ಬಕ್ರೀದ್ ಹಬ್ಬ ಶಾಂತಿ ರೀತಿ ಆಚರಿಸಲು ಸಿಪಿಐ ಕರೆ
ಸಿಂಧನೂರು:ಸರ್ಕಾರದ ಆದೇಶದ ಪ್ರಕಾರ ಬಕ್ರೀದ್ ಹಬ್ಬವನ್ನು ಶಾಂತಿ ರೀತಿಯಾಗಿ ಆಚರಿಸು ವಂತೆ ಸಿಪಿಐ ಉಮೇಶ್ ಕಾಂಬ್ಳೆ ಕರೆ ನೀಡಿದರು ಅವರು ನಗರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬ ಆಚರಣೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.
ಕೊನಾ ಹೆಚ್ಚಳ ಇರುವುದರಿಂದ ಈಗಾಗಲೇ ಸರಕಾರ ನಿರ್ಣಯಿಸಿದ ಪ್ರಕಾರ ಬಕ್ರೀದ್ ಹಬ್ಬ ಮುಸ್ಲಿಂ ಬಾಂಧವರು ಆಚರಿಸಬೇಕು ಹಾಗೂ ಕಾನೂನು ನೇಮ ಯಾರು ಮೀರಬಾರದು ಎಂದರು. ಹಬ್ಬ ಆಚರಣೆಯ ವೇಳೆ ಸಾಮಾಜಿಕ ಅಂತರ ಕಡ್ಡಾಯವಾಗಿ ಮಾಸ್ಕ್ ಧರಿಸುವ ಕೆಲಸ ಆಗಬೇಕು. ಇದಕ್ಕೆ ಪ್ರತಿಯೊಬ್ಬರ ಸಹಾಯ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ನಗರ ಠಾಣಾ ಪಿಎಸ್ ಐ ವಿಜಯ್ ಕೃಷ್ಣ, ಮುಸ್ಲಿಂ ಸಮಾಜದ ಮುಖಂಡರಾದ ಬಾಬರ್ ಭಾಷಾ ಜಾಗಿರ್ದಾರ್, ಎಮ್.ಡಿ ನದೀಮ್ ಮುಲ್ಲಾ, ಖಾಜಾ ಮಲಿಕ್ ವಕೀಲ್, ಶಬ್ಬೀರ್ ಹುಸೇನ್, ಖಾಜಾಹುಸೇನ್ ಜಹೀರುದ್ದಿನ್ ವಕೀಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಸೇರಿದಂತೆ ಇತರರು ಇದ್ದರು.