ಕಂಬತ್ತಳ್ಳಿಗೆ ಕಾರಂತ ಪ್ರಶಸ್ತಿ
ಮೂಡುಬಿದಿರೆ:ಶಿವರಾಮ ಕಾರಂತ ಪ್ರತಿಷ್ಠಾನದಿಂದ ಪ್ರದಾನ ಮಾಡುತ್ತಿರುವ ಶಿವರಾಮ ಕಾರಂತ ಪ್ರಶಸ್ತಿಗೆ 2020ನೇ ಸಾಲಿನಲ್ಲಿ ನಾಲ್ವರನ್ನು ಆಯ್ಕೆ ಮಾಡಲಾಗಿದೆ.
ಸೊಂದಲಗೆರೆ ಲಕ್ಷ್ಮೀಪತಿ (ಸಾಮ್ರಾಟ್ ಅಶೋಕ), ಡಾ.ಭಾಸ್ಕರ ಮಯ್ಯ (ವಿಷ್ಣು ಭಟ್ ಗೋಡ್ಸೆಯ `ನನ್ನ ಪ್ರವಾಸ’), ಡಾ. ಟಿ.ಸಿ.ಪೂರ್ಣಿಮಾ (ನಾದ ನಕ್ಷತ್ರ) ಮತ್ತು ಪ್ರಕಾಶ ಕಂಬತ್ತಳ್ಳಿ (ಅಂಕಿತ ಪ್ರಕಾಶನದ ಸಾಹಿತ್ಯ ಪರಿಚಾರಿಕೆಗಾಗಿ) ಯವರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.
ಪ್ರಶಸ್ತಿಯು ರು.10,000 ಗೌರವ ಸಂಭಾವನೆ ಹೊಂದಿದ್ದು, ಈ ಪ್ರಶಸ್ತಿಯನ್ನು ಕಳೆದ ಇಪ್ಪತ್ತು ವರ್ಷಗಳಿಂದ ನೀಡುತ್ತಾ ಬರಲಾಗಿದೆ.