ಪಾರಂಪರಿಕ ವೈದ್ಯಕೀಯ ಪದ್ದತಿಯ ಅಪೂರ್ವ ಜ್ಞಾನನಿಧಿಯೆಂದು ಹೆಸರು ಮಾಡಿರುವ ಬಾಗಳಿ ನಾಟಿ ವೈದ್ಯ ಡಾ.ಬಿ.ಬಿ.ಹೊಸೂರಪ್ಪ
ನಾಗರಾಜ್ ನಾಯ್ಕ.ಸಿ. ಮಾಡಲಗೇರಿ
ಹರಪನಹಳ್ಳಿ:ಪಾರಂಪರಿಕ ನಾಟಿ ವೈದ್ಯಕೀಯ ಪದ್ದತಿಯ ಅಪೂರ್ವ ಜ್ಞಾನನಿಧಿಯೆಂದೇ ಹೆಸರುಮಾಡಿರುವ ಡಬ್ಬಲ್ ಡಾಕ್ಟರೇಟ್ ಪಡೆದ ಬಾಗಳಿ ಗ್ರಾಮದ ಡಾ.ಬಿ. ಹೊಸೂರಪ್ಪ ನಾಟಿ ವೈದ್ಯ ಪದ್ದತಿಯ ಪರಿಣಿತರಲ್ಲೊಬ್ಬರು ಸುಮಾರು ವರ್ಷಗಳಿಂದಲೂ ನಾಟಿ ವೈದ್ಯಲೋಕದ ಸಂಪನ್ನಮೂಲ ವ್ಯಕ್ತಿಯೆಂದೆ ಗುರು ತಿಸಲ್ಪಟ್ಟಿರುವ ಇವರಿಗೆ ತಮಿಳುನಾಡು ರಾಜ್ಯದಲ್ಲಿ ಡಾಕ್ಟರೇಟ್ ಹೊಸೂರಪ್ಪ ಇವರು ನಾಟಿ ವೈಧ್ಯಕ್ಕೆ ಮತ್ತೊಮ್ಮೆ ರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟ ಸಾಧಕರವರು. ಒಳ್ಳೆಯ ಅನುಭವಿ.
500ಕ್ಕೂ ಮಿಕ್ಕಿದ ಗಿಡಮೂಲಿಕೆ ಜಡಿಬೂಟಿಗಳನ್ನು ಚೆನ್ನಾಗಿ ಬಲ್ಲ ಹಾಗೂ ಅವುಗಳನ್ನು ರೋಗಿಗಳ ಮೇಲೆ ಪ್ರಯೋಗಿಸಿ ಅನುಭಹೊಂದಿದರು ಮಧ್ಯ ಕರ್ನಾಟಕದ ಜನಮನಗಳ ಗೆದ್ದು, ನಾಟಿ ವೈದ್ಯರಾಗಿ ಪ್ರಸಿದ್ದರು ಅವರ ಸುದೀರ್ಘ ಸೇವಾ ಬದುಕಿನವಧಿಯಲ್ಲಿ ಸುಮಾರು ಸೂಮಾರು ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ನೀಡಿ ಒಬ್ಬ ನಿಷ್ಣಾತ ವೃತ್ತಿಪರ ವ್ಯಕ್ತಿಯೆಂದು ಹೆಸರುವಾಸಿಯಾದವರು.
