ರಾಜ್ಯದಲ್ಲಿ 8778 ಕರೋನಾ ಪ್ರಕರಣ ಪತ್ತೆ
ಬೆಂಗಳೂರು:ರಾಜ್ಯದಲ್ಲೇ ಕರೋನಾ ಸಂಕಷ್ಟ ಕಗ್ಗಂಟಾಗುತ್ತಿದ್ದು, ಮಂಗಳವಾರ 8778  ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ರಾಜ್ಯದಲ್ಲಿನ ಸೋಂಕಿತರ ಸಂಖ್ಯೆ 10,83,647ಕ್ಕೆ ತಲುಪಿದೆ.
ಮಂಗಳವಾರ 6,079 ಮಂದಿ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಸೋಂಕುಮುಕ್ತರಾಗಿ ಬಿಡುಗಡೆಗೊಂಡವರ ಸಂಖ್ಯೆ 9,92,003ಕ್ಕೆ ತಲುಪಿದೆ.
ರಾಜ್ಯದ ವಿವಿಧೆಡೆ ಒಟ್ಟು 474 ಮಂದಿ ಗಂಭೀರ ರೋಗಲಕ್ಷಣಗಳಿಂದಾಗಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.