ಮನೆ ಬಾಗಿಲಿಗೇ ಬರಲಿದೆ ನೆಚ್ಚಿನ ಪುಸ್ತಕ
ನೀವು ಮಾಡಬೇಕಾದ್ದು ಜಸ್ಟ್ ಬುಕ್ ಶಾಪ್‌ಗೆ ಭೇಟಿ ನೀಡಿ
ಬಾಡಿಗೆ ಪಡೆಯಿರಿ, ಪುಸ್ತಕ ಓದಿ
ಬೇರೆ ಬೇರೆ ಭಾಷೆಗಳ ಪುಸ್ತಕಗಳೂ ಲಭ್ಯ
ವಿಶೇಷ ವರದಿ:ಅಪರ್ಣಾ ಎ.ಎಸ್. ಬೆಂಗಳೂರು
ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿರುವುದೇ ಹೆಚ್ಚು ಸುರಕ್ಷಿತವಾಗಿರುವಾಗ ಮನೆಯಲ್ಲಿಯೇ ಮನರಂಜನೆ ಪಡೆಯಲು ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ. ಆದರೆ ಪುಸ್ತಕ ಓದುವವರಿಗೆ ಲಾಕ್ ಡೌನ್ ಕೂಡಾ ವರದಾನವಾದ್ದು, ಈ ಸಂದರ್ಭದಲ್ಲಿ ಪುಸ್ತಕ ಓದುವ ಸಲುವಾಗಿ ಮನೆಗೇ ಬಾಗಿಲಿಗೇ ಪುಸ್ತಕ ನೀಡುವ ವ್ಯವಸ್ಥೆಯು ಪ್ರಾರಂಭವಾಗಿದೆ.
ಪುಸ್ತಕ ಪ್ರಿಯರಿಗೆ ಶಾಂತಿಯಿಂದ ನೆಚ್ಚಿನ ಪುಸ್ತಕಗಳನ್ನು ಓದಲು ಒಂದು ತಾಣ ನಗರದಲ್ಲಿದ್ದು ಬಸವನಗುಡಿಯ ಗೋಖಲೆ ಇನ್‌ಸ್ಟಿಟ್ಯೂಟ್ ಪಕ್ಕ ಹಾಯುವಾಗ ಸಿಗುವ ಜಸ್ಟ್ ಬುಕ್ ಶಾಪ್‌ನಲ್ಲಿ ಮನಸಿಗಿಷ್ಟವಾದ ಪುಸ್ತಕಗಳನ್ನು ಪಡೆದು ಓದಬಹುದಾಗಿದೆ. ಕೋವಿಡ್ ಸಂದರ್ಭದಲ್ಲಿ ಗ್ರಂಥಾಲಯ, ಪುಸ್ತಕ ಮಳಿಗೆಗಳು ತೆರೆದಿರದ ಹಿನ್ನೆಲೆ ಹೊರಗಡೆ ಹೋಗಿ ಪುಸ್ತಕ ಓದಲು ಹಾಗೂ ಖರೀದಿಸಲು ಸುರಕ್ಷತೆಯ ಕಾರಣದಿಂದಾಗಿ ಜಸ್ಟ್ ಬುಕ್ ಮುಖಾಂತರ ಪುಸ್ತಕಗಳನ್ನು ಪಡೆದು ಓದಬಹುದಾಗಿದೆ.
ಪುಸ್ತಕವನ್ನು ಬಾಡಿಗೆ ಪಡೆಯಬಹುದು:ನಮ್ಮ ನೆಚ್ಚಿನ ಪುಸ್ತಕಗಳನ್ನು ಬಾಡಿಗೆ ಪಡೆದು ಓದುವ ಅವಕಾಶಗಳನ್ನು ಈ ಜಸ್ಟ್ ಬುಕ್ ಹೌಸ್ ನೀಡುತ್ತಿದೆ. ಕರೋನಾ ಕಾಲದಲ್ಲಿ ಹೊರಗಡೆ ಸುತ್ತಲು ಅಂಜುವವರು ಪ್ಲೇ ಸ್ಟೋರ್‌ನಿಂದ ಜಸ್ಟ್ ಬುಕ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಅವರ ವೆಬ್‌ಸೈಟ್‌ಗೆ ಹೋಗಿ ಸಬ್‌ಸ್ಕ್ರೈಬ್ ಮಾಡಿಕೊಂಡು ಚಂದಾದಾರರಾಗಿ ನೆಚ್ಚಿನ ಪುಸ್ತಕಗಳ ಬಗ್ಗೆ ಹುಡುಕಿ ರಿಸರ್ವ್ ಮಾಡಿಕೊಂಡರೆ ಜಸ್ಟ್ ಬುಕ್ ನವರೇ ಆ ಪುಸ್ತಕಗಳನ್ನು ಮನೆಯ ವರೆಗೆ ತಂದುಕೊಟ್ಟು ಹೋಗುತ್ತಾರೆ. ಈ ಪುಸ್ತಕಗಳನ್ನು ಎಷ್ಟು ದಿನ ಬೇಕಾದರು ಇಟ್ಟುಕೊಂಡು ಓದಬಹುದಾಗಿದೆ.