ನಾಟಿ ವೈದ್ಯರು ವಂಶಪಾರಂಪರ್ಯವಾಗಿ ಬಂದ ಜ್ಞಾನವನ್ನು ಬಳಸಿ ಹಲವು ರೋಗಗಳಿಗೆ ಚಿಕಿತ್ಸೆ ನೀಡಿ ಗುಣವಾಗಿದೆ. ಒಂದು ಮನುಷ್ಯನಿಗೆ ರೋಗಗಳು ಬರುವುದು ಎಲ್ಲ ಕಾಲದಲ್ಲಿ ಇತ್ತು. ಅದಕ್ಕೆ ಯಾವ ರೋಗಕ್ಕೆ ಯಾವ ರೋಗಕ್ಕೆ ಯಾವ ಔಷಧಿ ಕೊಡಬಹುದು ಎಂಬುದು ಪ್ರಕೃತಿಯಲ್ಲಿ ಇರುವಂತಹ ಗಿಡಿಮೂಲಿಕೆ ಗಳು ಬೇರು, ಎಲೆ, ಬಲ್ಲಿ, ತೊಗಟೆ, ಮರ, ಕಾಯಿ ಹಣ್ಣು, ಅವುಗಳ ಜೊತೆ ಒಡನಾಟ ಇರಬಹುದು ಸೂಕ್ಷ್ಮವಾಗಿ ಗಮನಿಸುವುದು ಅವುಗಳನ್ನು ಧ್ಯಾನದ ಮನಸ್ಸಿನಿಂದ ನೋಡುತ್ತಿದ್ದರು. ಇಂತಹ ಕೈ.ಕಾಲು,ನೋವು ಬಂದಲ್ಲಿ ಇಂಥ ಬೇರಿನಿಂದ ಗುಣವಾಗುತ್ತದೆ ಎಂದು ತಿಳಿದು ನಾಟಿ ಔಷಧಿಯನ್ನು ಕೊಡುತ್ತಿದ್ದರು. ಕೆಲವು ವೈದ್ಯ ಪದ್ದತಿ ಯಲ್ಲಿ ಚಿಕಿತ್ಸೆ ಪಡೆದು ಫಲಕಾರಿಯಾಗದೆ ರೋಗಿಗಳು ಕೊನೆಗೆ ಮೊರೆ ಹೋಗುವುದು ನಾಟಿ ವೈದ್ಯ ಪದ್ದತಿಗೆ. ಈಗಲು ನಾಟಿ ಔಷಧಿಯನ್ನು ಹಲವಾರು ಮಂದಿ ಮಾಡುತ್ತಿದ್ದಾರೆ.
ಪರಂಪರೆಯಿಂದ ನಾಟಿ ವೈದ್ಯ ಅದರಲ್ಲೂ ಹರಪನಹಳ್ಳಿ ತಾಲೂಕು ಬಾಗಳಿ ಗ್ರಾಮದ ನಾಟಿ ವೈದ್ಯ ಹೊಸೂರಪ್ಪ ಪ್ರತಿಷ್ಠ ಮನೆತನ ತಂದೆಯಿಂದ ನಾಟಿ ವೈದ್ಯೆರಾಗಿ ಸಮಾಜಸೇವೆ ಮಾಡುತ್ತಾ ಆರ್ಯುವೇದ ನಾಟಿ ಔಷಧಿಯನ್ನು ಕೊಡಲು ಪ್ರಾರಂಬಿಸಿದ್ದಾರೆ. ಹೌದು, ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದ ಹೊಸೂರಪ್ಪ ನಾಟಿ ವೈದ್ಯ ಪದ್ದತಿಯಲ್ಲಿ ಸಮಾಜ ಸೇವೆ ಮಾಡುತ್ತಾ ಹಲವಾರು ಜನರ ಬದುಕಿನಲ್ಲಿ ಆಶಾಕಿರಣವಾಗಿದ್ದ ಇವರು ಕೈ, ಕಾಲು, ಸೊಂಟ, ಇತರೆ ಮೂಳೆಗಳು ನೋವೂ ಇದ್ದಲ್ಲಿ ತಕ್ಷಣವೇ ನಾಟಿ ಔಷಧಿಯನ್ನು ನೀಡಿ ಅವರಿಗೆ ಸಮಾದಾನಿಸುತ್ತಿದ್ದರು. ನೂಲು ಕಟ್ಟುವುದು ನಾಟಿ ಮದ್ದಿಗೆ ಬೇಕಾದ ಗಿಡಮೂಲಿಕೆ ಗಳು ಬೇರು ಮತ್ತು ಎಲೆಗಳ ಕಷಾಯ ಹಾಗೂ ಲೇಪ ಹಚ್ಚಿ ರೋಗಿಗಳನ್ನು ಗುಣಮುಖವಾಗಿ ಮಾಡಿರುತ್ತಾರೆ. ನಾಟಿ ವೈದ್ಯರಲ್ಲಿ ಇವರ ಕೈಗುಣದಿಂದ ಹಲವಾರು ರೋಗಗಳನ್ನು ಗುಣಪಡಿಸಿದ ತಂದೆ ತಾಯಿಗಳು ಕೆಲವು ವೈದ್ಯ ಪದ್ದತಿಯ ರೋಗಗಳು ಗುಣವಾಗದೆ ಮೊರೆಹೋಗುವುದು ನಾಟಿ ವೈದ್ಯ ಪದ್ದತಿಗೆ.
