ಹೈನುಗಾರಿಕೆಗೆ ಒತ್ತು ನೀಡಿದರೆ ನಿರುದ್ಯೋಗ ಸಮಸ್ಯೆ ಪರಿಹಾರ
ಪಾವಗಡ :ಗ್ರಾಮೀಣ ಪ್ರದೇಶದ ರೈತರು ಮತ್ತು ವಿದ್ಯಾವಂತ ನಿರುದ್ಯೋಗಿ ಯುವಕರು ಹೈನುಗಾರಿಕೆಗೆ ಒತ್ತು ನೀಡಿದರೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬಹುದು ಹಾಗೂ ಆರ್ಥಿಕವಾಗಿಯೂ ಸಹ ಸದೃಢರಾಗಬಹುದು ಎಂದು ಮಾಜಿ ಸಚಿವ ಹಾಲಿ ಶಾಸಕರಾದ ವೆಂಕಟರಮಣಪ್ಪ ತಿಳಿಸಿದರು.
ತಾಲ್ಲೂಕಿನ ಬೆಳ್ಳಿಬಟ್ಲು ಗ್ರಾಮದಲ್ಲಿ  ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಶುಕ್ರವಾರ 2500 ಲೀಟರ್ ಸಾಮರ್ಥ್ಯದ ನೂತನ ಬಿಎಂಸಿ ( ಬಲ್ಕ್ ಮಿಲ್ಕ್  ಸೆಂಟರ್) ಘಟಕವನ್ನು ಶಾಸಕರಾದ  ವೆಂಕಟರವಣಪ್ಪ ನವರು ಉದ್ಘಾಟನೆ ಮಾಡಿ  ನಂತರ ಮಾತನಾಡುತ್ತಾ, ಬರ ಪೀಡಿತ ಪ್ರದೇಶವಾದ ನಮ್ಮ ತಾಲೂಕಿನಲ್ಲಿ ಸಕಾಲಕ್ಕೆ ಮಳೆ ಬೆಳೆಯಾಗದೆ ಕೃಷಿಯಿಂದ   ಲಾಭವಿಲ್ಲ ಎಂದು ಭಾವಿಸಿದ ರೈತರು ಇತ್ತೀಚಿಗೆ ಹೈನುಗಾರಿಕೆ ಯಲ್ಲಿ ಆಸಕ್ತಿ ತೋರಿಸುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.
ನಮ್ಮ ತಾಲೂಕಿನಲ್ಲಿ 65 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಮುಂದಿನ ದಿನಗಳಲ್ಲಿ  100 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕೂಟಗಳು ರಚನೆಯಾಗ ಬೇಕು. ಹೈನುಗಾರಿಕೆಯಿಂದಲೂ ಹಿಂದೆ ಸರಿಯುವುದನ್ನು ತಪ್ಪಿಸಲು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವುದು ಹೇಗೆ ಎಂಬ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಪಶು ಆಹಾರಗಳನ್ನು ರಿಯಾಯಿತಿ ದರದಲ್ಲಿ ನೀಡುವುದರ ಮೂಲಕ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿಡಗಲ್ ವಾಲ್ಮೀಕಿ ಪೀಠಾಧ್ಯಕ್ಷರಾದ ಸಂಜಯ್ ಕುಮಾರ್ ಸ್ವಾಮೀಜಿ , ಮಾಜಿ ಶಾಸಕರಾದ ಕೆಎಂ ತಿಮ್ಮರಾಯಪ್ಪ , ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾದ ಮಹಾಲಿಂಗಪ್ಪ , ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಚನ್ನಮಲ್ಲಪ್ಪ , ಬೆಳ್ಳಿ ಬಟ್ಟಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ರೆಡ್ಡಿ , ಶ್ರೀಮತಿ ಎಸ್.ಸಿ.ಸೌಮ್ಯ ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು ಶ್ರೀಮತಿ ಸುನಿತ ವಿಸ್ತರಣಾಧಿಕಾರಿ. ತು.ಹಾ.ಒ. ಶ್ರೀ ಕ್ಷೇತ್ರ ಯೋಜನಾಧಿಕಾರಿಗಳಾದ ನಂಜುಂಡಿ, ತುಮಕೂರು ಹಾಲು ಒಕ್ಕೂಟದ ಪಶುವೈದ್ಯರಾದ ಕಿಶೋರ್ ಕುಮಾರ್ ರೆಡ್ಡಿ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾಗ್ಯಮ್ಮ, ಉಪಾಧ್ಯಕ್ಷರಾದ ಮಾರಕ, ಸದಸ್ಯರಾದ ಅಕ್ಕಮಹಾದೇವಿ, ರಾಮಪ್ಪ, ಮಾರಪ್ಪ, ಜಯಣ್ಣ, ಪಾಲಯ್ಯ, ಜಯರಾಮಪ್ಪ,  ಓಬಯ್ಯ, ಓಬಳ ನಾಯಕ ಹಾಗೂ ಮುಂತಾದವರು ಉಪಸ್ಥಿತರಿದ್ದರು.