ಇನ್ನು ಈ ಪುಸ್ತಕಗಳನ್ನು ಬಾಡಿಗೆ ಪಡೆದ ಮರುದಿನವೇ ಓದಿ ಮುಗಿಸದರೆ ಜಸ್ಟ್ ಬುಕ್‌ನವರೇ ಬಂದು ಈ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಾರೆ.ಇನ್ನು ಇದಕ್ಕೆ ನಾವು ಕೊಡಬೇಕಾದುದು300ರುಪಾಯಿ ಮಾತ್ರ. ಕಳೆದ ನಾಲ್ಕು ವರ್ಷಗಳಿಂದ ಸುರೇಶ್ ನರಸಿಂಹ ಅವರು ಜಸ್ಟ್ ಬುಕ್ ಮೂಲಕ ಸಾವಿರಾರು ಜನರಿಗೆ ಪುಸ್ತಕ ಹಂಚಿದ್ದಾರೆ. ಮತ್ತೊಂದು ವಿಶೇಷವೆಂದರೆ ಇವರು ಹೊಸ ಲೇಖಕರನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಾರೆ. ನಿಮ್ಮ ವಯಸ್ಸು, ಆಸಕ್ತಿಯ ವಿಷಯ ತಿಳಿಸಿದರೆ ಹೊಸ ಪುಸ್ತಕಗಳ ಬಗ್ಗೆ ಅಪ್‌ಡೇಟ್ ಮಾಡುತ್ತಾರೆ. ಮುದ್ದಣನ ಕೃತಿಗಳಿಂದ ಹಿಡಿದು ಇತ್ತೀಚಿನವರ ಬರವಣಿಗೆಗಳ ತನಕ ಇಲ್ಲಿ ಹೆಚ್ಚಿನೆಲ್ಲ ಕೃತಿಗಳೂ ಇಲ್ಲಿವೆ.
೬೦ ಮಳಿಗೆಗಳು:ಜಸ್ಟ್ ಬುಕ್ ಅವರದ್ದೇ 60ಕ್ಕೂ ಹೆಚ್ಚು ಮಳಿಗೆಗಳು ಇರುವುದರಿಂದ ಪುಸ್ತಕರಗಳು ನಿಗದಿತ ಅವಽಗಿಂತ ವೇಗವಾಗಿ ನಿಮ್ಮ ಕೈ ಸೇರಲಿದೆ.ಜತೆಗೆ ನೀವು ಓದಿ ಮುಗಿಸಿದ ನಂತರ ಆ ಪುಸ್ತಕವನ್ನು ಅವರ ಸಿಬ್ಬಂದಿಯೇ ಬಂದು ವಾಪಸ್ ಪಡೆದುಕೊಳ್ಳುತ್ತಾರೆ. ಜಸ್ಟ್‌ಬುಕ್‌ನಲ್ಲಿ ಕನ್ನಡ, ತಮಿಳು, ಇಂಗ್ಲಿಷ್, ಹಿಂದಿ, ತೆಲುಗು, ಮಲಯಾಳಿಯಂ ಸೇರಿದಂತೆ ಎಲ್ಲಾ ಭಾಷೆಯ ಪುಸ್ತಕಗಳು ಸಹ ಲಭ್ಯವಿರಲಿದೆ. 15 ಲಕ್ಷಕ್ಕೂ ಅಧಿಕ ಪುಸ್ತಕಗಳ ಸಂಗ್ರಹವನ್ನು ಜಸ್ಟ್ ಬುಕ್ ಹೊಂದಿದ್ದು, ಓದುಗರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಎಸ್.ಎಲ್. ಭೈರಪ್ಪ, ಮಕ್ಕಳ ಬುಕ್‌ಗಳಿಗೆ ಬೇಡಿಕೆ ಸದ್ಯ 1-16 ವರ್ಷದವರೇ ಹೆಚ್ಚಾಗಿ ಜಸ್ಟ್ ಬುಕ್ ನಲ್ಲಿ ಪುಸ್ತಕ ಓದುತ್ತಿರುವವರಾಗಿದ್ದು, ಮಕ್ಕಳ ಸಾಹಿತ್ಯವೇ ಹೆಚ್ಚು ಬೇಡಿಕೆ ಹೊಂದಿದೆ. ಇದರೊಂದಿಗೆ ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಪುಸ್ತಕಕ್ಕೆ ಹೆಚ್ಚಿನ ಬೇಡಿಕೆ ಇದೆಯಂತೆ. ಕಾಮಿಕ್ಸ್, ಇಂಗ್ಲಿಷ್, ಕನ್ನಡ ಕಥಾ ಸಂಕಲನಕ್ಕೆ, ಇಂಗ್ಲಿಷ್‌ನಲ್ಲಿ ಹ್ಯಾರಿಪಾಟರ್ ಪುಸ್ತಕ್ಕೆ ಬೇಡಿಕೆ ಹೆಚ್ಚಿದೆ. ಈ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಸಾಕಷ್ಟು ಜನರಿಗೆ ಪುಸ್ತಕ ಓದುವ ಗೀಳು ಹೆಚ್ಚಾಗಿದೆ.
