ಹುಸೇನ್ ಪುರ ಗ್ರಾಮದ ಜೀವ ಸಮಾಧಿ ವೆಂಕಾವಧೂತ ಸ್ವಾಮಿಯ ಆರಾಧನಾ, ರಥೋತ್ಸವ
ಪಾವಗಡ:ಅವಧೂತ ಕ್ಷೇತ್ರ. ಹುಸೇನ್ ಪುರ ಗ್ರಾಮದ ಜೀವ ಸಮಾಧಿಯಾದ ವೆಂಕಾವಧೂತ ಸ್ವಾಮಿಯ ಆರಾಧನಾ,  ಮತ್ತುರಥೋತ್ಸವ ಅದ್ದೂರಿಯಾಗಿ ನಡೆಯಿತು.
ಪಾವಗಡ ತಾಲೂಕಿನ ಗಡಿ ಪ್ರದೇಶದ ಹೆಸರಾಂತ ಹಾಗೂ ಶಿರಡಿ ಸಾಯಿಬಾಬಾ ರವರ ಗುರುಗಳಾದ ಶ್ರೀ ವೆಂಕಾವಧೂತ ಸ್ವಾಮಿಯ ರಥೋತ್ಸವ ಪ್ರತಿವರ್ಷ ದಂತೆ ಈ ಭಾರಿಯು ರಾಜ್ಯದ ಮೂಲೆಮೂಲೆಗಳಂದ ಭಕ್ತರು ಆಗಮಿಸಿ ರಥೋತ್ಸವಕ್ಕೆ ಭಾಗವಹಿಸಿದ್ದು ವಿಶೇಷ ವಾಗಿತ್ತು.
ಶ್ರೀ ವೆಂಕಟಧೂತರ ಸ್ವಾಮಿಯ ರಥೋತ್ಸವ ಪ್ರತಿವರ್ಷ ಐದು ದಿನಗಳ ಕಾಲ ನಡೆಯುವ ವಿಶೇಷವಾಗಿ ನಡೆಯುವಂತಹ ರಥೋತ್ಸವ ಇಲ್ಲಿ ನಾವು ಕಾಣಬಹುದಾಗಿದೆ. ಈ ಸ್ವಾಮಿ ಯ ಮಹಿಮೆ ಬಹಾಳ ವಿಶೇಷವಾದುದ್ದು.ರಾಜ್ಯದ ವಿವಿಧ ಪ್ರದೇಶ ಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಯಾವುದೇ ಹರಕೆ ಹೊತ್ತು ಭಕ್ತರು ಇಲ್ಲಿಗೆ ಬಂದರೆ ಅವರು ಇಲ್ಲಿ ಕಾಲಿ ಕೈಯಲ್ಲಿ ಹೋಗುವುದಿಲ್ಲ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ.
ಅವಧೂತ ಕ್ಷೇತ್ರ ಎಂದೆ ಹೆಸರು ಬರಲು ಕಾರಣ ಶ್ರೀ ವೆಂಕಾವಧೂತ ಸ್ವಾಮೀಜಿಯವರು ಶಿರಡಿ ಸಾಯಿಬಾಬಾ ಅವರು ಗುರುಗಳು ತಾಲೂಕಿನ ಹುಸೇನ್ ಪುರ್ ಗ್ರಾಮದಲ್ಲಿ ಹಿಂದೆ ಬಂದು ಜೀವ ಸಾಮಧಿಯಾಗಿದ್ದಾರೆ.ಪ್ರತಿ ವರ್ಷ ಇಲ್ಲಿ ಅದ್ದೂರಿಯಾಗಿ ರಥೋತ್ಸವ ನಡೆಯುತ್ತದೆ. ಈ ಬಾರಿಯೂ ಫೆ.28 ರಿಂದ ಮಾ.4 ರವರೆಗೆ ನಡೆಯುತ್ತದೆ.
ಇಂದು ನಡೆಯುವ ವಿಶೇಷ ಅಕರ್ಶಣೆಯ ಕಾರ್ಯಕ್ರಮ ಎಂದರೆ ಕೆಸರುಕಂಬ ಜಾತ್ರೆ (ಉಟ್ಲುಪರಿಷೆ) ನಡೆಯುತ್ತದೆ. ನೋಡಲು ಬಹಾಳಷ್ಟು ಸಂತೋಷ ಪಡುತ್ತಾರೆ ಎಂದು ದೇವಾಲಯದ ಕಮೀಟಿಯ ಸದಸ್ಯ ಅನಿಲ್ ಕುಮಾರ್ ತಿಳಿಸಿದ್ದಾರೆ.
