ಗೆಲ್ಲಲು ಒಬಿಸಿ ಮತಗಳೆ ನಿರ್ಣಾಯಕ
ಪಾವಗಡ :ರಾಜಕೀಯ ಪಕ್ಷದಲ್ಲಿ ಗೆಲ್ಲಲು ಒಬಿಸಿ ಮತಗಳೆ ನಿರ್ಣಾಯಕ ಎಂದು ಜಿಲ್ಲಾ ಬಿಜೆಪಿ ಓಬಿಸಿ ಅಧ್ಯಕ್ಷ ಶಂಕರಪ್ಪ ತಿಳಿಸಿದರು.
ಪಾವಗಡ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಓಬಿಸಿ ಕಾರ್ಯಕಾರಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಓಬಿಸಿ ಘಟಕದ ಸದಸ್ಯರು ಉತ್ತಮ ಕಾರ್ಯ ಚಟುವಟಿಕೆ ಯಲ್ಲಿ ತೊಡಗಿದ್ದಾರೆ. ಓಬಿಸಿ ಯಲ್ಲಿ ಅನೇಕ ಪಂಗಡಗಳು ಬರುವ ಕಾರಣ ಎಲ್ಲಾ ಸಮುದಾಯಕ್ಕೆ ಒತ್ತು ನೀಡಬೇಕಾದ ಜವಾಬ್ದಾರಿ ಪಕ್ಷಕ್ಕೆ ಇರುತ್ತದೆ ಎಂದರು.
ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರ ಕೆಲಸವನ್ನು ಪಕ್ಷ ಗಮನಿಸುತ್ತಿರುತ್ತದೆ ಯಾವ ವೇಳೆಯಲ್ಲಿ ಯಾವ ಹುದ್ದೆ ಯಾವ ಜವಾಬ್ದಾರಿ ನೀಡುತ್ತಾರೆ ಎಂಬುದು ಯಾರಿಗೂ ತಿಳಿಯುವುದಿಲ್ಲ ಎಂದರು. ಬಿಜೆಪಿ ತಾಲ್ಲೂಕಿನಲ್ಲಿ ಸದೃಢ ವಾಗಿ ಬೆಳೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮದೇ ಯಾಗಿರುವುದರಿಂದ ಉತ್ತಮ ಕೆಲಸಗಳು ಅಗುತ್ತಿವೆ ಎಂದರು.
ನಂತರ ಪಾವಗಡ ತಾಲ್ಲೂಕು ಬಿಜೆಪಿ ಪಕ್ಷದ ಅಧ್ಯಕ್ಷ ರವಿಶಂಕರ್ ನಾಯ್ಕ್ ಮಾತನಾಡಿ ಅಧ್ಯಕ್ಷ ಹುದ್ದೆ ಬಹಾಳಷ್ಟು ಜವಾಬ್ದಾರಿ ಉಳ್ಳದ್ದಾಗಿರುತ್ತದೆ ತಾಲೂಕಿನ ಕಾರ್ಯಕರ್ತರು ತಮ್ಮ ಸಮಸ್ಯೆಗಳು ಇದ್ದಲ್ಲಿ ನೇರವಾಗಿ ತಿಳಿಸಿ ಹಾಗೂ ನಿಮ್ಮ ಗ್ರಾಮದಲ್ಲಿ ಅಧಿಕಾರಿಗಳ ತಾರತಮ್ಯ ವಿರೋಧಿ ಚಟುವಟಿಕೆಗಳು ಮಾಡಲಾಗು ತ್ತಿದ್ದರೆ ಪಕ್ಷದ ಗಮನಕ್ಕೆ ತನ್ನಿ. ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷದ ಕಾರ್ಯ ಚಟುವಟಿಕೆಗಳು ಕಾರ್ಯಕರ್ತರು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ಈ ವೇಳೆ ಸಭೆಯಲ್ಲಿ ಜಿಲ್ಲಾ ಓಬಿಸಿ ಉಪಾಧ್ಯಕ್ಷ ಸುರೇಶ್. ರಘು.ತಾಲ್ಲೂಕು ಅಧ್ಯಕ್ಷ ಕಲ್ಕುಂದ ರಾಜ್ ಮಾತನಾಡಿದರು. ಶೇಖರ್, ಬಾಬು, ಮಂಜುನಾಥ್ , ರಾಜೇಂದ್ರ, ನಟಶೇಖರ ಹಾಗೂ ಇತರೆ ಕಾರ್ಯಕಾರಿ ಸದಸ್ಯರು ಗಳು ಭಾಗವಹಿಸಿದ್ದರು.