ಭ್ರಷ್ಟ ರಾಜಕಾರಣಿಗೆ ಆದರ್ಶ ಸ್ವಾಮೀಜಿಗಳು ರಕ್ಷಣೆ ನೀಡಿದರೆ ಹೇಗೆ ?
ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 35
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರಶ್ನೆ
ಅರಿವಿಲ್ಲದ ಚಿಕ್ಕವಯಸ್ಸಿನಲ್ಲಿ ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟೆ
ಕಣ್ಣಿಗೆ ಕಾಣದ ರಾಜಕೀಯ ನಾಯಕರ ನಡುವೆ ಹೊಂದಾಣಿಕೆ ಅಪಾಯ
ಬೆಂಗಳೂರು:ಧರ್ಮ ಮತ್ತು ರಾಜಕಾರಣ ಒಂದೇ ಎಂದು ಹೇಳುವ ಸ್ವಾಮೀಜಿಗಳು ಭ್ರಷ್ಟರ ಜತೆಗೂಡಿದ್ದಾರೆ. ಒಬ್ಬ ಭ್ರಷ್ಟ ರಾಜಕಾರಿಣಿಗೆ ಅದರ್ಶ ಸ್ವಾಮೀಜಿಗಳು ರಕ್ಷಣೆಗೆ ನಿಂತರೆ ಹೇಗೆ? ಎಂದು ಮಾಜಿ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟ ರಾಜಕಾರಣಿಗಳಿಗೆ ಸ್ವಾಮೀಜಿಗಳು ಜೈಕಾರ ಹಾಕುತ್ತೀರಾ. ಕೆಲಸ್ವಾಮೀಜಿಗಳು ಗೋಮುಖ ವ್ಯಾಘ್ರಗಳು. ಭ್ರಷ್ಟಾಚಾರದಲ್ಲಿ ಜಾತಿ ಒಳಗೂಡಿಸಿ ಸಮರ್ಥಿಸಿಕೊಳ್ಳುವುದು ಎಷ್ಟು ಸಮಂಜಸ. ಒಬ್ಬ ಸಿಎಂ ಪರ ನಿಂತು ಮಾತನಾಡಿ ಅವರಿಂದ ದಕ್ಷಿಣೆ ಪಡೆಯಲು ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣ ಎಂಬುದು ವಿಶಾಲ ಕ್ಷೇತ್ರ. ಗ್ರಾಮ ಪಂಚಾಯಿತಿ ಮಟ್ಟದಿಂದ ರಾಷ್ಟ್ರಪತಿವರೆಗೆ ಕಾರ್ಯಕ್ಷೇತ್ರ ಇರುವುದು ರಾಜಕಾರಣ. ಸಾರ್ವಜನಿಕ ಬದುಕು ಗೌರವಯುತ ಪರ್ಯಾಯ ಪದ ರಾಜಕಾರಣ. ಸಾರ್ವಜನಿಕ ಬದುಕು ವೃತ್ತಿಯಲ್ಲ, ಸೇವೆ. ರಾಜಕಾರಣ ಎಂದರೆ ಪುಡಾರಿ ಎಂಬ ವಾತಾವರಣ ನಿರ್ಮಾಣ ಆಗಿವೆ. ಈ ಕ್ಷೇತ್ರಕ್ಕೆ ಆದರ್ಶಗಳಿಲ್ಲದೆ, ಕೌಟುಂಬಿಕ ಹಿನ್ನೆಲೆಯಿಂದ ವಂಶಪಾರಂಪರ್ಯವಾಗಿ, ಬದುಕಿನಲ್ಲಿ ಯಶಸ್ಸು