ಬ್ಲ್ಯಾಕ್ ಫಂಗಸ್: ವಿಜಯನಗರದಲ್ಲಿ 3 ಪ್ರಕರಣ ಪತ್ತೆ
ಹೊಸಪೇಟೆ :ರಾಜ್ಯದಲ್ಲಿ ಕರೋನಾ ವೈರಸ್ ಸೋಂಕಿನ ನಡುವೆ ಬ್ಲ್ಯಾಕ್ ಫಂಗಸ್ ಸೋಂಕಿನ ಆತಂಕ ಶುರುವಾಗಿದೆ. ವಿಜಯ ನಗರ ಜಿಲ್ಲೆಯಲ್ಲಿ 3 ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದೆ.
ಜಿಲ್ಲೆಯ ಹೂವಿನಹಡಗಲಿ ಪಟ್ಟಣ, ಗ್ರಾಮೀಣ ಭಾಗದ ಹೊಳಲು ಹಾಗೂ ಕೊಳಚಿಯಲ್‌ಇ ತಲಾ ಒಂದು ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದೆ. ಸದ್ಯ ಮೂರು ಮಂದಿ ಸೋಂಕಿತರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಈವರೆಗೆ 366 ಮಂದಿಗೆ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದ್ದು, 18 ಮಂದಿ ಬಲಿಯಾಗಿದ್ದಾರೆ ಎಂದು ವರದಿ ಯಾಗಿದೆ.