ಇಂದು ಸಂಜೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ: ಇನ್ನಷ್ಟು ನಿರ್ಬಂಧಗಳ ಸಡಿಲಿಕೆ?
ಬೆಂಗಳೂರು: ಕೋವಿಡ್ ಎರಡನೇ ಅಲೆ ಹಾವಳಿ ಮತ್ತಷ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನಷ್ಟು ನಿರ್ಬಂಧಗಳ ಸಡಿಲಿಕೆಗೆ ಸರ್ಕಾರ ಚಿಂತನೆ ನಡೆದಿದ್ದು, ಈ ಸಂಬಂಧ ‌ಶನಿವಾರ ಸಂಜೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಸಚಿವರು ಮತ್ತು ಅಧಿಕಾರಿಗಳು ಭಾಗವ‌ಹಿಸಲಿದ್ದಾರೆ. ಅಲ್ಲಿ ಮೂರನೇ ಹಂತದ ಸ‌ಡಿಲಿಕೆ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ವ್ಯಾಪಾರ-ವಾಣಿಜ್ಯ ಚಟುವಟಿಕೆ ಗಳಿಗೆ ಪ್ರಸ್ತುತ ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಅವಕಾಶ‌ ಮಾಡಿಕೊಡಲಾಗಿದೆ. ಈ ಅವಧಿಯನ್ನು ರಾತ್ರಿ 8 ಗಂಟೆಯವರೆಗೆ ವಿಸ್ತರಣೆ ಜತೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟಿಗೆ ಅನುಮತಿ ನೀಡುವ‌ ಯೋಚನೆ ಇದೆ.
ರಾಜಧಾನಿಯಲ್ಲಿ ಸಿನಿಮಾ ಮಂದಿರಗಳು, ಮಾಲ್‌ಗ‌ಳು, ವಾಣಿಜ್ಯ ಸಂಕಿರ್ಣಗಳು ಸ್ಥಗಿತಗೊಂಡಿವೆ. ಒಟ್ಟಾರೆ ಸಾಮರ್ಥ್ಯದಲ್ಲಿ ಶೇ.50 ಗ್ರಾಹಕರೊಂದಿಗೆ ಪುನಾರಂಭಕ್ಕೆ ಅನುಮತಿ ನೀಡುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿ ಮಾಡಿದೆ. ಇದಕ್ಕೂ ಗ್ರೀನ್‌ ಸಿಗ್ನಲ್‌ ನೀಡುವ ಸಾಧ್ಯತೆ ಇದೆ.
ಎರಡನೇ ಹಂತದ ಅನ್‌ಲಾಕ್‌ ಅವಧಿಯು ಜು5ರಂದು ಬೆಳಿಗ್ಗೆ ಅಂತ್ಯಗೊಳ್ಳಲಿದೆ