ಕಾಣಲು ರಾಜಕಾರಣಕ್ಕೆ ಬರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲ ಪಕ್ಷದಲ್ಲಿ ಇದ್ದಾರೆ:ನಾವು ಒಂದು ನಿರ್ಬಂಽತ ಸನ್ನಿವೇಶದಲ್ಲಿ ಅರಿವಿಲ್ಲದ ಚಿಕ್ಕವಯಸ್ಸಿನಲ್ಲಿ ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟಿದ್ದೇವೆ. ನಾವುಮಾಡುತ್ತಿರುವ ತಪ್ಪು ಎಂದು ಗೊತ್ತಿದ್ದರೂ ರಾಜಿ ಮಾಡಿಕೊಂಡು ಮುಂದುವರಿಯುತ್ತೇವೆ. ಸ್ವಹಿತ ಇರುವವರು ಎಲ್ಲ ಪಕ್ಷದಲ್ಲಿ ಇದ್ದಾರೆ. ಅವರೆಲ್ಲ ಒಂದು ಪಾರ್ಟಿ ಆಗುತ್ತಾರೆ. ಅವರಿಗೆ ಸೈದ್ಧಾಂತಿಕತೆ, ಆದರ್ಶಗಳು ಇಲ್ಲ. ಕಳೆದ ೨೫ ವರ್ಷಗಳ ಹಿಂದೆ ಇದ್ದ ರಾಜಕಾರಣ, ವ್ಯಾಪಾರಕ್ಕೆ ಇದ್ದ ವ್ಯತ್ಯಾಸ ಕಡಿಮೆ ಆಗುತ್ತಾ ಬಂದಿದೆ. ಈಗ ರಾಜಕೀಯ ವ್ಯಾಪಾರವಾಗಿದೆ. ಸ್ವಹಿತ ಇದ್ದವರು ವರ್ಗದ ಹಿತದ ಪ್ರಶ್ನೆ ಬಂದಾಗ ಜಾಣತನದಿಂದ ಒಟ್ಟಾಗಿ ಇರುತ್ತಾರೆ. ತಮ್ಮ ಪಕ್ಷದಲ್ಲಿ ವರ್ಚಸ್ಸು ಮೀರಿ, ಸುಲಿಗೆ ಮಾಡಲು ಒಬ್ಬರು ಇನ್ನೊಬ್ಬರಿಗೆ ಸಹಕರಿಸುತ್ತಾರೆ. ಕಣ್ಣಿಗೆ ಕಾಣದ ವಿವಿಧ ರಾಜಕೀಯ ನಾಯಕರ ನಡುವೆ ಹೊಂದಾಣಿಕೆ ಬಹಳ ಅಪಾಯ. ಇದರ ಜತೆಗೆ ಜಾತಿ ಧರ್ಮ ಕಂಟಕವಿದೆ ಎಂದರು.
ತಾತ್ಕಾಲಿಕ ಆಶ್ವಾಸನೆ:ಸಾರ್ವಜನಿಕ ಜೀವನಕ್ಕೆ ಸೇವಾ ಮನೋಭಾವ ಅಧಾರ ಇದ್ದರೆ ಜಾತಿ ಏಕೆ? ಜಾತಿಯನ್ನು ಮುಂದಿಟ್ಟು ತಾವು ಮಾಡಿರುವ ಎಲ್ಲ ತಪ್ಪುಗಳನ್ನು ಮರೆಮಾಚುವ ಪ್ರವರ್ಧಮಾನ ಮುಂದುವರಿದಿದೆ. ಯೋಚಿಸಿ ಉತ್ತಮ ನಾಯಕನನ್ನು ಆಯ್ಕೆ ಮಾಡದಿದ್ದರೆ ಸಂಸದೀಯ ವ್ಯವಸ್ಥೆಯಲ್ಲಿ ಮತ ಹಾಕಿದವನು ಬಾಳೆ ಹಣ್ಣಿನ ಸಿಪ್ಪೆ ಆಗುತ್ತಾನೆ. ಕಲಾಪಗಳಲ್ಲಿ ಜನಜೀವನಕ್ಕೆ ಅನುಕೂಲವಾಗುವ ವಿಷಯ ಚರ್ಚೆ ಮಾಡಲ್ಲ.
