ರಾಜಾ ಅಂಬಣ್ಣ ನಾಯಕ ದೊರೆ ಫೌಂಡೇಷನ್‌ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ಕೆ ಚಾಲನೆ
ಮಾನವಿ:– ಶಾಸಕ ರಾಜಾ ವೆಂಕಟಪ್ಪ ನಾಯಕ ಇವರ ತಂದೆ ದಿವಂಗತ ರಾಜಾ ಅಂಬಣ್ಣ ನಾಯಕ ಇವರ ಫೌಂಡೇಶನ್ ವತಿಯಿಂದ ಕರೋನ ಎರಡನೇ ಅಲೆ ಮುಗಿಯುವವರೆಗೂ ಮಾನವಿ ಸೇರಿದಂತೆ ಸಿರವಾರ, ಪೋತ್ನಾಳ, ಕವಿತಾಳ ಭಾಗದಲ್ಲಿ ದಿನನಿತ್ಯ ಅನ್ನ ಸಂತರ್ಪಣೆ ಮಾಡುವುದರ ಮೂಲಕ ಬಡವರಿಗೆ ಕೂಲಿ ಕಾರ್ಮಿಕರಿಗೆ ಕರೋನ ವಾರಿಯರ್ಸ್ ಇವರಿಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸೇರಿದಂತೆ ನಿರ್ಗತಿಕರಿಗೆ ನಿತ್ಯ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಗುರುವಾರ ಸರ್ಕಾರಿ ಆಸ್ಪತ್ರೆ ಯಲ್ಲಿ ಚಾಲನೆ ನೀಡಲಾಯಿತು‌‌‌‌.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ದಿನದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಜೆ ಡಿ ಎಸ್ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ ಚಾಲನೆ ನೀಡಿದರು ನಮ್ಮ ಕ್ಷೇತ್ರದಲ್ಲಿ ಕೋವಿಡ್ -19 ರೋಗಿಗಳಿಗೆ,ಆಸ್ಪತ್ರೆಯ ಸಿಬ್ಬಂದಿಗಳಿಗೆ, ಕಡುಬಡವರಿಗೆ, ಅನ್ನ ಸಂತರ್ಪಣೆ ಕೋವಿಡ್ ಲಾಕ್ ಡೌನ್ ಮುಗಿಯುವವರೆಗೂ ನಿರಂತರವಾಗಿ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ,ತಾಲ್ಲೂಕು ಜೆಡಿಎಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೇಲ ಬಲ್ಲಟಿಗಿ, ಜಂಬುನಾಥ ಯಾದವ, ನಾಗರಾಜ ಬೋಗಾವತಿ, ಹಂಪನ ಗೌಡ ನೀರಮಾನವಿ, ಎಮ್ ಡಿ ಇಸ್ಮಾಯಿಲ್, ಪಿ ರವಿಕುಮಾರ್, ಗೋಪಾಲ ನಾಯಕ ಹರವಿ, ವಿರೇಶ ಉಪ್ಪಾರ್, ಹನುಮಂತ ಭೋವಿ, ಶರಣಪ್ಪ ಗೌಡ ಮದ್ಲಾಪೂರ, ಬಸವರಾಜ ನಾಯಕ ಊರಲಗಡಿ, ಜೆ ಎಚ್ ದೇವರಾಜ, ಪಿ ಮುರಳಿಧರ್ ಶೆಟ್ಟಿ,ಯಲಪ್ಪ ನಾಯಕ ಮಾನವಿ, ಮೌನೇಶ ನಾಯಕ ಉಮಳಿ ಹೊಸೂರು, ರಾಚಪ್ಪ ಪೋತ್ನಾಳ, ಚನ್ನಪ್ಪ ಗೌಡ ನಂದಿಹಾಳ, ಶರಣಬಸವ ನಾಯಕ, ಶಂಶು ಖುರೀಷ, ಮೈಬೂಬ್ ಖುರೀಷ ಉಪಸ್ಥಿತರಿದ್ದರು