ಎರಡನೇ ಅಲೆಯ ಅರಿವಿದ್ದರೂ ಮುಂಜಾಗ್ರತೆ ಕೈಗೊಳ್ಳದಿರುವುದು ಬಿಜೆಪಿಯ ನಿರ್ಲಕ್ಷ್ಯ : ಎನ್ ಎಸ್ ಬೋಸರಾಜ್
ಮಾನವಿ :ದೇಶದಲ್ಲಿ ಕೋವಿಡ್ ಆರಂಭವಾಗಿ ಒಂದು ವರ್ಷಕ್ಕೆ ಅಧಿಕವಾಗಿದೆ. ಆದರೆ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರ ಯಾವ ರೀತಿಯಲ್ಲಿ ಕ್ರಮವನ್ನು ಕೈಗೊಳ್ಳುತ್ತಿದೆ ಎರಡನೇ ಅಲೆ ಬರುತ್ತದೆ ಎಂದು ತಿಳಿದರು ಕೂಡ ಯಾವುದೇ ಮುಂಜಾಗ್ರತೆ ಕ್ರಮವನ್ನು ಕೈಗೊಳ್ಳದೆ ಕರೋನ ಲಸಿಕೆಯನ್ನು ಕನಿಷ್ಠ ನೂರಕ್ಕೂ ಹೆಚ್ಚು ಹೊರ ದೇಶಕ್ಕೆ ಕಳಿಸಿ ನಮ್ಮ ದೇಶದ ಜನರನ್ನು ನಿರ್ಲಕ್ಷ್ಯ ಮಾಡಿ ಈ ಸಾವುಗಳಿಗೆ ರಾಜ್ಯ ಹಾಗೂ ರಾಷ್ಟ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವೇ ನೇರವಾದ ಹೊಣೆಯಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರು ರಾಷ್ಟ್ರೀಯ ಕಾರ್ಯದರ್ಶಿ ಎನ್.ಬೋಸರಾಜ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತಾನಾಡಿದ ಅವರು ಎರಡು ಅಲೆಯ ಕುರಿತಾಗಿ ಪ್ರಪಂಚದ ಅನೇಕ ತಜ್ಞರು ಸಲಹೆಯನ್ನು ನೀಡಿದರು ಕೇಂದ್ರ ಸರ್ಕಾರ ಸಲಹೆಯನ್ನು ಪಡೆಯದೆ ಇರುವುದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಇತ್ತೀಚಿನ ದಿನಗಳಲ್ಲಿ ನಗರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಈ ರೋಗ ಹರಡುವುದಕ್ಕೆ ಸರ್ಕಾರವೇ ಕಾರಣ ಹಾಗೂ ಎರಡನೇ ಹಲೆಯು ಮುಚ್ಚೆಯೇ ತಿಳಿದರು ಕೂಡ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ ವ್ಯಾಕ್ಸಿನೇಷನ್‌ ಹಾಕುವುದಕ್ಕೆ ಕನಿಷ್ಠ 20 ಕಂಪನಿ ಇದ್ದರು ಕೂಡ ಇವರು ಕೇವಲ ಎರಡು ಕಂಪನಿಗೆ ಪರವಾನಿಗೆ ನೀಡಲಾಗಿದೆ.
