ಪ.ಜಾತಿ, ಪ.ವರ್ಗದ ಹಿತ ರಕ್ಷಣ ಸಮಿತಿ ಸಭೆ
ಪಾವಗಡ:ಪಟ್ಟಣದ ಡಾ.ಅಂಬೇಡ್ಕರ್ ಭವನ.ಕಣಿವೆ ನರಸಿಂಹ ಸ್ವಾಮಿ ದೇವಸ್ಥಾನ ಬಳಿ ಜು.30 ರಂದು ಬೆಳಿಗ್ಗೆ 11ಗಂಟೆಗೆ ಶಾಸಕ ವೆಂಕಟರಮಣಪ್ಪ ರವರ ಅಧ್ಯಕ್ಷತೆಯಲ್ಲಿ ಪ.ಜಾತಿಯ ಮತ್ತು ಪ.ವರ್ಗದ ಹಿತ ರಕ್ಷಣ ಸಮಿತಿ ಸಭೆಯನ್ನು ಹಮ್ಮಿಕೂಳ್ಳಲಾಗಿದೆ.
ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ನ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ಪ.ಜಾತಿಯ ಮತ್ತು ಪ.ವರ್ಗದ ಕಾರ್ಯಕ್ರಮಗಳ ಅನುಷ್ಟನದ ನಿಖರವಾದ ಅಂಕಿಅಂಶಗಳನ್ನು ಮಾಹಿತಿ ಹಾಗೂ ಹಿಂದಿನ ಸಭೆಯ ನಡವಳಿಕೆಗಳು ಅನುಪಾಲನಾ ವರದಿಯೂಂದಿಗೆ ಕಡ್ಡಾಯವಾಗಿ ಖುದ್ದು ಹಾಜರಾಗಲು ತಹಶೀಲ್ದಾರ್ ಕೆ.ಆರ್.ನಾಗರಾಜ್ ಸೂಚನೆ ನೀಡಿದ್ದಾರೆ.
ಸಭೆಗೆ ಅಧಿಕಾರಿಗಳು ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
