ಆಕಸ್ಮಿಕ ಬೆಂಕಿ ಆಹುತಿಗೆ 22 ಕುರಿ, ಮೇಕೆ ಸಜೀವ ದಹನ
ಪಾವಗಡ :ತಾಲೂಕಿನ ಬಾಲಮ್ಮನಹಳ್ಳಿ ಗ್ರಾಮದ ನಾರಾಯಣ್ ನಾಯ್ಕ್ ಎಂಬುವರಿಗೆ ಸೇರಿದ ಕುರಿ ಶೆಡ್ ನಲ್ಲಿ ಆಕಸ್ಮಿಕ ಬೆಂಕಿಯ ಅಹುತಿಗೆ ಸುಮಾರು ಎರಡು ಲಕ್ಷ ಬೆಲೆ ಬಾಳುವ ಕುರಿಮೇಕೆ ಇತರೆ ವಸ್ತುಗಳ ಸುಟ್ಟಿ ಕರಕಲಾಗಿವೆ. ನಂತರ ಆಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆಗ್ನಿ ಆರಿಸಿದ್ದಾರೆ.
ಸ್ಥಳಕ್ಕೆ ಪಾವಗಡ ಸಿಪಿಐ ನಾಗರಾಜ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.