95 ದೇಶಗಳಿಗೆ ನೀಡಿದರೂ ಕೂಡ ನಮಗೆ ಲಸಿಕೆ ಇಲ್ಲದಂತೆ ಮಾಡಿದ್ದು ಮಾತ್ರ ಮೋದಿ.. ಇದಕ್ಕಾಗಿ ಲಕ್ಷ ಲಕ್ಷ ಜನರು ಸಾವಿಗೆ ಕಾರಣರಾಗಿದ್ದಾರೆ.ಮೊದಲು 60 ವರ್ಷದವರಿಗೆ ನಂತರ 45 ವಯಸ್ಸಿನವರಿಗೆ ಹಾಕಲಾಗುತ್ತದೆ ಎಂದರು ಆದರು ಅದನ್ನು ಜನರಿಗೆ ಸರಿಯಾಗಿ ಬಳಕೆಯಾಗಿಲ್ಲ.ನಮ್ಮ ರಾಜ್ಯ ಹೊರತು ಪಡೆಸಿ ಉಳಿದ ರಾಜ್ಯದಲ್ಲಿ ಅತಿ ಹೆಚ್ಚು ಲಸಿಕೆ ನೀಡಿ ನಮ್ಮ ರಾಜ್ಯಕ್ಕೆ ಮೋಸ ಮಾಡಿದ್ದಾರೆ ಇಲ್ಲಿರುವ 25 ಸಂಸದರು ಏನು ಮಾಡುತ್ತಿದ್ದಾರೆ.. ಹಾಗೂ ಆಕ್ಸಿಜನ್ ನಮಗೆ 1500 ಮೆಟ್ರಿಕ್ ಟನ್ ಬೇಕಾದರು ನೀಡಿದ್ದು ಮಾತ್ರ 7.5 ಮೇಟ್ರೀಕ್ ಟನ್ ನೀಡಲಾಯಿತು ಅದಕ್ಕೆ ಹೈ ಕೋರ್ಟ್ ಬಂದು ನೀಡಬೇಕು ಎಂದು ಆದೇಶ ವನ್ನು ಧಿಕ್ಕರಿಸಿದ್ದಾರೆ ಎಂದರು..
ಎರಡನೇ ಡೋಜ್ ಸರಿಯಾಗಿ ನೀಡುತ್ತಿಲ್ಲ.. ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ..ಇದನ್ನು ನಿರ್ವಾಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ ಸರಿಯಾದ ವರದಿ ಹೇಳುತ್ತಿಲ್ಲ ಸತ್ತವರ ಸಂಖ್ಯೆಯಲ್ಲಿ ಸುಳ್ಳು ಹೇಳುತ್ತಿದ್ದಾರೆ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವ್ಯಾಕ್ಸಿನೇಷನ್‌ ನೀಡಲಾಗುತ್ತದೆ ಎಂದು ಸುಳ್ಳು ಅಭಿಯಾನ ಆರಂಭ ಮಾಡಿದರು.
ಮೊದಲೆ ಅಲೆಯಲ್ಲಿ ಸಾವಿರಾರು ಜನರು ಸಾವೀಗಿಡಾಗದ್ದಾರೆ 1700.500 ಕೋಟಿ ಅನುದಾನ ನೀಡಿದರು ಯಾರಿಗೂ ಪರಿಹಾರ ಬಂದಿಲ್ಲ ಇವತ್ತು ನೀಡಿದ ಅನುದಾನ ಕೂಡ ಅದೇ ರೀತಿಯಲ್ಲಿ ಹಾಗುವುದು ಎಂದರು.
ಲಾಕ್ ಡೌನ್ ಮಾಡುವ ಮುಂಚೆ ಯಾರಿಗೆ ಯಾವ ಅನುದಾನ ನೀಡಬೇಕು ಯೋಚನೆ ಮಾಡಬೇಕು. ಕಾರ್ಮಿಕರ ನಿಧಿಯಿಂದ 450 ಕೋಟಿ ಅನುದಾನ ಬಳಕೆ ಮಾಡುತ್ತಿದ್ದಾರೆ 18+ ಯಾವಾಗ ನೀಡುತ್ತೀರಾ ? ಪ್ರತಿದಿನದ ವರದಿಯನ್ನು ಕಡ್ಡಾಯವಾಗಿ ಜಿಲ್ಲಾಡಳಿತ ನೀಡಬೇಕು ಜನರಿಗೆ ಉತ್ತರ ಸಿಗುತ್ತದೆ ಬಡವರಿಗೆ ನೀಡುವ ಸಹಾಯಧನ ಕೂಡಲೇ ತಲುಪಬೇಕು ಹಾಗೂ ಇನ್ನೂ ಪ್ರತಿ ಕುಟುಂಬಕ್ಕೆ ಕನಿಷ್ಠ 10000 ಸಾವಿರ ಹಣವನ್ನು ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು..ನಂತರರೈತ ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆ ನೀಡಬೇಕು.. ರೈತರ ಸ್ಥಿತಿ ಬಹಳ ಗಂಭೀರವಾಗಿದೆ.