ಜಾತಿ ಮುನ್ನೆಲೆಗೆ ತರುತ್ತೇವೆ. ಬೆಲೆ ಏರಿಕೆ, ಅದಕ್ಷತೆ, ಭ್ರಷ್ಟಾಚಾರ ಬದಿಗೊತ್ತುತ್ತೇವೆ. ಸಂಸದೀಯ ವೇದಿಕೆಗಳಲ್ಲಿ ಜನರ ಸಮಸ್ಯೆ ಚರ್ಚೆ ಮಾಡುವ ಮನಸ್ಸು, ಇಲ್ಲ. ಚುನಾವಣಾ ಸಂದರ್ಭದಲ್ಲಿ ಜನರ ಸಮಸ್ಯೆಗೆ ಸ್ಪಂದಿಸದೆ ತಾತ್ಕಾಲಿಕ ಆಶ್ವಾಸನೆ ನೀಡಿ ಮರೆಯಾಗುವುದು ದುರಂತ ಎಂದು ಹೇಳಿದರು.ಮಂತ್ರಿ ಆಗುವವನು ಮಾನ ಮರ್ಯಾದೆ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ನಡತೆಯಲ್ಲಿ ಪರಿವರ್ತನೆ ಕಾಣಬೇಕು.
ನಾನು ಮೂರು ನಾಮ ಹಾಕಿಕೊಂಡು ಜಾಗಟೆ ಹಾಕಿಕೊಂಡು ಬಂದರೆ ಪ್ರಚಾರಕ್ಕೆ ಆಯುಧ. ಆದರೆ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಮಾಧ್ಯಮಗಳುಜನರ ಮುಂದಿಡುತ್ತಿಲ್ಲ ಎಂದು ಹೇಳಿದ ಅವರು, ನ್ಯಾಯಾಲಯಗಳು ಸ್ವತಂತ್ರವಾಗಿರಬೇಕು. ಶಾಸನಗಳು ಸಂವಿಧಾನಾತ್ಮಕ ಇಲ್ಲದಿದ್ದರೆ ವಿಮರ್ಶೆಮಾಡಬೇಕು. ಯಾವುದು ಸಿಂಧುವಲ್ಲ ಅದನ್ನು ಗಟ್ಟಿತನದಿಂದ ಹೇಳಬೇಕು. ಕೆಲವು ವೇಳೆ ಅಲ್ಲಿ ನ್ಯಾಯ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಇಂದಿರಾ ಗಾಂಧಿ ಟೀಕಿಸಿದವರು ಮಾಡುತ್ತಿರುವುದೇನು?ಇಂದಿರಾಗಾಂಧಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಈಕೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಕುಟುಂಬ ರಾಜಕಾರಣ ಅಂತಾರೆ.ಇಂದಿರಾಗಾಂಧಿ ಅವರನ್ನು ಟೀಕೆ ಮಾಡಿದ್ದೇನು? ಈಗ ನೀವು ಮಾಡುತ್ತಿರುವುದೇನು. ಬಲವಾದ ಮನಸ್ಸಿನಿಂದ ಕೆಟ್ಟ ನಾಯಕತ್ವ ವಿರುದ್ಧ ಮಾತನಾಡಿದರೆ ಪಕ್ಷ ಬಿಟ್ಟು ಹೋಗಬೇಕು ಎಂಬ ಪರಿಸ್ಥಿತಿಯಲ್ಲಿದ್ದೇವೆ ಎಂದು ತಿಳಿಸಿದರು. ೧೯೭೦ ಡಿಸೆಂಬರ್‌ನಲ್ಲಿ ಬೆಂಗಳೂರು ಮಹಾನಗರ ಸಭೆ ಚುನಾವಣಾ ಆಯಿತು. ಮಶ್ವರ ದಲ್ಲಿ ದೇವರಾಜ ಅರಸು ಮನೆ ಇತ್ತು. ಅಲ್ಲಿ ಈಜುಕೊಳದ ಬಳಿ ನಮ್ಮ ಮನೆ ಅಲ್ಲಿತ್ತು. ಅಲ್ಲಿ ಯಾರೂ ಅಭ್ಯರ್ಥಿ ಇಲ್ಲದಿದ್ದಾಗ ದೇವರಾಜ ಅರಸು ನನ್ನ ಮನೆಗೆ ಬಂದು ಚುನಾವಣಾ ಅರ್ಜಿ ಹಾಕಲು ಹೇಳಿದರು. ಆಗ ಎರಡನ ವರ್ಷದ ಬಿಎಸ್‌ಸಿ ಓದುತ್ತಿದ್ದೆ. ಆ ಚುನಾವಣೆ ಸೋತೆ. ಆದರೆ ಹಿಂದಿರುಗಿ ಹೋಗಲಿಲ್ಲ ಎಂದ ಅವರು, ತಾವು ನಡೆದು ಬಂದ ರಾಜಕೀಯ ಹಾದಿ ಬಗ್ಗೆ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಮರುಸ್ಥಾಪನೆನನಗೆ ರಾಜಕೀಯ ಬದ್ಧತೆ ಕಲಿಸದವರು ದೇವರಾಜ ಅರಸು, ರಾಜಕೀಯ ಸಂಸ್ಕಾರ ಕಲಸಿದವರು ಕೆ.ಎಚ್. ರಂಗನಾಥ್. ಇವರು ಮಹಾನ್ ತಪಸ್ವಿ.ಪ್ರಾಮಾಣಿಕ ಜೀವನ ಕಳೆದವರು. ಇತ್ತೀಚಿನ ರಾಜಕಾರಣಿಗಳಲ್ಲಿ ಸರಿ ತಪ್ಪುಗಳ ಮಧ್ಯೆ ವ್ಯತ್ಯಾಸ ಮಾಯ. ರಾಜಕಾರಣದಲ್ಲಿ ವ್ಯಾಪಾರ ಸೇವೆ ಮಾಯ. ಆಯಾ ಕಾಲಕ್ಕೆ ತಕ್ಕಂತೆ ಭಾಷಣ ಮಾಡುವವರ ಅವತಾರಗಳು ಜನರಿಗೆ ಗೊತ್ತಿಲ್ಲ ಅಂತಾ ನಾಟಕ ಮಾಡುತ್ತಿರುವುದು ಕೊಚ್ಚೆಯಿಂದ ರಾಜಕೀಯ ವ್ಯವಸ್ಥೆ ಬದಲಾಯಿಸುವ ಆತ್ಮವಿಶ್ವಾಸ ನನಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಪುನಸ್ಥಾಪನೆಯಾಗುವ ಎಂಬ ನಂಬಿಕೆ ಇದೆ ಎಂದರು.
ಸತ್ತು ಹೋಗಿದೆ ಆಂತರಿಕ ಪ್ರಜಾಪ್ರಭುತ್ವಯಾವ ರಾಜಕೀಯ ಪಕ್ಷ ಆಡಳಿತಕ್ಕೆ ಬರುತ್ತೆ, ಅದು ನೀತಿ ಘೋಷಿಸಬೇಕು. ಚುನಾವಣೆ ಸಂದರ್ಭದಲ್ಲಿ ಜನರ ಮುಂದಿಡಬೇಕು. ಜನರ ಹಿತಕ್ಕಾಗಿ ಘೋಷಿಸಿದಕಾರ್ಯಕ್ರಮಗಳು ಆಚರಣೆಗೆ ತರಬೇಕು. ಈಗ ನಡೆಯುತ್ತಿರುವುದು ನೀತಿಗಳ ಘೋಷಣೆಗೆ ಅಧಿಕಾರಗಳು. ನಾವು ಅಽಕಾರಿಗಳ ವರ್ಗಾವಣೆಯಲ್ಲಿ ತಲ್ಲೀನ.ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಹೇಳಿದರು. ಪ್ರಾಥಮಿಕ ಶಿಕ್ಷಣ, ಆರೋಗ್ಯ ಖಾಸಗಿಯವರ ಕೈಯಲ್ಲಿದೆ. ಎಲ್ಲಿದೆ ನಿಮ್ಮ ಪ್ರಜಾಪ್ರಭುತ್ವ? ಆಸ್ಪತ್ರೆಗಳು ಖಾಸಗಿಯವರ ಸಾಮ್ರಾಜ್ಯವಾದಾಗ ಶ್ರೀಮಂತರಿಗಷ್ಟೇ ರೋಗ ಬಂದ್ರೆ ಹೋಗಬಹುದು. ಆದರೆಬಡವರಿಗೆ ರೋಗ ಬಂದ್ರೆ ಎಲ್ಲಿಗೆ ಹೋಗಬೇಕು? ಸಾಯೋಕೆ ತಯಾರು ಆಗಬೇಕು. ಪ್ರಾಥಮಿಕ ಶಿಕ್ಷಣ, ಆರೋಗ್ಯ ಖಾಸಗಿಯವರ ಕೈಯಲ್ಲಿ ಕೊಟ್ಟುಬಿಟ್ಟಿದ್ದೇವೆ, ಪ್ರಜಾಪ್ರಭುತ್ವ ಹೆಸರಲ್ಲಿ ಅಸೆಂಬ್ಲಿಯಲ್ಲಿ ಎಲ್ಲ ರಾಜಕೀಯ ಪಕ್ಷದ ಶಾಸಕರು ಸ್ವಂತ ಶಿಕ್ಷಣ ಸಂಸ್ಥೆಗಳನ್ನ ಹೊಂದಿರುತ್ತಾರೆ. ಅವರಿಗೆ ಖಾಸಗೀಕರಣ ಬೇಕಾ, ಸಾರ್ವತ್ರಿಕರಣ ಬೇಕಾಗುತ್ತಾ? ಅಸೆಂಬ್ಲಿಯಲ್ಲಿ ಅವರೆ ಒಂದೇಯಾಗಿರುತ್ತಾರೆ. ಹೊರಗೆ ನೀವೆ ಆ ಪಕ್ಷ, ಈ ಪಕ್ಷ ಅಂತ ತಲೆ ಒಡೆದುಕೊಂಡು ಸತ್ತಿರುತ್ತೀರಿ ಎಂದು ಸದ್ಯದ ರಾಜಕಾರಣದ ಸ್ಥಿತಿಗತಿಯನ್ನು ರಮೇಶ್ ಕುಮಾರ್ ಅವರು ವಿಶ್ಲೇಷಿಸಿದರು.
ಚುನಾವಣಾ ವ್ಯವಸ್ಥೆ ಸುಧಾರಣೆ ಆಗಲಿಪ್ರಜಾಪ್ರಭುತ್ವ ಸತ್ತು ಹೋಗಿದೆ. ಅಸಲಿ ಪ್ರಜಾಪ್ರಭುತ್ವ ಬರಬೇಕಿದೆ. ಚುನಾವಣಾ ಆಯೋಗ ಪ್ರಮಾಣ ಪತ್ರ ಸಲ್ಲಿಸಿ ಅಂತ ಹೇಳುತ್ತೆ. ಆ ಮೇಲೆ ಅವರ ಕೆಲಸ ಏನೂ ಇರೋಲ್ಲ, ಮಲಗಿ ಬಿಡುತ್ತಾರೆ. ಚುನಾವಣೆಯಲ್ಲಿ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಐದು ವರ್ಷದ ಹಿಂದೆ ನಿನಗೆ ಏನೂ ಇರಲಿಲ್ಲ. ಐದು ವರ್ಷದ ನಂತರ ಎರಡೂವರೆ ನೂರು ಕೋಟಿ ಎಲ್ಲಿಂದ ಬಂತು? ಎಂದು ತನಿಖೆ ಮಾಡಿ ಸದಸ್ಯತ್ವ ರದ್ದು ಮಾಡಿ ಎಂದು ಹೇಳುವ ವ್ಯವಸ್ಥೆಯೇ ಇಲ್ಲ. ಇನ್ನೂ ಯಾಕೆ ಬೇರೆಯವರು ರಾಜಕಾರಣ ಮಾಡೋದಿಲ್ಲ? ಎರಡುವರೆ ಸಾವಿರ ಬಂಡವಾಳ ಹಾಕೋದು, ಗೆದ್ದು, ಬಂಡವಾಳ ತೆಗೆಯೋದು, ಈಗ ರಾಜಕಾರಣ ವ್ಯಾಪಾರವಾಗಿದೆ ಎಂದು ರಮೇಶ್ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.