  : ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!
ಬೆಂಗಳೂರು:ಬೆಂಗಳೂರು ನಗರದ 220/66/11ಕೆವಿ ಎಸ್‌ಆರ್‌ಎಸ್ ಸ್ಟೇಷನ್‌ನಲ್ಲಿ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದ ಎನ್4, ಎನ್5. ಎನ್7 ಉಪ ವಿಭಾಗದ ಹಲವೆಡೆ ಸೆ.29 ರಂದು ಭಾನುವಾರ ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 3.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ (  ) ಉಂಟಾಗಲಿದೆ.
ಈ ಸುದ್ದಿಯನ್ನೂ ಓದಿ |   2024: ಮಾರಕ ರೇಬೀಸ್‌‌ನಿಂದ ಪಾರಾಗಲು ಏನು ಮಾಡಬೇಕು?
ನಗರದ ಪೀಣ್ಯ 10ನೇ ಮುಖ್ಯರಸ್ತೆ, 11ನೇ ಮುಖ್ಯರಸ್ತೆ, ಉಡುಪಿ ಹೋಟೆಲ್ ಸುತ್ತಮುತ್ತ, ಐಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮೀದೇವಿ ನಗರ. ಲಗ್ಗೆರೆ ಹಳೆ ಗ್ರಾಮ, ಲವ ಕುಶ ನಗರ, ರಾಗೀವ್ ಗಾಂಧಿ ನಗರ, ಚೌಡೇಶ್ವರಿ ನಗರ 6ನೇ, 7ನೇ, 8ನೇ, 9ನೇ ಕ್ರಾಸ್, 1ನೇ ಹಂತ ಪಿಐಎ 7ನೇ ಕ್ರಾಸ್, 1ನೇ ಹಂತ ಪಿಯುಎ, ಟಿವಿಎಸ್ ಕ್ರಾಸ್ ರಸ್ತೆ ಬಳಿ, ಇಸ್ರೋ 1ನೇ, 2ನೇ ಕ್ರಾಸ್, 1ನೇ ಹಂತದ ಪಿಐಎ ಏರಿಯಾ ಮತ್ತು ಯಶವಂತ ಸುತ್ತಮುತ್ತಲಿನ ಪ್ರದೇಶ.
ಈ ಸುದ್ದಿಯನ್ನೂ ಓದಿ | : 4,071 ಕೋಟಿ ರೂಪಾಯಿಯ 88 ಯೋಜನೆಗಳಿಗೆ ಅನುಮೋದನೆ, 10,585  ಉದ್ಯೋಗಾವಕಾಶ ಸೃಷ್ಟಿ
ಬೆಂಗಳೂರು ನಗರದ 66/11 ಕೆ.ವಿ. ಕಂಠೀರವ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಸೆ.29 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಗರದ ಕಬ್ಬನ್‌ಪೇಟೆ 5ನೇ ಕ್ರಾಸ್, 6ನೇ ಕ್ರಾಸ್, 3ನೇ ಕ್ರಾಸ್, 4ನೇ ಕ್ರಾಸ್, ಚೌಲಗಲ್ಲಿ, ಎ.ಬಿ.ಸಿ.ಡಿ. ಗಲ್ಲಿ, ಆರ್.ಬಿ.ಐ., ನೃಪತುಂಗ ರಸ್ತೆ, ಯು.ವಿ.ಸಿ.ಇ. ಅಗ್ರಿಕಲ್ಚರ್ ಆಫೀಸ್, ಸರ್ಕಾರಿ ಕಲಾ ಕಾಲೇಜು, ಮಾರ್ಥಾಸ್ ಹಾಸ್ಪಿಟಲ್, ಸುಂಕಲ್‌ಪೇಟೆ, ನಗರತ್ ಪೇಟೆ ಮುಖ್ಯರಸ್ತೆ, ಕೆ.ಎ.ಎಸ್. ಲೇನ್, ‘ಸಿ’ ಲೇನ್, ‘ಎ’ಲೇನ್, ‘ಡಿ’ ಲೇನ್, ಪಿ.ಆರ್.ಎಸ್.ಲೇನ್, 13ನೇ ಕ್ರಾಸ್, 14ನೇ, 15ನೇ ಕ್ರಾಸ್ ಕಬ್ಬನ್‌ಪೇಟೆ, ಕೆ.ಜಿ.ರಸ್ತೆ ಭಾಗ, ಓಟಿಸಿ ರಸ್ತೆ, ಶಾರದಾ ಥಿಯೇಟರ್ ಹಿಂಭಾಗ, ಎಸ್.ಪಿ ರಸ್ತೆ, ಎಸ್.ಜೆ.ಪಿ ರಸ್ತೆ, ಧರ್ಮರಾಯಸ್ವಾಮಿ ದೇವಸ್ಥಾನದ ರಸ್ತೆ, ಆದರ್ಶ ಶಾಂಗ್ರಿಲ್ಲ ಮತ್ತು ಯು.ಬಿ ಸಿಟಿ ಮತ್ತು ವಿಟ್ಟಲ್ ಮಲ್ಯಾ ರೋಡ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.