ಚಿರತೆ ದಾಳಿಗೆ 21 ಕುರಿಮರಿಗಳ ಸಾವು
ಪಾವಗಡ:ತಾಲೂಕಿನ ರೂಪ್ಪ ಪಂಚಾಯತಿ ವ್ಯಾಪ್ತಿಯ ರೈತ ಪೆದ್ದಪ್ಪಯ್ಯ ಎಂಬುವರಿಗೆ ಸೇರಿದ 21 ಕುರಿಮರಿಗಳ ಮೇಲೆ ಚಿರತೆ ದಾಳಿ ಮಾಡಿದೆ.
ರೈತ ಪೆದ್ದಪ್ಪಯ್ಯ ಸಂಬಂಧಿಕ ಅಶ್ವಥ್ ಮಾತನಾಡಿ, ಹಗಲಿನಲ್ಲಿಊರಿಗೆ ಹತ್ತಿರ ವಿರುವ ಪ್ರದೇಶದಲ್ಲಿ ಇಂತಹ ಘಟನೆ ನಡೆದಿರುವ ಕಾರಣ ಸಾರ್ವಜನಿಕರು ಭಯಭೀತರಾಗಿದ್ದಾರೆ. ಸುಮಾರು ಎರಡು ಲಕ್ಷ ಬೆಲೆ ಬಾಳುವ ಕುರಿಮರಿಗಳು ಮೃತಪಟ್ಟ ಕಾರಣ ರೈತ ಕಂಗಾಲಾಗಿದ್ದಾನೆ.
ಕುರಿಮರಿಗಳ ಸಾವಿನಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.