ಶಿವಶಕ್ತಿ ಟ್ರೇಡರ್ಸ್‌ ಮಳಿಗೆ ಮೇಲೆ ಪುರಸಭೆ ಮುಖ್ಯಾಧಿಕಾರಿ ದಾಳಿ: ಒಂದು ಟನ್ ಪ್ಲಾಸ್ಟಿಕ್ ವಶ
ಪಾವಗಡ:ಪಾವಗಡ ಪಟ್ಟಣದ ಕೆನರಾ ಬ್ಯಾಂಕ್‌ ಹಿಂಭಾಗ ಹಿಂಬದಿಯಲ್ಲಿ ಇರುವ ಶಿವಶಕ್ತಿ ಟ್ರೇಡರ್ಸ್ ಮಳಿಗೆ ಮೇಲೆ ಅಂಗಡಿ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಂದು ಟನ್ ಪ್ಲಾಸ್ಟಿಕ್ ವಶಕ್ಕೆ ಪಡೆದು 15 ಸಾವಿರ ದಂಡ ವಿಧಿಸಲಾಗಿದೆ.
ಇದೇ ವೇಳೆ ಮಾದ್ಯಮ ಬಳಿ ಮಾತನಾಡಿದ ಮುಖ್ಯಾಧಿಕಾರಿ ಅರ್ಚನಾ, ಕರೋನಾ ಸಂದರ್ಭದಲ್ಲಿ ಸ್ವಲ್ಪ ಸಡಿಲಿಕೆ ಬಿಟ್ಟ ಅಂತಹ ಸಂದರ್ಭದಲ್ಲಿ ಮತ್ತೆ ಪ್ಲಾಸ್ಟಿಕ್ ಪಟ್ಟಣದಲ್ಲಿ ತಲೆ ಎತ್ತಿದೆ. ಹಾಗಾಗಿ, ಕಳೆದ ಮೂರು ದಿನಗಳಿಂದ ಪಟ್ಟಣದ ಪ್ರತಿ ಅಂಗಡಿ ಮಳಿಗೆಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆಯೇ ಎಂಬುದಾಗಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ.
ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿ. ಪ್ಲಾಸ್ಟಿಕ್ ಮುಕ್ತ ಪಾವಗಢ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಈ ವೇಳೆ ಆರೋಗ್ಯಧಿಕಾರಿ ಶಂಶುದ್ದಿನ್, ಮಹೇಶ್ ಇದ್ದರು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ
://../