ನಮ್ಮ ಮಾನವಿ ತಾಲೂಕಿನ ಭೂಮಿ ಇರುವುದನ್ನು ಪರಿಗಣಿಸಿ ಬಿತ್ತನೆಗೆ ಒಟ್ಟು ಬೀಜ 4000 ಕ್ವೀಟಲ್.. ಈಗ ಇವರು ಕೇಳಿದ್ದು ಖಾಲಿ ಏಳು ನೂರು ಕ್ವೀಟಲ್ ಬಿಜ ಮಾತ್ರ ಎಂದರು‌..
ನಂತರ ಮಾಜಿ ಶಾಸಕ ಜಿ ಹಂಪಯ್ಯ ನಾಯಕ ಮಾತಾನಾಡಿ ಮಾನವಿಯಲ್ಲಿ ಕೂಡ 100 ಹಾಸಿಗೆ ಎಂದು ಹೇಳಿ ಕೇವಲ 50 ಬೆಟ್ ಹಾಕಲಾಗುತ್ತದೆ ಆದಕ್ಕೆ ಕೇವಲ 18 ಸಿಲಿಂಡರ್ ಮಾತ್ರ ಇದೆ ಹಾಗೂ ನಾಲ್ಕು ವೆಂಟಿಲೇಟರ್ ಇದ್ದರು ಅದಕ್ಕೆ ಯಾವ ಸಿಬ್ಬಂದಿ ಗಳು ಇಲ್ಲ 13 ಜನರಲ್ಲಿ ಇರುವಲ್ಲಿ ಕೇವಲ ಮೂವರು ಮಾತ್ರ ಇದ್ದಾರೆ ಹಾಗೂ ಸೂಕ್ತ ಸಿಬ್ಬಂದಿಗಳು ಮತ್ತು ಡಾಕ್ಟರ್ ಇಲ್ಲವಾ ಗಿದೆ. ಮೇಡಿಶನ್ ಕೂಡ ಇಲ್ಲ.. ಕವಿತಾಳ. ಪೋತ್ನಾಳ ಆರೋಗ್ಯ ಇಲಾಖೆಯಲ್ಲಿ ಆಯುರ್ವೇದ ಡಾಕ್ಟರ್ ಇದ್ದಾರೆ ಎಂದರು. ತಾಲೂಕಿನ ಸುಮಾರು40 ಹಳ್ಳಿಗಳಲ್ಲಿ ಪ್ರಕರಣಗಳು ಇವೆ ಆದರೂ ದಿನಕ್ಕೆ 300 ಜನರನ್ನು ಮಾತ್ರ ಚಕಪ್ ಮಾಡುತ್ತಿದ್ದಾರೆ ಇದನ್ನು ಹೆಚ್ಚಳ ಮಾಡಬೇಕಾಗಿದೆ ಎಂದರು‌.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರಸಾಬ್, ಕಾರ್ಯದರ್ಶಿ ಮಹಾತೇಶ ಸ್ವಾಮಿ‌ ರೌಡೂರು, ಮುಖಂಡ ರಾದ ರಾಜಾ ವಸಂತ ನಾಯಕ, ಚನ್ನಬಸವಣ್ಣ ಬೆಟದೂರು, ಪುರಸಭೆ ಅಧ್ಯಕ್ಷರಾದ ಜಿಲಾಜಿ ಕುರೇಷಿ, ಉಪಾಧ್ಯಕ್ಷ ಕೆ ಸುಖಮುನಿ, ವಿರೇಶ ಟೇಲರ್, ಬಿಕೆ ಅಮರೇಶಪ್ಪ, ಶರಣಪ್ಪ ಗುಡದಿನ್ನಿ, ಆದಮ್ ಬೇಗ್, ಯುವ ಘಟಕದ ಅಧ್ಯಕ್ಷ ವಿಶಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.