ಬೆಂಗಳೂರು, ಮೈಸೂರು, ಚೆನ್ನೈ ಮೊದಲಾದೆಡೆ ಜಸ್ಟ್ ಬುಕ್ ಪುಸ್ತಕಗಳನ್ನು ಬಾಡಿಗೆಗೆ ಪಡೆಯಬಹುದು. ಜಿಲ್ಲಾ ಕೇಂದ್ರಗಳಲ್ಲಿ ಪುಸ್ತಕ ಇದ್ದವರ ಬಳಿ ಪಡೆದು ಅಗತ್ಯ ಇದ್ದವರಿಗೆ ತಲುಪಿಸುವ ಯೋಜನೆಯೂ ಇದೆ. ಜಸ್ಟ್‌ಬುಕ್ ವ್ಯಾಲೆಟ್‌ನಲ್ಲಿ ಗ್ರಾಹಕರು ಹಾಕುವ 500 ರು. ಶ್ಯೂರಿಟಿ ಆಗಿರುತ್ತದೆ. ಇಷ್ಟು ಹಣ ಇಟ್ಟು ಸಾವಿರಾರು ರು. ಪುಸ್ತಕ ತೆಗೆದುಕೊಂಡರೂ ಖುಷಿಯಿಂದಲೇ ನೀಡುತ್ತಾರೆ.
***
ಇನ್ನು ವಿಶೇಷ ಚೇತನರು ಹಾಗೂ ಕನ್ನಡ ಓದಲು ಬಾರದವರು ಆದರೆ ಕನ್ನಡ ತಿಳಿದಿರುವವರು ಕೂಡಾ ಜಸ್ಟ್ ಬುಕ್ ಮುಖಾಂತರ ಪುಸ್ತಕಗಳನ್ನು ಪಡೆದು ಕೊಳ್ಳಬಹುದಾಗಿದೆ. ಓದಲು ಸಾಧ್ಯವಾಗದವರು ಮತ್ತು ಓದುವವರು ಕನ್ನಡವನ್ನು ಅರ್ಥಮಾಡಿಕೊಳ್ಳುವ ಮಕ್ಕಳು ಅಥವಾ ವಯಸ್ಕರು ಆದರೆ ಓದಲು ಸಾಧ್ಯ ವಿಲ್ಲ ಅವರು ಲೈವ್ ಸೆಷನ್‌ಗೆ ಸೇರಬಹುದಾಗಿದೆ. ಅಲ್ಲಿ ತಜ್ಞರು ಕಥೆಯನ್ನು ಓದುತ್ತಾರೆ ಹಾಗೂ ಇತರರು ಕೇಳುತ್ತಾರೆ ಮತ್ತು ಸಂವಹನ ನಡೆಸುತ್ತಾರೆ. ನಾನು ಪುಸ್ತಕ ಪ್ರಿಯ. ನನ್ನಂತೆ ಪುಸ್ತಕ ಪ್ರೀತಿ ಇರುವವರಿಗೆ ಬುಕ್ಸ್ ತಲುಪಿಸೋಕೆ ಖುಷಿ ಇದೆ. ಜನರಲ್ಲಿ ಓದುವ ಅಭಿರುಚಿ ಬೆಳೆಸೋದರಲ್ಲಿ ಜಸ್‌ಟ್ ಬುಕ್‌ನಸಾರ್ಥಕ್ಯ ಅಡಗಿದೆ.
– ಸುರೇಶ್ ನರಸಿಂಹ, ಜಸ್ಟ್‌ಬುಕ್ ಮುಖ್ಯಸ್ಥ