ಸೇವಾನಗರ ಗ್ರಾಮದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ
ಹರಪನಹಳ್ಳಿ:ತಾಲೂಕಿನ ಸೇವಾನಗರ ಗ್ರಾಮದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದು ಗ್ರಾಮಸ್ಥರಿಂದ ಶ್ರೀ ಕೃಷ್ಣನ ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಂಜಾರ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಟ್ಟ ಮಹಿಳೆಯರು ಪುರಷರು, ಯುವಕರು, ಮಕ್ಕಳು, ಹಿರಿಯರು ಕಿರಿಯರು ಎನ್ನುವ ಭೇದ ಭಾವ ಇಲ್ಲದೇ ಸಮುದಾಯದ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.
ಗ್ರಾಮದ ಮುಖಂಡರಾದ ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ತಿಮ್ಮನಾಯ್ಕ್, ಹಟ್ಟಿ ನಾಯಕರಾದ ಕೃಷ್ಣ ನಾಯ್ಕ್, ನಾಗರಾಜ್ ನಾಯ್ಕ್. ಠಾಕ್ರೆ ನಾಯ್ಕ್, ಹನುಮಂತ ನಾಯ್ಕ್, ಶೆಟ್ಟಿ ನಾಯ್ಕ್, ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಪ್ರವೀಣ್ ಕುಮಾರ್, ಟಿ.ರುಕನಾಯ್ಕಾ, ಗೊಂಗಡಿ ಮಂಜ್ಯಾ ನಾಯ್ಕ್ ಲಾವಡಿ, ಕೃಷ್ಣನಾಯ್ಕ್ ಸೇರಿದಂತೆ ಮತ್ತಿತರರು ಈ ಕೃಷ್ಣ ಜನ್ಮಾಷ್ಟಮಿಯಲ್ಲಿ ಮಿಂದೆದ್ದರು.