ಆದೇ ರೀತಿ ನಾಟಿ ಔಷಧಿಗೆ ಕರ್ನಾಟಕ ವಲ್ಲದೇ ಕೆರಳ, ಆಂದ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಇತರೆ ರಾಜ್ಯಗಳಿಂದ ಬಂದು ಜನರು ನಾಟಿ ಔಷಧಿ ಯನ್ನು ಪಡೆದುಕೊಂಡು ತುಂಬಾ ಜನ ನಾಟಿ ಚಿಕಿತ್ಸೆ ಪಡೆದು ಗುಣವಾಗಿ ಹೋಗಿದ್ದಾರೆ ಇವರು ಮುಖ್ಯವಾಗಿ ಆಂಜನೇಯ ದೇವರನ್ನು ಸ್ಮರಿಸುತ್ತಾ ಮತ್ತು ತಂದೆ- ತಾಯಿಗಳನ್ನು ಸ್ಮರಿಸುತ್ತಾ ಮನೆಯ ದೈವ ಶಕ್ತಿಗೆ ಕೈಮುಗಿದು ಚಿಕಿತ್ಸೆ ನೀಡಲು ಆರಂಬಿಸುತ್ತಾರೆ.
ಬಾಗಳಿ ಗ್ರಾಮದ ನಾಟಿ ವೈದ್ಯ ಇವರ ಕಾರ್ಯ ಮತ್ತು ಸಮಾಜ ಸೇವೆಯಕಾರ್ಯವನ್ನು ಮೆಚ್ಚಿ ಇಂಟರ್ ನ್ಯಾಷನಲ್ ಗ್ಲೋಬಲ್ ಪಿಸ್ಸ್ ಯುನಿವರ್ಸಿಟಿಯವರು ನಾಟಿ.ವೈಧ್ಯ ಬಿ.ಬಿ.ಹೊಸೂರಪ್ಪಗೆ ಅತ್ಯನ್ನತ ಇಂಟರ್ ನ್ಯಾಷನಲ್ ಯ್ಯಾಕ್ಚಿವೀರ್ ಕೌಂಸಲ್ ಪಿಸ್ಸ್ ಆಫ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ನಾನು ನನ್ನ ಕಾರ್ಯವನ್ನು ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ ನಮ್ಮ ಕುಟುಂಬ0ದ ವಂಶಾಪರ‍್ಯಾತವಾಗಿ ನಾಟಿ ವೈಧ್ಯ ಚಿಕಿತ್ಸೆ ಹಾಗೂ ಸಮಾಜ ಸೇವೆ, ರಾಜಕೀಯ ಕ್ಷೇತ್ರದಲ್ಲೋ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ ಈ ಪ್ರಶಸ್ತಿ ಪುರಸ್ಕಾರ ನನಗೆ ನೀಡಿದ್ದು ಸಂತೋಷವಾಗಿದೆ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಮಾಜ ಸೇವೆ ಮಾಡಿ ಜನರ ಋಣ ತೀರಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.