಇದೇ ದೇವೇಗೌಡ
ಪಾವಗಡ :ಪಟ್ಟಣದ ಎಸ್.ಎಸ್.ಕೆ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನೂತನ ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಅಭಿನಂದನ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ನನ್ನ ಪರಿಶ್ರಮದಿಂದ ಇಂದು ಇಷ್ಟು ಜನ ಮಹಿಳೆಯರು ಚುನಾವಣೆ ಗೆಲವು ಸಾಧಿಸಲು ಕಾರಣವಾಗಿದೆ.
ದೇವೆಗೌಡರಿಗೆ ವಯಸ್ಸಾಗಿದೆ ಎಂದು ವ್ಯಂಗ್ಯ ಅಡಿದವರಿಗೆ ಅವರದೆಯಾದ ಶೈಲಿಯಲ್ಲಿ ಹಲವು ಬಾರಿ ಉತ್ತರ ನೀಡಿದ್ದೇನೆ.  ಮುಸಲ್ಮಾನರಿಗೆ ಸಮುದಾಯ ಕ್ಕೆ ರಿಸರ್ವೇಶನ್ ತಂದು ಕೊಟ್ಟಿದ್ದು ಇದೇ ದೇವೆಗೌಡ ಅವರು ಬೇರೆ ದೇಶದ ಜನರಲ್ಲ ಇಲ್ಲಿಯೇ ಹುಟ್ಟಿ ಬೆಳೆದ ನಮ್ಮ ಅಣ್ಣ ತಮ್ಮಂದಿರ ಹೂರೆತು ಬೇರೆ ದೇಶದವರಲ್ಲ.
ಅಂಬೇಡ್ಕರ್ ರವರು ಬರೆದ ಸಂವಿಧಾನದಲ್ಲಿ ಎಲ್ಲಾ ಸಮುದಾಯದವರಿಗೆ ಸರಿಸಮನಾಗಿ ವಿಂಗಡಿಸಿ ರಕ್ಷಣೆ ನೀಡಿದ್ದರೆ.  ಎಸ್.ಟಿ. ಸಮುದಾಯಕ್ಕೆ ಮೀಸಲಾತಿ ಸಹ ನನ್ನ ಅವಧಿಯಲ್ಲಿ ಕಲ್ಪಿಸಲಾಗಿದೆ. ಅದರೆ ಎಲ್ಲಾ ಅನುಕೂಲಗಳು ನಮ್ಮಲ್ಲಿ ಪಡೆದು ಬೇರೆಯವರಿಗೆ ಸಹಾಯವನ್ನು ಮಾಡುತ್ತಿದ್ದರೆ ಇದೇ ಸೇರಿಯೇ.
ಕುಮಾರಸ್ವಾಮಿ ಯವರು ರೈತರ 25ಸಾವಿರ ಕೋಟಿ ಸಾಲಮನ್ನ ಮಾಡಿದ ಏಕೈಕ ಮುಖ್ಯಮಂತ್ರಿ.ಅದರೆ ಈಗಿನ ಸರ್ಕಾರ ರೈತರ ಪರ ಇದೆ ಎಂದು ಹೂಳುತ್ತಾರೆ ಅದರೆ ರೈತರೆ ಗಮನಿಸಬೇಕು ಎಂದರು.
ಬರುವ ಮುಂದಿನ ಚುನಾವಣೆಯಲ್ಲಿ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಇನ್ನೂ ಹೆಚ್ಚು ಅಭ್ಯರ್ಥಿಗಳನ್ನು ಗೆಲವು ಸಾಧಿಸಿ ಈ ಭಾಗದ ಮುಂದೆ ಬರುವ ಚುನಾವಣೆಯಲ್ಲಿ ತಿಮ್ಮರಾಯಪ್ಪರನ್ನು ಗೆಲ್ಲಿಸಬೇಕು ಎಂದರು.
ಮಾಜಿ ವಿಧಾನ ಪರಿಷತ್ತಿನ ಸದಸ್ಯ ಶರವಣ್ ಮಾತನಾಡಿ ಇತ್ತಿಚಿನ ಬಿಜೆಪಿ ಕಾಂಗ್ರೆಸ್ ಬೆಳವಣಿಗೆ ಗಳ ಬಗ್ಗೆ ನಾನು ಹೇಳುವುದು ಏನು ಇಲ್ಲಾ ಎಲ್ಲವೂ ತಮ್ಮಗೆ ತಿಳಿಯುತ್ತಿದೆ.
ಈ ಭಾಗದ ಶಾಸಕ ವೆಂಕಟರಮಣಪ್ಪ ಮತ್ತು ಆತನ ಪುತ್ರ ಈ ಭಾಗದ ಜನರ ಸಮಸ್ಯೆಗಳನ್ನು ಸ್ಪಂದಿಸದೆ ರೌಡಿಸಮ್ ಮಾಡಿಕೊಂಡು. ಕಾರ್ಯಕರ್ತರನ್ನು ತೊಂದರೆ ನೀಡುತ್ತ ಲೋಟಿ ಮಾಡುತ್ತಿದ್ದರೆ ಹೂರೆತ್ತು ಯಾವುದೇ ಅಭಿವೃದ್ಧಿ ಮಾಡದೆ ಕಾಲ ಕಳೆಯುತ್ತಿದ್ದರೆ.ಜಿಲ್ಲೆಯಲ್ಲಿ ಅತಿ ಹಿಂದುಳಿದ ಪ್ರದೇಶ ಎಂದರೆ ಅದು ಪಾವಗಡ ತಾಲ್ಲೂಕು ಎಂದು ಹೇಳಬಹುದು. ಇದಕ್ಕೆ ಮೂಲ ಕಾರಣ ಈ ಭಾಗದ ಮತದಾರರು 24×7 ಕೆಲಸ ಮಾಡುತ್ತಿದ್ದ ಸರಳ ಸಜ್ಜನ ವಾದ ವ್ಯಕ್ತಿ ಎಂದರೆ ತಿಮ್ಮಾರಾಯಪ್ಪ.
ಈ ಭಾಗದಲ್ಲಿ ಶಾಸಕರಾಗಿ ಅಧಿಕಾರ ಇಲ್ಲದಿದ್ದರೂ 34 ಪಂಚಾತಿಗಳಲ್ಲಿ 17 ಪಂಚಾಯಿತಿಗಳು ವಶಪಡಿಸಿಕೊಂಡಿದಗದ್ದಾರೆ.
ಸರ್ಕಾರದ ಪಾಪದ ಕೂಡ ತುಂಬಿ ತುಳುಕುತ್ತಿದೆ.ಕೋವಿಡ್ ಹೆಸರಿನಲ್ಲಿ ಸರ್ಕಾರ ಲೋಟಿ ಹೊಡೆದಿದೆ ಎಂದು ತಿಳಿಸಿದ್ದರು.
ಈ ವೇಳೆ ಪಾವಗಡ ಮಾಜಿ ಶಾಸಕ ಕೆ.ಎಂ.ತಿಮ್ಮಾರಾಯಪ್ಪ ಮಾತನಾಡಿದರು.ಮಾಜಿ ಸಚಿವ ಪುಟ್ಟೆಗೌಡ.ಬೆಳ್ಳಿಲೋಕೆಶ್.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ.ತಿಮ್ಮರೆಡ್ಡಿ.ಇತರೆ ಕಾರ್ಯಕರ್ತರು ಇದ್ದರು.
