ರಾಜ್ಯದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಗೆ ಸಿ ಎಂ ಆದೇಶ: ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಹರ್ಷ
ಪಾವಗಡ:ಕೋವೀಡ್ – 19ರ ಜನವರಿ 2020 ರಿಂದ ತಡೆಹಿಡಿಯಲಾಗಿದ್ದ ತುಟ್ಟಿಭತ್ಯೆ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್ 19 ಸಂಕಷ್ಟದಿಂದ 2020ರಿಂದ ಇತ್ತೀಚೆಗೆ ರಾಜ್ಯದ ಸಮಸ್ತ ನೌಕರರಿಗೆ ಕೊಡಬೇಕಾದ ತುಟ್ಟೆಭತ್ಯೆ ಯನ್ನು ಆರ್ಥಿಕ ಸಂಕಷ್ಟದ ಕಾರಣ ಕೊಟ್ಟಿರುವುದಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರವು ತಮ್ಮ ನೌಕರರಿಗೆ ತುಟ್ಟಿಭತ್ಯೆ ಘೋಷಿಸಿದ ತಕ್ಷಣ ರಾಜ್ಯ ರಾಜ್ಯ ಸರ್ಕಾರಿ ನೌಕರರ ಆತಂಕಕ್ಕೆ ಒಳಗಾಗಿದ್ದು ಸತ್ಯ. ಇದನ್ನು ಮನಗಂಡ ಸರ್ಕಾರಿ ನೌಕರರ ಸಂಘವು ಬಾಕಿ ಇರುವ ತುಟ್ಟಿಭತ್ಯೆ ಬಿಡುಗಡೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಘನ ರಾಜ್ಯ ಸರ್ಕಾರವು ರಾಜ್ಯದ 6 ಲಕ್ಷ ಸರ್ಕಾರಿ ನೌಕರರು, ಸುಮಾರು 4.5 ಲಕ್ಷ ಪಿಂಚಣಿದಾರರು, 3 ಲಕ್ಷ ನಿಗಮ ಮಂಡಳಿಯ ನೌಕರ ರಿಗೆ ಶೇ.11 ಪುಟ್ಟಿಭತ್ಯೆ ಮಂಜೂರು ಮಾಡಲು ಆರ್ಥಿಕ ಇಲಾಖೆಯವರಿಗೆ ಆದೇಶಿಸಿರುತ್ತದೆ.
ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿ, ಸಚಿವ ಸಂಪುಟದ ಸಚಿವರಿಗೆ ಹಾಗೂ ಉನ್ನತ ಮಟ್ಟದ ಅಧಿಕಾರಿಗಳಿಗೆ ಮತ್ತು ಮುಖ್ಯವಾಗಿ ಸಿ ಎಸ್ ಷಡಕ್ಷರಿರವರಿಗೆ ಮತ್ತು ತಂಡದವರಿಗೆ ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು, ಪಾವಗಡ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ಎಸ್ಸಾರ್ ಪಾಳ್ಯದನ್ಮಂತ್ರಾಯ, ತಾಲ್ಲೂಕು ಸಂಘದ ಅಧ್ಯಕ್ಷ ಚಂದ್ರಶೇಖರ ರಾವ್, ತಾಲ್ಲೂಕು ಕಾರ್ಯದರ್ಶಿ ಲಕ್ಷ್ಮೀನಾರಾಯಣ, ರಾಜ್ಯ ಕಾರ್ಯಕಾರಿಣಿಯ ಸದಸ್ಯರಾದ ಹೆಚ್ ನಾಗರಾಜು ರವರು ಸಮಸ್ತ ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಅಖಂಡ ರಾಜ್ಯ ಸರ್ಕಾರಿ ನೌಕರರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.