ಅಗಸ್ಟ್ 14 ರಂದು ಪಾವಗಡದಲ್ಲಿ ಮೇಘ ಲೋಕ್ ಅದಾಲತ್
ಪಾವಗಡ:ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಂತಹ ಸಾರ್ವಜನಿಕರ ಪ್ರಕರಣಗಳು ಇತಾರ್ಥ ಮಾಡಿಕೊಳ್ಳಲು ಸುವರ್ಣ ಅವಕಾಶ ಎಂದು ಎಂ.ಎಸ್.ಹರಿಣಿ ಹಿರಿಯ ಸಿವಿಲ್ ನ್ಯಾಯದೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ತಿಳಿದಿದ್ದಾರೆ.
ಪಾವಗಡ ಪಟ್ಟದ ನ್ಯಾಯಾಲಯದ ಅವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಉಚ್ಚ ನ್ಯಾಯಾಲಯದ ಆದೇಶ ಹಾಗೂ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಆದೇಶದ ಮೇರೆಗೆ ಸಿವಿಲ್ ಪ್ರಕರಣಗಳು ಎಲ್ಲಾ ರೀತಿಯ ರಾಜಿ ಆಗುವಂತಹ ಪ್ರಕರಣಗಳು ಒಂದು ಮೆಗಾ ಲೋಕ್ ಅದಾಲತ್ ಆಗಸ್ಟ್ 14ರಂದು ಹಮ್ಮಿಕೊಳ್ಳಲಾಗಿದೆ. ಈಗಾಗಲೇ, ಕೋವಿಡ್ ಹಿನ್ನೆಲೆಯಲ್ಲಿ ಬಹಾಳಷ್ಟು ಪ್ರಕರಣಗಳು ಇತ್ಯರ್ಥಗೋಳ್ಳದೆ ತಡವಾಗು ತ್ತಿದೆ. ಇದರಿಂದ ಕಕ್ಷಿದಾರರಿಗೆ ವಿಳಂಬವಾಗುತ್ತಿದೆ.
ಕಕ್ಷಿದಾರರು ಮೇಘ ಲೋಕ ಅದಾಲತ್ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಹಲವು ದಿನಗಳಿಂದ ನೆನೆಗುದಿಗೆ ಬಿದ್ದಂತಹ ಪ್ರಕರಣಗಳು ನಿಮ್ಮ ವಕೀಲರ ಬಳಿ ಇದರ ಬಗ್ಗೆ ಮಾಹಿತಿ ಪಡೆದು ಕಕ್ಷಿದಾರರ ಅಪೋಸಿಟ್ ಇರುವಂತಹ ವ್ಯಕ್ತಿಗಳಿಗೆ ಮಾಹಿತಿ ತಿಳಿಸಿ ನ್ಯಾಯಾಲಯದ ಆವರಣದಲ್ಲಿ ರಾಜಿ ಸಂಧಾನ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ಇದೇ ವೇಳೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಗದೀಶ್ ಬಿಸಿರೊಟ್ಟಿ ಮಾತನಾಡಿ ಈಗಾಗಲೇ ಪೊಲೀಸ್ ಇಲಾಖೆ. ಬ್ಯಾಂಕ್ ಗಳು. ಕೃಷಿ ಇಲಾಖೆ. ಪುರಸಭೆ ಇಲಾಖೆ ವ್ಯಾಪ್ತಿಗೆ ಬರುವಂತಹ ಪ್ರಕರಣಗಳು ಇತ್ಯರ್ಥ ಮಾಡಿಕೊಳ್ಳುವಂತಹ ಉದ್ದೇಶಕ್ಕಾಗಿ ಅಧಿಕಾರಿಗಳನ್ನು ಕರೆಸಿ ಸಭೆಗಳನ್ನು ಮಾಡಲಾಗಿದೆ.
ಈಗಾಗಲೇ ಈ ಹಿಂದೆ 3200 ಪ್ರಕಾರಗಳನ್ನು ಇತರ್ಥಗೂಳಿಸಲಾಗಿದೆ.
ಕ್ರಿಮಿನಲ್ ಆಫೆನ್ಸ್ ಪ್ರಕಣಗಳು ಅಪಘಾತ ಪರಿಹಾರದ ಪ್ರಕರಣಗಳು ಗಂಡ-ಹೆಂಡತಿಯರ ವಿಚ್ಛೇದನ ಪ್ರಕಣಗಳು. ಚೆಕ್ ಬೌನ್ಸ್ ಹಾಗೂ ಜನನ ಪ್ರಮಾಣದ ಪ್ರಕರಣಗಳು. ಹಿಗೇ ಅನೇಕ ರೀತಿಯ ಪ್ರಕರಣಗಳು ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಇತರ್ಥಗೂಳಿಸುವ ಅವಕಾಶ ಇದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು.
ಇವಳೇ ಪತ್ರಿಕಾಗೋಷ್ಠಿಯಲ್ಲಿ ಹೆಚ್. ಕೆ. ಅಖಿಲ ಅಧಿಕ ಸಿವಿಲ್ ನ್ಯಾಯಾಧೀಶರು, ಸರ್ಕಾರಿ ವಕೀಲರಾದ ಸಣ್ಣೀರಪ್ಪ ಇದ್ದರು.