ಚಿರತೆ ದಾಳಿ: ರೈತ ಗಂಭೀರ
ಚಿಕ್ಕನಾಯಕನಹಳ್ಳಿ:ತಾಲೂಕಿನ ರಾಮನಹಳ್ಳಿ ಗ್ರಾಮದ ಪುಟ್ಟಯ್ಯ (೫೪) ಚಿರತೆದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮಧ್ಯಾಹ್ನ ಹೊಲದಲ್ಲಿ ಕೆಲಸ ಮಾಡುತಿದ್ದಾಗ ಚಿರತೆದಾಳಿ ನಡೆದಿದ್ದು, ಜನರ ಕೂಗಾಟದಿಂದ ಚಿರತೆ ಓಡಿಹೋಗಿದ್ದು, ಗಾಯಾಳು ಪುಟ್ಟಯ್ಯನಿಗೆ ಚಿಕ್ಕನಾಯಕನ ಹಳ್ಳಿ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಮಂಗಳವಾರ ಸಂಜೆ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.